ಬೆಂಗಳೂರು ಗ್ರಾಮಾಂತರ

ಬಚ್ಚೇಗೌಡರ ಗೆಲವು ಖಚಿತ: ಬಿಜೆಪಿ ಮುಖಂಡರ ವಿಶ್ವಾಸ

Published On :

ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಯೋಜನೆಗಳನ್ನು ತಂದು ದುಡಿದಿರುವ ಸಚಿವ ಬಿ.ಎನ್.ಬಚ್ಚೇಗೌಡರು ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲ್ಲಿದ್ದು, ಅವರ ಗೆಲವು ಖಚಿತ ಎಂದು ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೂಲಿಬೆಲೆ ಸಮೀಪದ ಯನಗುಂಟೆಯಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಚ್ಚೇಗೌಡರ ಜೊತೆ ಪಾಲ್ಗೊಂಡಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಮುನಿಯಪ್ಪ ಹಾಗೂ ಮತ್ತಿತರೆ ಮುಖಂಡರು ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅಭಿವೃದ್ಧಿಪರ ಶಾಸಕ ಎಂದು ಪ್ರಧಾನವಾಗಿ ಕೇಳಿ ಬರುತ್ತಿರುವ ಹೆಸರು ಬಚ್ಚೇಗೌಡರದು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ಮೇಲೆ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ.
ಜನಪರ ಕೆಲಸಗಳನ್ನು ಮೆಚ್ಚಿ ತಾಲೂಕಿನಲ್ಲಿ ಕಳೆದ 2010-11 ರಲ್ಲಿ ನಡೆದ ಜಿಪಂ ಮತ್ತು ತಾಪಂ ಚುನಾವಣಿಯಲ್ಲಿ ಕ್ಷೇತ್ರದ 5 ಜಿಪಂ ಕ್ಷೇತ್ರ,12 ತಾಪಂ ಕ್ಷೇತ್ರಗಳಲ್ಲಿ ಬಚ್ಚೇಗೌಡರ ಬಿಜೆಪಿ ಬೆಂಬಲಿತರು ಜಯಗಳಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಯೋಜನಾ ಪ್ರಾಧಿಕಾರ, ಪಿಎಲ್ಡಿ ಬ್ಯಾಂಕ್, ಸೇರಿದಂತೆ ತಾಲೂಕಿನ 26 ಗ್ರಾಪಂಗಳಲ್ಲಿ 21 ಗ್ರಾಪಂ  ಬಿಜೆಪಿ ಬೆಂಬಲಿತ ಆಡಳಿತದಲ್ಲಿವೆ ಈ ಹಿನ್ನೆಲೆಯಲ್ಲಿ ಬಚ್ಚೇಗೌಡರು ಗೆಲವು ಸಾಧಿಸಲಿದ್ದಾರೆ ಅವರು ಅಭಿಪ್ರಾಯಪಟ್ಟರು. ತಾಪಂ ಸದಸ್ಯೆ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.