ಉತ್ತರ ಪತ್ರಿಕೆ ಸಮಸ್ಯೆಗೆ ಕೂಡಲೇ ಪರಿಹಾರ: ಚಕ್ರವರ್ತಿ ಮೋಹನ್
ಕನ್ನಡಪ್ರಭ ವಾರ್ತೆ, ಬೆಂಗಳೂರು ಮೇ 18
ಉತ್ತರ ಪತ್ರಿಕೆಯ ನಕಲು ಪ್ರತಿಯಲ್ಲಿನ ಸಮಸ್ಯೆಯಿದ್ದರೇ ಅಥವಾ ಅರ್ಜಿ ಸಲ್ಲಿಸಿದ ವಿಷಯಗಳಲ್ಲಿ ಒಂದೇ ವಿಷಯದ ಪ್ರತಿ ದೊರೆತಿದ್ದರೆ ಇಲಾಖೆಯ ಗಮನಕ್ಕೆ ತನ್ನಿ, ಕೂಡಲೇ ಪರಿಹಾರ ನೀಡುವುದಾಗಿ ಪದವಿ ಪೂರ್ವ ಇಲಾಖೆ ತಿಳಿಸಿದೆ. ಇಲಾಖೆಯ ನಿರ್ದೇಶಕ ಚಕ್ರವರ್ತಿ ಮೋಹನ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ನಕಲು ಪ್ರತಿ ನೀಡುವಲ್ಲಿ ವಿಳಂಬವಾಗಿರಬಹುದು, ಹಾಗೆಯೆ ಪ್ರತಿಯಲ್ಲಿಯೂ ದೋಷವಾಗಿರುತ್ತದೆ. ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೇ ಉಚಿತವಾಗಿಯೇ ಪ್ರತಿ ನೀಡಲಾಗುತ್ತದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ನಕಲು ಪ್ರತಿ ಹಂಚಿಕೆಯಲ್ಲಿ ವಿಳಂಬವಾಗಿದೆ ಹಾಗೂ ಪ್ರತಿಯನ್ನು ನಕಲು ಮಾಡುವಾಗಲು ಪ್ರಮಾದ ಮಾಡಲಾಗಿದೆ ಎಂದು 'ಕನ್ನಡಪ್ರಭ'ವು ಶನಿವಾರ ವರದಿ ಪ್ರಕಟಿಸಿತ್ತು.
ಅರ್ಜಿ ಅವಧಿ ವಿಸ್ತರಣೆ: ನಕಲು ಪ್ರತಿ ಹಂಚಿಕೆ ವಿಳಂಬದ ಹಿನ್ನೆಲೆಯಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಮೇ 25ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.
ಫಲಿತಾಂಶ ತಿರಸ್ಕಾರ ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಯ ದಿನಾಂಕವನ್ನು ಮೇ 23ರವರೆಗೆ ವಿಸ್ತರಿಸಲಾಗಿದೆ. ಈ ಶುಲ್ಕವನ್ನು ಖಜಾನೆಗೆ ಮೇ 24 ಅಥವಾ ಜಿಲ್ಲಾ ಉಪನಿರ್ದೇಶಕರಿಗೆ ಮೇ 25ರೊಳಗೆ ಖುದ್ದಾಗಿ ಕಾಲೇಜು ಸಿಬ್ಬಂದಿಗಳು ತಲುಪಿಸಬೇಕು. ಎಲ್ಲ ಕಾಲೇಜುಗಳ ಅರ್ಜಿಗಳ ಲಕೋಟೆಯನ್ನು ಮೇ 27ರೊಳಗೆ ಇಲಾಖೆಯ ಕಂದ್ರ ಕಚೇರಿಗೆ ತಲುಪಿಸಲು ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

