ಎಸ್ಎಸ್ಎಲ್ಸಿ ಮಂಡ್ಯ ಸೆಕೆಂಡ್
ಮಂಡ್ಯ: ಕಳೆದ ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ಶೇ.88.56 ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದುಕೊಂಡಿದೆ. 2012ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆ 85.15ರಷ್ಟು ಫಲಿತಾಂಶದೊಂದಿಗೆ 8ನೇ ಸ್ಥಾನದಲ್ಲಿತ್ತು. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ.3ರಷ್ಟು ಪ್ರಗತಿ ಸಾಧಿಸಿರುವ ಜಿಲ್ಲೆ, ಶೇ.88.56ರಷ್ಟು ಫಲಿತಾಂಶ ಪಡೆದಿದ್ದು, ಹೆಣ್ಣು ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣರ ಮೇಲುಗೈ: ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶದ ಫಲಿತಾಂಶದಲ್ಲಿ ಹೆಚ್ಚಳ ಕಂಡುಬಂದಿದೆ. ನಗರದಲ್ಲಿ 6052 ವಿದ್ಯಾರ್ಥಿಗಳ ಪೈಕಿ (ಗಂಡು- 2421, ಹೆಣ್ಣು- 2660) 5081 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 18,628 ವಿದ್ಯಾರ್ಥಿಗಳ ಪೈಕಿ (ಗಂಡು- 8332, ಹೆಣ್ಣು - 9040) 16,775 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಟ್ಯಾಂಕರ್ ಡಿಕ್ಕಿ
ಯುವಕ ಸಾವು
ಕೋಲಾರ: ನವ ಮತದಾರನೊಬ್ಬ ತನ್ನ ಹಕ್ಕು ಚಲಾಯಿಸಲು ಊರಿಗೆ ಬಂದು ದ್ವಿ ಚಕ್ರವಾಹನದಲ್ಲಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದಾಗ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ನಗರದ ಪವನ್ ಕಾಲೇಜು ಮುಂಭಾಗ ನಡೆದಿದೆ. ಬಂಗಾರಪೇಟೆ ತಾಲೂಕಿನ ಮಿಟ್ಟಮಾರನಹಳ್ಳಿಯ ಗೋಪಿನಾಥ್(19) ಮೃತ ಯುವಕ. ಈತಮೊಂದಿಗೆ ವಾಹನದ ಹಿಂಬಂದಿಯಲ್ಲಿ ಕುಳಿತ್ತಿದ್ದ ರಂಜಿತ್ ಎಂಬಾತ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಬೆಣಗಾನಹಳ್ಳಿಯ ಮೆಡಿಕಲ್ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಿನಾಥ್ ಇದೆ ಪ್ರಥಮಬಾರಿಗೆ ಮತ ಚಲಾಯಿಸಲು ಭಾನುವಾರ ಊರಿಗೆ ಬಂದಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

