ಬೆಂಗಳೂರು ಗ್ರಾಮಾಂತರ

ಆನೇಕಲ್ ಶೇ.65 ಮತದಾನ

Published On :

ಆನೇಕಲ್: ಆನೇಕಲ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶೇ. 65 ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿ ಪ್ರಭುಲಿಂಗ ಕವಲಿ ಕಟ್ಟಿ ತಿಳಿಸಿದ್ದಾರೆ. ತಾಲೂಕಿನ 274 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಪ್ರಾರಂಭವಾಗಿ ಸಂಜೆ 6 ರ ತನಕ ಮತದಾನ ನಡೆಯಿತು. ಕೆಲ ಮತಗಟ್ಟೆಗಳಲ್ಲಿ ಜನತೆ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಒಟ್ಟು ಮತಗಟ್ಟೆಗಳ ಪೈಕಿ 21 ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಪರಿಗಣಿಸಿದ್ದು ಇಚ್ಚಂಗೂರು-ಬಂಡಾಪುರ ಮತಗಟ್ಟೆಗೆ ಮತದಾನಕ್ಕೆ ಬರಲೊಪ್ಪದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ಮಧ್ಯಾಹ್ನದ ನಂತರ ಚುನಾವಣಾಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ದೇವನಹಳ್ಳಿ ಕ್ಷೇತ್ರ ಶಾಂತ ಮತದಾನ
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲ 260 ಮತಗಟ್ಟೆಗಳಲ್ಲಿ ಶಾಂತ ಮತದಾನ ನಡೆದಿದೆ. ತಾಲೂಕಿನ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ 103 ವರ್ಷದ ದೇವೀರಮ್ಮ ಅವರು ತಮ್ಮ ಮೊಮ್ಮಗ ಹನುಮಂತಪ್ಪ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಮತಚಲಾಯಿಸಿದರು. ಚನ್ನರಾಯಪಟ್ಟಣ ಗ್ರಾಮದಲ್ಲಿ ವಿಕಲಚೇತನ ಮುನಿಶಾಮಪ್ಪ ತಮ್ಮ ಮೊಮ್ಮಕ್ಕಳೊಂದಿಗೆ ತ್ರಿಚಕ್ರವಾಹನದಲ್ಲಿ ಆಗಮಿಸಿ ತಮ್ಮ ಮತ ಚಲಾಯಿಸಿದರು. ಚನ್ನರಾಯಪಟ್ಟಣ ಬಳಿಯ ದಿನ್ನೂರು ಮತಗಟ್ಟೆಯಲ್ಲಿ ಸಂಜೆ 4 ಗಂಟೆಗೆ ಶೇ. 95 ರಷ್ಟು ಮತದಾನವಾಗಿತ್ತು. ಬಹುತೇಕ ಗ್ರಾಮಗಳ ಮತಗಟ್ಟೆಗಳ ಬಳಿ ಯಾವುದೇ ರಾಜಕೀಯ ಪಕ್ಷಗಳ ಗುಂಪುಗಳು ಅಷ್ಟಾಗಿ ಕಾಣದೇ ಇದ್ದರೂ ದೇವನಹಳ್ಳಿ ಮತ್ತು ವಿಜಯಪುರಗಳ ಮತಗಟ್ಟೆಗಳ ಬಳಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಬೆಂಬಲಿಗರು ಹೆಚ್ಚಾಗಿ ಕಂಡುಬಂದರು. ಅತಿ ಸೂಕ್ಷ್ಮ ಮತಗಟ್ಟೆಗಳ ಬಳಿ ಅರೆ ಸೇನಾಪಡೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.