ಅಹಿತಕರ ಘಟನೆ ಇಲ್ಲದ ಶಾಂತಿಯುತ ಮತದಾನ
ನೆಲಮಂಗಲ: ಕ್ಷೇತ್ರದ ವಿಧಾನಸಭಾ ಚುನಾವಣೆಯು ಭಾನುವಾರ ಯಾವುದೇ ಅಹಿತಕರ ಘಟನೆ ಸಂಭವಿಸದೇ ಅತ್ಯಂತ ಶಾಂತಿಯುತವಾಗಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆಯಿತು. ಕ್ಷೇತ್ರದ ಕಸಬಾ ಹೋಬಳಿ ಮದಲಕೋಟೆ ಗ್ರಾಮದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ ಶೇಕಡಾ 20 ರಷ್ಟು ಮತದಾನ ನಡೆಯುವ ವೇಳೆ ಸ್ಥಗಿತಗೊಂಡಿದ್ದರಿಂದ ತಾಲ್ಲೂಕು ಚುನಾವಣಾಧಿಕಾರಿ 30 ನಿಮಿಷದೊಳಗೆ ಮತ್ತೊಂದು ಎಲೆಕ್ಟ್ರಾನಿಕ್ ಮತದಾನ ಯಂತ್ರ ಅಳವಡಿಸಿ ಮತದಾನ ನಡೆಸಿದ್ದಾರೆ. ಮತ ಕ್ಷೇತ್ರದ 243 ಮತದಾನ ಕೇಂದ್ರಗಳಲ್ಲಿ ಶೇಕಡಾ 68 ರಷ್ಟು ಮತದಾನ ನಡೆದಿದೆ. ಹಿರಿಯ ಕಲಾವಿದೆ ಲೀಲಾವತಿ ಮೈಲನಹಳ್ಳಿ ಗ್ರಾಮದಲ್ಲಿ ಹಾಗೂ ವಿನೋದ್ ರಾಜ್ ಸೋಲದೇವನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಾದ ಅಂಜನಮೂರ್ತಿ, ಇಂದಿರಾನಗರದಲ್ಲಿ ಮತ ಚಲಾಯಿಸಿದರು. ಜೆ.ಡಿ.ಎಸ್ ಅಭ್ಯರ್ಥಿ ಡಾಣಣ ಕೆ.ಶ್ರೀನಿವಾಸಮೂರ್ತಿ, ಮತ ಚಲಾವಣೆ ಮಾಡಿದರು.ಬಿ.ಜೆ.ಪಿ ಅಭ್ಯರ್ಥಿ ಶಾಸಕ ಎಂ.ವಿ.ನಾಗರಾಜು ಮಾರಗೊಂಡನಹಳ್ಳಿಯಲ್ಲಿ ಹಾಗೂ ಕೆ.ಜೆ.ಪಿ ಅಭ್ಯರ್ಥಿ ಚಲುವರಾಜು ಹೊನ್ನಸಂದ್ರ ಗ್ರಾಮದಲ್ಲಿ ಮತ ಚಲಾಯಿಸಿದರು. ಕ್ಷೇತ್ರದ ಹಲವು ಮುಖಂಡರು,ಸಾಹಿತಿಗಳು ಮತ ಚಲಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

