ರಾಮನಗರ ಶೇ.82 ಮತದಾನ
ರಾಮನಗರ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.82 ರಷ್ಟು ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಚನ್ನಪಟ್ಟಣದಲ್ಲಿ ಶೇ.81.50 ರಷ್ಟು ಮತದಾನ ನಡೆದಿದೆ. ರಾಮನಗರದಲ್ಲಿ 73, ಮಾಗಡಿಯಲ್ಲಿ 82.87 ಹಾಗೂ ಕನಕಪುರದಲ್ಲಿ ಶೇ.82ರಷ್ಟು ಮತದಾನ ನಡೆದಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಶೇ.76ರಷ್ಟು ಮತದಾನ ನಡೆದಿತ್ತು. ಚನ್ನಪಟ್ಟಣದಲ್ಲಿ ಶೇ.78.11, ರಾಮನಗರದಲ್ಲಿ ಶೇ.72.15, ಮಾಗಡಿಯಲ್ಲಿ ಶೇ.77.35 ಹಾಗೂ ಕನಕಪುರದಲ್ಲಿ ಶೇ.76.38 ರಷ್ಟು ಮತಗಳು ಚಲಾವಣೆಯಾಗಿದ್ದವು.
ಮತದಾನದ ಏರುಗತಿ: ಜಿಲ್ಲಾದ್ಯಂತ ಬೆಳಗ್ಗೆ 7ಕ್ಕೆ ಶೇ. 8.75ರಷ್ಟು ಮತದಾನವಾಗಿತ್ತು. 11ರ ವೇಳೆಗೆ 16.71ಕ್ಕೆ ಏರಿತು. ಮಧ್ಯಾಹ್ನ 1ಕ್ಕೆ 40ರಷ್ಟು ಆಗಿದ್ದ ಮತದಾನವು 3ಕ್ಕೆ 57.33ರಷ್ಟು ಪ್ರಮಾಣಕ್ಕೆ ತಲುಪಿತ್ತು. ಸಂಜೆ 5ರ ವೇಳೆಗೆ ಮತದಾನದ ಪ್ರತಿಶತ ಪ್ರಮಾಣ ಶೇಕಡ 69.93 ಆಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

