ಪಿಳ್ಳಮುನಿಶಾಮಪ್ಪಗೆ ದಕ್ಕಿದ ದೇವನಹಳ್ಳಿ
ದೇವನಹಳ್ಳಿ: ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ನ ಪಿಳ್ಳಮುನಿಶಾಮಪ್ಪರವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ವೆಂಕಟಸ್ವಾಮಿರವರನ್ನು 1942 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಪಿಳ್ಳಮುನಿಶಾಮಪ್ಪರವರಿಗೆ 70323 ಮತಗಳು, ವೆಂಕಟಸ್ವಾಮಿರವರಿಗೆ 68381 ಮತಗಳು ಹಾಗೂ ಬಿಜೆಪಿ ಜಿ.ಚಂದ್ರಣ್ಣರವರಿಗೆ 9418 ಮತಗಳು ಲಭ್ಯವಾಗಿವೆ.
ಚುನಾವಣೆಯಲ್ಲಿ ಒಟ್ಟು 11 ಮಂದಿ ಸ್ಪರ್ಧಿಸಿದ್ದು ಅವರಲ್ಲಿ ಬಿಎಸ್ಪಿ ಪಿ.ವೆಂಕಟೇಶ್ - 1283, ಬಿಎಸ್ಆರ್ ಕಾಂಗ್ರೆಸ್ನ ಡಿ.ಆರ್.ನಾರಾಯಣಸ್ವಾಮಿ - 1201, ಕೆಜಿಪಿ ಎ.ಹನುಮಂತಪ್ಪ- 929, ಅಕ್ಕಯ್ಯಮ್ಮ- 234, ಡಿ.ಮುನಿರಾಜು-197, ರಾಮಾನಾಯ್ಕ- 297, ಎಂ.ಶಿವಪ್ಪ- 419 ಹಾಗೂ ಕೆ.ಎಸ್.ಸ್ವಾಮಿ- 865 ಮತಗಳು ಲಭ್ಯವಾಗಿವೆ.
ಚುನಾವಣಾಧಿಕಾರಿಗಳಾದ ಆರ್. ಸುಮರವರು ವಿಜೇತರಾದ ಜೆಡಿಎಸ್ನ ಪಿಳ್ಳಮುನಿಶಾಮಪ್ಪರವರಿಗೆ ಪ್ರಮಾಣ ಪತ್ರ ವಿತರಿಸಿದರು. ಮತಗಳ ಎಣಿಕೆ ಸಂದರ್ಭದಲ್ಲಿ ಭಾಗವಹಿಸಿದ್ದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸಮೂರ್ತಿ, ದಲಿತ ಸಂಘಟನೆಗಳ ಮುಖಂಡರಾದ ಬುಳ್ಳಹಳ್ಳಿ ರಾಜಪ್ಪರವರು ಹಾಗೂ ಎಸ್. ಗುರಪ್ಪರವರು ಪಿಳ್ಳಮುನಿಶಾಮಪ್ಪರವರಿಗೆ ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

