ನಗೆ ಬೀರಿದ ಶ್ರೀನಿವಾಸಮೂರ್ತಿ
ಕ.ಪ್ರ. ವಾರ್ತೆ ನೆಲಮಂಗಲ ಮೇ 9
ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ 15103 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಅವರು ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿ ಅವರು 60492 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದ ಜನತೆ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡಿರುವುದಕ್ಕಾಗಿ ಡಾ.ಕೆ.ಶ್ರೀನಿವಾಸಮೂರ್ತಿ ಅಭಿನಂದನೆ ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಂಜನಮೂರ್ತಿ 45308 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಬಿಜೆಪಿ ಶಾಸಕ ಹಾಗೂ ಅಭ್ಯರ್ಥಿ ನಾಗರಾಜು 19398 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಭಾರೀ ಮುಖಭಂಗ ಅನುಭವಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿರವರಿಗೆ ತಾಲೂಕಿನ ಮುಖಂಡರಾದ ಎಂಎಲ್‌ಸಿ ಇ.ಕೃಷ್ಣಪ್ಪ, ಜಿ.ಪಂ. ಸದಸ್ಯ ಬಿ.ಎಂ.ಎಲ್. ಕಾಂತರಾಜು, ಮುಖಂಡರಾದ ಗಂಗಹನುಮಯ್ಯ ಕೇಶವಮೂರ್ತಿ, ಗಂಗಣ್ಣ, ತಾ.ಪಂ. ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ್, ರಂಗಸ್ವಾಮಿ, ಸದಸ್ಯರಾದ ಹೇಮಂತ್‌ಕುಮಾರ್, ಎ.ಪಿಳ್ಳಪ್ಪ, ಶಿವಕುಮಾರ್, ನಾರಾಯಣ್, ಗಣೇಶ್, ಮುಖಂಡರಾದ ನಾಗರಾಜು, ಬೂದಿಹಾಲ್ ರಾಜು, ರಾಜಶೇಖರ್ ಸೇರಿದಂತೆ ಸಾವಿರಾರು ಜನ ಪಟ್ಟಣದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ಕ್ಷೇತ್ರದ ಅಭ್ಯರ್ಥಿಗಳ ಮತ ವಿವರ
ನೆಲಮಂಗಲ (ಮೀಸಲು) ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ಕೆಳಕಂಡಂತಿದೆ.
ಅಭ್ಯರ್ಥಿಯ ಹೆಸರು ಪಕ್ಷ ಒಟ್ಟು ಪಡೆದ ಮತಗಳು
ಡಾ.ಕೆ.ಶ್ರೀನಿವಾಸಮೂರ್ತಿ ಜೆಡಿಎಸ್ 60492
ಅಂಜನಮೂರ್ತಿ ಕಾಂಗ್ರೆಸ್ 45389
ಎಂ.ವಿ.ನಾಗರಾಜು ಬಿಜೆಪಿ 19368
ಚಲುವರಾಜು ಕೆಜೆಪಿ 9821
ಡಾ.ಸಿ.ಹನುಮಯ್ಯ ಬಿಎಸ್‌ಪಿ 857
ಗಂಗಬೈಲಪ್ಪ ಡಾ.ಬಿ.ಆರ್.ಅಂಬೇಡ್ಕರ್ 286
ಜನತಾ ಪಾರ್ಟಿ
ಬಿ.ರಾಮಯ್ಯ ಬಿ.ಎಸ್.ಆರ್ 288
ಲೇಪಾಕ್ಷಯ್ಯ.ಎಸ್ ಜೆಡಿಯು 210
ಅಂಜನಮೂರ್ತಿ ಪಕ್ಷೇತರ 436
ಜಿ.ಕುಮಾರ ಪಕ್ಷೇತರ 155
ಡಾ.ಚೌಡಯ್ಯ ಪಕ್ಷೇತರ 480
ತಿರುಮಲಯ್ಯ ಪಕ್ಷೇತರ 209
ಪೂಜಪ್ಪ.ಎನ್.ಜಿ. ಪಕ್ಷೇತರ 252
ಬಿ.ಸಿ.ರಾಮಣ್ಣ ಪಕ್ಷೇತರ 456
ಶ್ರೀನಿವಾಸ.ಜಿ.ಎಂ ಪಕ್ಷೇತರ 319
ಬಿ.ವಿ.ಸತೀಶ್‌ಚಂದ್ರ ಪಕ್ಷೇತರ 646
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

