ಬೆಂಗಳೂರು ಗ್ರಾಮಾಂತರ

ಬಾಲಕಿ ಅತ್ಯಾಚಾರಕ್ಕೆ ಯತ್ನ; ಧರ್ಮದೇಟು

Published On :

ಕನ್ನಡಪ್ರಭ ವಾರ್ತೆ ವಿಟ್ಲ ಮೇ 3
ಅಪ್ರಾಪ್ತ ಬಾಲಕಿಯನ್ನು ತನ್ನ ರಿಕ್ಷಾದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಶುಕ್ರವಾರ ಸಂಜೆ ಸಾಲೆತ್ತೂರು ಸಮೀಪ ನಡೆದಿದೆ.
   ಕೇರಳ ಗಡಿಯ ಮಂಜೇಶ್ವರ ಪ್ರದೇಶದ ತಲೆಕ್ಕಿ ನಿವಾಸಿಯ ಬಾಲಕಿ (12) ಮೀನು ತರಲೆಂದು ಸಾಲೆತ್ತೂರಿಗೆ ಬಂದಿದ್ದು, ಮರಳುವ ಸಂದರ್ಭದಲ್ಲಿ ತಲೆಕ್ಕಿ ಮಾರ್ಗವಾಗಿ ಬಾಕ್ರಬೈಲು ಕಡೆ ತೆರಳುತ್ತಿದ್ದೇನೆ ಎಂದು ನಂಬಿಸಿದ ಸಾಲೆತ್ತೂರು ನಿವಾಸಿ ಜಯಂತ (22), ಆಕೆಯನ್ನು ರಿಕ್ಷಾದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶವಾದ ಕೂಡು ರಸ್ತೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಮಯ ಬಾಲಕಿ ಬೊಬ್ಬೆ ಹಾಕಿದ್ದನ್ನು ಕೇಳಿದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದಾಗ ವಿಚಾರ ತಿಳಿದು ರಿಕ್ಷಾ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆ ನಡೆದ ಸ್ಥಳ ಕರ್ನಾಟಕ- ಕೇರಳ ಗಡಿಯಾಗಿದ್ದು ಬಾಲಕಿ ಕೇರಳ ಮೂಲದವಳಾದ್ದರಿಂದ ಪ್ರಕರಣವನ್ನು ಮಂಜೇಶ್ವರ ಠಾಣೆಗೆ ಹಸ್ತಾಂತರ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.