ಲಾಟರಿ ಮೂಲಕ ವಿದ್ಯಾರ್ಥಿ ಆಯ್ಕೆ
ರಾಮನಗರ: 2013-14ನೇ ಸಾಲಿನಲ್ಲಿ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಗೆ ಆರ್ಟಿಇ ಯೋಜನೆಯಡಿಯಲ್ಲಿ ಆಯ್ಕೆಯಾಗದೆ ಉಳಿದ ಸೀಟುಗಳಿಗೆ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಮರು ಆಯ್ಕೆ ಮಾಡಲಾಗುವುದು. ಮೇ 24ರಂದು ಬಿಡದಿಯ ಸೆಂಟ್ ಥಾಮಸ್ ಹಿರಿಯ ಪ್ರಾಥಮಿಕ ಶಾಲೆ, ವಿಶ್ವಸಾಯಿ ಹಿರಿಯ ಪ್ರಾಥಮಿಕ ಶಾಲೆ, ಎಸ್ಎಲ್ಎನ್ ಶಾಲೆ, ಸಿಮ್ರಾನ್ ಶಾಲೆ, ರಾಮನಗರದ ನೇತಾಜಿ ಪಾಪುಲರ್ ಶಾಲೆ, ಶಾಂತಿನಿಕೇತನ ಶಾಲೆ, ಯೂನಿವರ್ಸಲಲ್ಶಾಲೆಯಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ. ಮೇ 25 ರಂದು ಬಿಡದಿಯ ಜೆವಿಎನ್ ಪಿಎಸ್, ಬೈರಮಂಗಲದ ತ್ಯಾಗರಾಜ ಸೆಂಟ್ರಲ್ ಶಾಲೆ, ಲಕ್ಷ್ಮೀಸಾಗರದ ಸುವಿಶೇಷ ಜ್ಞಾನಪೀಠ ಶಾಲೆ, ಎಂ.ಹೆಚ್. ಶಾಲೆ, ವಾಸವಿ ಹಿರಿಯ ಪ್ರಾಥಮಿಕ ಶಾಲೆ, ತಿಲಕ್ ಶಾಲೆಗಳಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ. ಮೇ 27 ರಂದು ಜಾಲಮಂಗಲದ ಟಿ.ಗಿರಿಯಪ್ಪ ಶಾಲೆ, ಅರುಣೋದಯ ಪಬ್ಲಿಕ್ ಶಾಲೆ, ಹೋಲಿಕ್ರೆಸೆಂಟ್ ಶಾಲೆ. ಮೇ 28 ರಂದು ಬೈರಮಂಗಲದ ಶ್ರೀ ವಾಗ್ದೇವಿ ಶಾಲೆ, ಮಹರ್ಷಿ ಇಂಟರ್ ನ್ಯಾಷನಲ್ ಶಾಲೆ, ಪವಿತ್ರ ರಾಷ್ಟ್ರೀಯ ವಿದ್ಯಾಲಯ ಶಾಲೆಗಳಲ್ಲಿ ಲಾಟರಿ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಯ್ಕೆಯಾಗಿರದ ವಿದ್ಯಾರ್ಥಿಗಳನ್ನು ಮರು ಆಯ್ಕೆ ಮಾಡಲಾಗುವುದು.
ಕಂಪ್ಯೂಟರ್ ಆಪರೇಟರ್ಗಳ ವೇತನ ಬಿಡುಗಡೆ
ಬೆಂಗಳೂರು: ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಗಳು ವೇತನಕ್ಕಾಗಿ ಪ್ರತಿಭಟಿಸುತ್ತಿದ್ದ ಹಿನ್ನೆಲೆಯಲ್ಲಿ ಆಯುಕ್ತ ಸಿದ್ದಯ್ಯ ಬುಧವಾರ ರು. 2.9ಕೋಟಿ ಬಿಡುಗಡೆಗೊಳಿಸಿದರು. ಕಂಪ್ಯೂಟರ್ ಆಪರೇಟರ್ಗಳಿಗೆ ಬಿಬಿಎಂಪಿ ಕಿಯೋನಿಕ್ಸ್ ಸಂಸ್ಥೆ ಮೂಲಕ ವೇತನ ನೀಡುತ್ತಿದೆ. ಆದರೆ, ಕಿಯೋನಿಕ್ಸ್ ಸಕಾಲಕ್ಕೆ ಬಿಲ್ ಸಲ್ಲಿಸದೆ ವೇತನ ಬಿಡುಗಡೆ ವಿಳಂಬವಾಗಿತ್ತು. ಇನ್ನು ಮುಂದೆ ಹೀಗಾದಂತೆ ಸಕಾಲಕ್ಕೆ ಬಿಲ್ ಸಲ್ಲಿಸಿ ವೇತನ ಪಡೆಯಬೇಕೆಂದು ಸಿದ್ದಯ್ಯ ಹೇಳಿದರು. ವೇತನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಂಪ್ಯೂಟರ್ ಆಪರೇಟರ್ಗಳು ಗುರುವಾರದಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದು, ಸೇವೆಗಳು ಎಂದಿನಂತಿರುತ್ತವೆ ಎಂದು ಅವರು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

