ಬಿಬಿಎಂಪಿ ಉದ್ಯಾನವನ ನಿರ್ವಹಣೆ ಬಾಕಿ ಶೀಘ್ರವೇ ಬಿಡುಗಡೆ: ಸಿದ್ದಯ್ಯ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನ ನಿರ್ವಹಣೆಯ ಗುತ್ತಿಗೆದಾರರಿಗೆ ನಾಲ್ಕೈದು ದಿನಗಳಲ್ಲಿ ಬಾಕಿ ಇರುವ ಶುಲ್ಕ ಪಾವತಿಸುವುದಾಗಿ ಪಾಲಿಕೆ ಆಯುಕ್ತ ಸಿದ್ದಯ್ಯ ತಿಳಿಸಿದ್ದಾರೆ.
ಗುತ್ತಿಗೆದಾರರ ಮುಷ್ಕರದ ಹಿನ್ನೆಲೆಯಲ್ಲಿ ಆಯುಕ್ತರು ಬುಧವಾರ ಎಲ್ಲಾ ವಲಯದ ತೋಟಗಾರಿಕೆ ಅಧೀಕ್ಷಕರ ಸಭೆ ಕರೆದು ಉದ್ಯಾನ ನಿರ್ವಹಣೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಕೂಲಂಕಷ ಪರಿಶೀಲನೆ ನಡೆಸಿದರು.
2009-10ರ ನಂತರ ಹೊಸ ಟೆಂಡರ್ ಕರೆಯದೆ ಹಳೆ ಗುತ್ತಿಗೆ ಸೇವೆ ಮುಂದುವರಿಸಲು ಕಾರಣವೇನು ಎಂಬುದರ ಕುರಿತು ಚರ್ಚೆ ನಡೆಸಿದರು. ಬೇಸಿಗೆ ಸಂದರ್ಭದಲ್ಲಿ ಉದ್ಯಾನಗಳ ನಿರ್ವಹಣೆ ಅತ್ಯಗತ್ಯವಾಗಿರುವುದರಿಂದ ಅದಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ತೋಟಗಾರಿಕೆ ಅಧಿಕ್ಷಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಉದ್ಯಾನಗಳ ನಿರ್ವಹಣೆಗಾಗಿ ಅವಶ್ಯವಾದ ಆಡಳಿತಾತ್ಮಕ ಅನುಮೋದನೆ, ಟೆಂಡರ್ ಪ್ರಕ್ರಿಯೆ ವಿಷಯಗಳ ಬಗ್ಗೆ ಗಮನ ಹರಿಸಿ ಕ್ರಮಬದ್ಧವಾಗಿ ನಿರ್ವಹಿಸುವಂತೆ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಗುತ್ತಿಗೆ ಮುಂದುವರಿಸುವುದನ್ನು ಸ್ಥಗಿತಗೊಳಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದರು.
ಗಮಕ, ದೇವರನಾಮ ತರಗತಿ ಜುಲೈನಲ್ಲಿ
ಕರ್ನಾಟಕ ಗಮಕ ಕಲಾ ಪರಿಷತ್ತು ಗಮಕ ಹಾಗೂ ದೇವರನಾಮ ತರಗತಿಗಳನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲಿದೆ. ನುರಿತ ಗಮಕಿಗಳು ಹಾಗೂ ಅಧ್ಯಾಪಕರು ತರಗತಿಗಳನ್ನು ನಡೆಸಲು ಪರಿಷತ್ತನ್ನು ಸಂಪರ್ಕಿಸಬಹುದು. ಅವಶ್ಯವಿದ್ದವರಿಗೆ ಪರಿಷತ್ತಿನಿಂದ ತರಬೇತಿ ನೀಡಲಾಗುವುದು ಮಾಹಿತಿಗೆ- 26622962, 8762265093.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

