ಬಿಜೆಪಿ ದುರಾಡಳಿತದಿಂದಾಗಿ ಕರ್ನಾಟಕ ರಾಜ್ಯಕ್ಕೆ ಕುಖ್ಯಾತಿ
ಕ.ಪ್ರ.ವಾರ್ತೆ ಆನೇಕಲ್ ಮೇ.2
ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯಾಗಿದ್ದ ಕರ್ನಾಟಕ ಬಿಜೆಪಿಯ ದುರಾಡಳಿತದಿಂದಾಗಿ ಕುಖ್ಯಾತಿಗೊಳಗಾಗಿದೆ. ಐಟಿ ಬಿಟಿಯ ಪ್ರಖ್ಯಾತಿ ಮರಳಿ ಪಡೆಯಲು ಕಾಂಗ್ಪೆಸ್‌ಗೆ ಮತ ನೀಡಿ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ, ಮೆಗಾಸ್ಟಾರ್ ಚಿರಂಜೀವಿ ಮನವಿಮಾಡಿದ್ದಾರೆ.
ಅವರು ಆನೇಕಲ್ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ರೋಡ್ ಶೋನಲ್ಲಿ ಅಭ್ಯರ್ಥಿ ಬಿ. ಶಿವಣ್ಣ ಪರಮತಯಾಚಿಸಿ, ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಜೈಲು ಸೇರಿದ ನಾಯಕರನ್ನು ಮತ್ತೆ ಏತಕ್ಕೆ ಆರಿಸಬೇಕು. ಅವರನ್ನು ರಾಜಕಾರಣದಿಂದ ದೂರವಿರಿಸಬೇಕೆಂದರು.
ತಿರಸ್ಕರಿಸಿ: ಜೆಡಿಎಸ್ ಜೊತೆ ಸರ್ಕಾರ ನಡೆಸಿದಾಗಲೂ ಬಿಜೆಪಿ ಅಧಿಕಾರದ ಲಾಲಸೆಗೆ ಒಳಗಾದುದನ್ನು ಜನ ಮರೆತಿಲ್ಲ. ಪೂರ್ಣ ಬೆಂಬಲವಿಲ್ಲದ ಬಿಜೆಪಿ ಆಪರೇಷನ್ ಕಮಲ ಎಂಬ ಕೆಟ್ಟ ಸಂಪ್ರದಾಯದಿಂದ ಕಲುಷಿತ ರಾಜಕಾರಣಕ್ಕೆ ನಾಂದಿ ಹಾಡಿದ್ದು ಬಿಜೆಪಿಯನ್ನು ತಿರಸ್ಕರಿಸಬೇಕು ಎಂದರು.ಕಳೆದ 2 ಅವಧಿಯಲ್ಲಿ ರಾಜ್ಯ ಆರ್ಥಿಕವಾಗಿ ಸೊರಗಿದೆ. ರಾಜ್ಯ ಮತ್ತೆ ತನ್ನ ವೈಭವವನ್ನು ಮರಳಿ ಪಡೆಯಲು ಪ್ರವಾಸೋದ್ಯಮ ಸಚಿವನಾಗಿ ಎಲ್ಲ ಸಹಕಾರ ನೀಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಎಲ್ಲ ಸಾಧ್ಯತೆಗಳನ್ನು ಪತ್ರಿಕೆಗಳ ಮೂಲಕ ಅರಿತಿದ್ದೇನೆ. ಉತ್ತಮ ಆಡಳಿತ ಸಹೋದರತೆ, ಸಮಾನತೆಗಾಗಿ ಕಾಂಗ್ರೆಸ್ ಗೆಲ್ಲಿಸಬೇಕೆಂದು ಕೋರಿದರು.
ಮಾಜಿ ಸಚಿವ ಬಿಟಿಎಂ ಶಾಸಕ ಆರ್. ರಾಮಲಿಂಗಾರೆಡ್ಡಿ ಮಾತನಾಡಿ ಬಿಜೆಪಿ ಆಡಳಿತದಲ್ಲಿ ಆನೇಕಲ್ ಯಾವುದೇ ಪ್ರಗತಿ ಕಾಣಲಿಲ್ಲ ಎಂದರು. ಅಭ್ಯರ್ಥಿ ಶಿವಣ್ಣ ಕಾಂಗ್ರೆಸ್‌ಗೆ ಮತನೀಡಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

