ಅನಧಿಕೃತ ಕುಡಿವ ನೀರು ಘಟಕಗಳಿಗೆ ಬೀಗಮುದ್ರೆ
ದೇವನಹಳ್ಳಿ: ದೇವನಹಳ್ಳಿ ತಾಲೂಕಿನಲ್ಲಿ ಅಧಿಕೃತವಾಗಿ ಲೈಸನ್ಸ್‌ಪಡೆಯದೆ ನೀರನ್ನು ಶುದ್ಧೀಕರಿಸಿ ಬಾಟಲ್
ಮತ್ತು ಕ್ಯಾನ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ ವಿಜಯಪುರ ಕೋಲಾರ ರಸ್ತೆಯಲ್ಲಿರುವ ಆಕ್ವ ಮೆರಿನ್ ಘಟಕ ಹಾಗೂ ಬೈಚಾಪುರ ಬೆಟ್ಟಕೋಟೆ ರಸ್ತೆ ಅಗಲಕೋಟೆ ಗ್ರಾಮದ ಬಳಿ ಇರುವ ಶಿವಗಂಗಾ ಘಟಕಗಳ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ.ಖಾಲಿದ್ ಅಹಮದ್ ಹಾಗೂ ಜಿಲ್ಲೆಯ ನಾಲ್ಕು ತಾಲೂಕುಗಳ ಆಹಾರ ಸುರಕ್ಷತಾ ತನಿಖಾಧಿಕಾರಿಗಳು ದಾಳಿ ನಡೆಸಿ ಎರಡು ಘಟಕಗಳಿಗೂ ಬೀಗಮುದ್ರೆ ಹಾಕಿದರು.
ಶಿವಗಂಗಾ ನೀರು ಶುದ್ಧೀಕರಣ ಘಟಕ ಹಾಗೂ ಆಕ್ವ ಮೆರಿನ್ ಘಟಕಗಳ ಮಾಲೀಕರಿಗೆ ಅಧಿಕೃತ ಲೈಸನ್ಸ್ ಪಡೆಯದೇ ಇರುವುದಕ್ಕೆ ಈಗಾಗಲೇ ನೋಟಿಸ್ ನೀಡಿದ್ದರೂ ಗಮನಕ್ಕೆ ತೆಗೆದುಕೊಳ್ಳದೆ ಬಾಟಲ್‌ಗಳಲ್ಲಿ ಪ್ಯಾಕ್ ಮಾಡಿದ ನೀರನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಎರಡು ಘಟಕಗಳಲ್ಲಿ ತಯಾರಾಗುವ ಪ್ಯಾಕ್ ಮಾಡಿದ ನೀರಿನ ಬಾಟಲ್ ಮೇಲಿನ ಲೇಬಲ್‌ನಲ್ಲಿ ಯು.ವಿ. ಟ್ರೀಟೆಡ್ ಹಾಗೂ ಓಜನೇಟೆಡ್ ಎಂದು ಮುದ್ರಿತವಾಗಿದೆ. ಆದರೆ ಘಟಕಗಳಲ್ಲಿ ಯಾವುದೇ ರೀತಿಯ ಪ್ರಯೋಗಾಲಯವಾಗಲಿ ಅಥವ ಲ್ಯಾಬ್ ಟೆಕ್ನಿಷಿಯನ್‌ಗಳು ಕಂಡುಬಂದಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ದೇವನಹಳ್ಳಿ ತಾಲೂಕಿನಲ್ಲಿ ಬಿಸ್ಲೆರಿ ಮತ್ತು ಶ್ರೀನಿಧಿ ಆಕ್ವ ನೀರು ಶುದ್ಧೀಕರಣ ಘಟಕಗಳು ಮಾತ್ರ ಅಧಿಕೃತವಾಗಿ ಮಾನ್ಯತೆ ಪಡೆದಿವೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಕಂಪನಿಯ ಹೆಸರಿನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ಬಿಐಎಸ್ ಹಾಗೂ ಐಎಸ್‌ಐ ಸಂಸ್ಥೆಯಿಂದ ಮಾನ್ಯತೆ ಪಡೆದ ನಂತರ ಎಫ್‌ಎಎಸ್‌ಎಸ್‌ಎನಿಂದ ಲೈಸನ್ಸ್ ಪಡೆಯಲೇ ಬೇಕು ಎಂದು ತಿಳಿಸಿದರು. ಯಾವುದೇ ಬ್ರಾಂಡ್ ಹೆಸರಿನಲ್ಲಿ ಅನುಮಾನಾಸ್ಪದವಾಗಿ
ಬಾಟಲ್‌ಗಳಲ್ಲಿ ನೀರನ್ನು ತುಂಬಿ ಮಾರಾಟಮಾಡುತ್ತಿದ್ದರೆ ಕೂಡಲೇ ಜಿಲ್ಲಾ ಆಹಾರ ನಿಯಂತ್ರಣ ಅಧಿಕಾರಿಗಳಿಗೆ (984536709) ದೂರನ್ನು ನೀಡಬೇಕೆಂದು ಕೋರಿದ್ದಾರೆ. ಈ ಸಂಧರ್ಭದಲ್ಲಿ ಆಹಾರ ಸುರಕ್ಷತಾಧಿಕಾರಿಗಳಾದ ದೇವನಹಳ್ಳಿಯ ಡಿ.ಎಸ್.ನಾಗರಾಜ್, ಹೊಸಕೋಟೆಯ ಡಿ.ಸುಬ್ರಮಣ್ಯ, ನೆಲಮಂಗಲದ ಪಿ.ಎಫ್. ಗಂಗಾಧರ್ ಹಾಗೂ ದೊಡ್ಡಬಳ್ಳಾಪುರದ ರವೀಂದ್ರ ಕಾರಂತ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

