ಜೆಡಿಎಸ್ನದ್ದು ಅಭಿವೃದ್ಧಿ ಮಂತ್ರ, ಕಾಂಗ್ರೆಸ್ ನಾಯಕರದು ಶೋಕಿ ಮಂತ್ರ
ಕ.ಪ್ರ.ವಾರ್ತೆ ಮಾಗಡಿ ಮಾ.31
ಜೆಡಿಎಸ್- ಕಾಂಗ್ರೆಸ್ಗೆ ಯಾವಾಗಲೂ ಸಂಬಂಧ ಆಗಬರುವುದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಟೀಕಾ ಪ್ರಹಾರ ನಡೆಸಿದರು.
ಅವರು ಇಲ್ಲಿನ ಬೈಚಾಪುರ ಬಳಿ ಏರ್ಪಡಿಸಿದ್ದ ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಸಮಾವೇಶದ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿ, ಜೆಡಿಎಸ್ ನಾಯಕರದ್ದು ಅಭಿವೃದ್ಧಿ ಮಂತ್ರವಾದರೆ, ಕಾಂಗ್ರೆಸ್ ನಾಯಕರದು ಶೋಕಿ ಮಂತ್ರವಾಗಿದೆ ಎಂದು ಲೇವಡಿ ಮಾಡಿದರು.
ಎಸ್ಸಿ,ಎಸ್ಟಿ ಸಮುದಾಯದವರು ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿವೆ. ಮಾಗಡಿಯಲ್ಲಿ ಏ.7 ರಂದು ನಡೆಯಲಿರುವ ಎಸ್ಸಿ, ಎಸ್ಟಿ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಲು ಇತರೆ ವರ್ಗದವರು ಅವರೊಂದಿಗೆ ಕೈಜೋಡಿಸಬೇಕು. ಎಸ್ಸಿ, ಎಸ್ಟಿ ಸಮಾವೇಶ ಯಶಸ್ವಿಯಾದರೆ ಜೆಡಿಎಸ್ ಗೆಲವು ಖಚಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಎಚ್.ಸಿ. ಬಾಲಕೃಷ್ಣ, ಜೆಡಿಎಸ್ ಎಲ್ಲಾ ವರ್ಗಗಗಳಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುತ್ತದೆ. ಅಲ್ಪಸಂಖ್ಯಾತರಿಗೂ ಕೊಟ್ಟ ಮಾತಿನಂತೆ ಶಾದಿ ಮಹಲ್ ನಿರ್ಮಾಣಕ್ಕೆ ನಿವೇಶನ ನೀಡಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಗಿದೆ. ಕುದೂರಿನಲ್ಲಿಯೂ ಶಾದಿ ಮಹಲ್ ಕಟ್ಟಿಸಲು ತೀರ್ಮಾನಿಸಿದ್ದೇನೆ. ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ಚುನಾವಣೆಯಲ್ಲಿ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕಾಗಿದೆ. ಉಳಿಸಿಕೊಳ್ಳುತ್ತಾರೆ ಎಂಬುದಕ್ಕೆ ಸಭೆ ಆಗಮಸಿರುವ ಅಲ್ಪಸಂಖ್ಯಾತರ ಜನಸಂಖ್ಯೆಯ ಸಾಕ್ಷಿಯಾಗಿದ್ದು, ನನಗೆ ಸಂತೋಷ ತಂದಿದೆ ಎಂದರು.
ಏ.9 ರಂದು ಅಲ್ಪಸಂಖ್ಯಾತರ ಮುಖಂಡ ಜಮೀರ್ ಅಹಮದ್ ಖಾನ್ ಮಾಗಡಿಗೆ ಆಗಮಿಸಲಿದ್ದು, ಅವರೊಂದಿಗೆ ಸಮುದಾಯದ ಅಭಿವೃದ್ಧಿ ಕುರಿತು ಚರ್ಚಿಸುತ್ತೇನೆ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಜಿ.ಪಂ. ಸದಸ್ಯ ಧನಂಜಯ, ವಿಜಯಕುಮಾರ್, ತಾ.ಪಂ. ಅಧ್ಯಕ್ಷ ವೆಂಕಟೇಶ್,ಮಾಜಿ ಅಧ್ಯಕ್ಷ ಕಾಂತರಾಜು, ಜಿ.ವಿ.ರಾಮಣ್ಣ, ರೂಪೇಶ್, ಕಲ್ಯಾ ಚಿಕ್ಕಣ್ಣ, ಯೂಸಿಕ್, ಫೈರೋಜ್, ಮುನೀರ್, ಜಮೀರ್, ರಿಯಾಜ್, ಗಂಗಾಧರ್, ರಾಜು ವೆಂಕಟೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

