ಬೆಂಗಳೂರು ಗ್ರಾಮಾಂತರ

7 ಲಕ್ಷ ಮೌಲ್ಯದ ಸೀರೆ, 350 ಟೀ ಶರ್ಟ್ ವಶ

Published On :

ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಮೇ 2
ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನ ನಡುವೆಯೂ ಜಿಲ್ಲೆಯಲ್ಲಿ ಮತದಾರರಿಗೆ ಉಡುಗೊರೆಗಳ ಮೂಲಕ ಆಮಿಷಗಳನ್ನೊಡ್ಡಿ ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತಿಗೆ ಏನೂ ಕಮ್ಮಿ ಇಲ್ಲ. ಕೆಲ ಪ್ರಕರಣಗಳು ಬಯಲಿಗೆ ಬರುತ್ತಿದ್ದರೆ, ಅನೇಕ ಪ್ರಕರಣಗಳು ಕದ್ದುಮುಚ್ಚಿ ನಡೆಯುತ್ತಲೇ ಇವೆ.
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ಪಟ್ಟಣದ ಹೊರವಲಯದ ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚಿಗೆ ನಡೆಯುತ್ತಿವೆ. ಗುರುವಾರ ಸಹ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಆಂಧ್ರದ ಧರ್ಮಾವರಂನಿಂದ ಬಾಗೇಪಲ್ಲಿ ಕಡೆಗೆ ವಾಹನದಲ್ಲಿ ಸುಮಾರು 7 ಲಕ್ಷ ಮೌಲ್ಯದ ಸುಮಾರು 170ಕ್ಕೂ ಹೆಚ್ಚು ರೇಷ್ಮೆ ಸೀರೆಗಳನ್ನು ಅಕ್ರಮವಾಗಿ ಸಾಗಣೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ಕಾರು ಮತ್ತು ಚಾಲಕ ಸಾಯಿನಾಥ್ ಎಂಬವರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಟೀ ಶರ್ಟ್ ವಶ:  ಚಿಕ್ಕಬಳ್ಳಾಪುರ ನಗರಸಭಾ ಸದಸ್ಯರೊಬ್ಬರ ಮನೆಯಲ್ಲಿ ಮತದಾರರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ಸುಮಾರು 350 ಕ್ಕೂ ಟೀ ಶರ್ಟ್‌ಗಳನ್ನು ಉಪ ವಿಭಾಗಾಧಿಕಾರಿ ಶಾಂತಲಾ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ನಗರದ ಪ್ರಶಾಂತನಗರದ ನಗರಸಭಾ ಸದಸ್ಯ ಗಜೇಂದ್ರ ಮನೆಯ ಮೇಲೆ ಉಪ ವಿಭಾಗಾಧಿಕಾರಿ ಶಾಂತಲಾ ಅವರು ದಾಳಿ ನಡೆಸಿದಾಗ ಸಂಹಿತೆಗೆ ವಿರುದ್ಧವಾಗಿ ಟೀ ಶರ್ಟ್‌ಗಳನ್ನು ಇಡಲಾಗಿತ್ತು. ಹೆಚ್ಚುವರಿ ಕರಪತ್ರಗಳನ್ನು ಸಹ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿಟ್ಟಿದ್ದ ಟೀ ಶರ್ಟ್ ಮತ್ತು ಹೆಚ್ಚುವರಿ ಕರಪತ್ರಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಅವರಿಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.