ಕನಕಪುರ ತಾಲೂಕಿನ ಹಲವಾರು ಶಾಲೆಗಳ ಶೇ.100 ಫಲಿತಾಂಶ
ಕ.ಪ್ರ. ವಾರ್ತೆ ಕನಕಪುರ ಮೇ 6
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಕನಕಪುರ ತಾಲೂಕಿನ ಹಲವಾರು ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮೆರೆದಿವೆ.
ಪ್ರಮುಖವಾಗಿ ರಸ್ತೆಜಕ್ಕಸಂದ್ರ ಗ್ರಾಮದ ಜೈನ್ ವಿದ್ಯಾನಿಕೇತನ ಶಾಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ ಒಟ್ಟಾರೆ 154 ವಿದ್ಯಾರ್ಥಿಗಳಲ್ಲಿ 28 ಮಂದಿ ಉನ್ನತ ಶ್ರೇಣಿ, 119 ಮಂದಿ ಪ್ರಥಮದರ್ಜೆ ಹಾಗೂ 7 ಮಂದಿ ದ್ವಿತೀಯದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜೇತರನ್ನು ಜೈನ್ ವಿವಿ ಉಪಕುಲಪತಿ ಚೆನ್‌ರಾಜ್ ಜೈನ್,ಪ್ರಾಂಶುಪಾಲ ಬಿ.ಪಿ. ಕಿಶೋರ್ ಅಭಿನಂದನೆ ಸಲ್ಲಿಸಿದ್ದಾರೆ.
ಕನಕಪುರ ಪಟ್ಟಣದ ಸೇಂಟ್ ಮೈಖೇಲ್ ಇಂಗ್ಲಿಷ್ ಸ್ಕೂಲ್ ತನ್ನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತಿದ್ದ 37 ವಿದ್ಯಾರ್ಥಿಗಳಲ್ಲಿ 4 ಮಂದಿ ಉನ್ನತ ಶ್ರೇಣಿ, 23 ಪ್ರಥಮದರ್ಜೆ, 6 ದ್ವಿತೀಯ ಹಾಗೂ 4 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜೇತರನ್ನು ಸಂಸ್ಥೆಯ ಅಧ್ಯಕ್ಷ, ಚಿತ್ರನಿರ್ಮಾಪಕ ಕನಕಪುರ ಆರ್.ಶ್ರೀನಿವಾಸ್, ಕಾರ್ಯದರ್ಶಿ ಅನಸೂಯಾ, ಉಪಾಧ್ಯಕ್ಷ ಭಾಸ್ಕರ್, ಪ್ರಾಂಶುಪಾಲರಾದ ಥೆರೇಸಮ್ಮ ಜೋಸೆಫ್ ಅಭಿನಂದಿಸಿದ್ದಾರೆ.
ಕನಕಪುರದ ಬ್ಲಾಸಂ ಪ್ರೌಢಶಾಲೆಯು ನಿರಂತರವಾಗಿ ಶೇ.100 ಫಲಿತಾಂಶವನ್ನು ದಾಖಲಿಸುತ್ತಿದ್ದು, ಈ ಬಾರಿ ಪರೀಕ್ಷೆಗೆ ಕುಳಿತ 43 ವಿದ್ಯಾರ್ಥಿಗಳಲ್ಲಿ 8 ಮಂದಿ ಉನ್ನತ ಶ್ರೇಣಿ, 30 ಮಂದಿ ಪ್ರಥಮ ದರ್ಜೆ, 3 ದ್ವಿತೀಯ ಹಾಗೂ 2 ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜೇತರನ್ನು ಪ್ರಾಂಶುಪಾಲರಾದ ಗಂಗಾಂಬಿಕಾ, ಡಾ.ಶಶಿಧರ್ ಸ್ಮಾರಕ ಟ್ರಸ್ಟ್‌ನ ವೆಂಕಟೇಶ್, ಕಾ.ಪ್ರಕಾಶ್, ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

