ಬೆಂಗಳೂರು ಗ್ರಾಮಾಂತರ

ಗ್ರಾಮ ಪಂಚಾಯ್ತಿ ಸಮಸ್ಯೆಗಳಿಗೆ ಪರಿಹಾರ: ಶಾಸಕ ಬಿ. ಶಿವಣ್ಣ ಭರವಸೆ

Published On :

ಆನೇಕಲ್ಲು: ತಾಲೂಕಿನ 32 ಗ್ರಾಮ ಪಂಚಾಯ್ತಿಗಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಕೆಲ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ತಿಳಿಸಿದ್ದಾರೆ. ಅವರು ತಾಲೂಕಿನ ಇಂಡ್ಲವಾಡಿ ಪಂಚಾಯ್ತಿಯ ಹಳ್ಳಿಗಳಿಗೆ ಸ್ಥಳೀಯ ಮುಖಂಡರ  ಜೊತೆ ಭೇಟಿ ನೀಡಿ  ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಹಾಗೆಯೇ ಸಮಸ್ಯೆಗಳನ್ನು ಆಲಿಸಿದರು. ಇತ್ತೀಚೆಗೆ ಬಿದ್ದ ಬಿರುಗಾಳಿಸಹಿತ ಮಳೆಗೆ ಹೂವು, ತರಕಾರಿ ಹಾಗೂ ಹಣ್ಣುಗಳು ನಾಶವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಹಾಗೆಯೇ ಆನೇಕ ಕಹಳ್ಳಿಗಳಲ್ಲಿ ಜನ ಹಾಗೂ ರಾಸುಗಳಿಗೆ ಕುಡಿವ ನೀರಿನ ಸಮಸ್ಯಯಿದೆ ಎಂಬುದನ್ನು ಅರಿತಿದ್ದೇನೆ. ಜಿಲ್ಲಾ ಪಂಚಾಯ್ತಿ ಸದಸ್ಯರ ನಿಧಿಯಿಂದ ನೀರಿನ ಸಮಸ್ಯೆ ಶೀಘ್ರ ಪರಿಹಾರಕ್ಕೆ ಮಾತನಾಡುತ್ತೇನೆ.  ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಪಂ ಹಾಗೂ ತಾಪಂ ಸದಸ್ಯರ ನಿಯೋಗ ತೆರಳಲು ಮಾತು ನಡೆಸಲಾಗಿದೆ ಎಂದರು.
ಅಧಿಕಾರಿಗಳ ಸಭೆ: ಅತಿ ಶೀಘ್ರದಲ್ಲೇ ತಾಲೂಕಿನ ಎಲ್ಲ ಅಧಿಕಾರಿಗಳ ಸಭೆ ಮಾಡುತ್ತೇನೆ. ತಾಲೂಕಿನ ಸಂಚಾರದಲ್ಲಿ ಎಲ್ಲ ಹಳ್ಳಿಗಳ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ.
 ಈ ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಮುಂದುವರಿಸುವುದಾಗಿ ತಿಳಿಸಿದ ಅವರು ಆನೇಕಲ್  ಚಂದಾಪುರ ರಸ್ತೆಯ ಕಾಮಗಾರಿಯನ್ನು ಮೇ 27 ಸೋಮವಾರ ಪ್ರಾರಂಭಿಸುವುದಾಗಿ ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ 593 ಅಂಕ ಗಳಿಕೆ
ದೊಡ್ಡಬಳ್ಳಾಪುರ:
ಇಲ್ಲಿನ ಕೊಂಗಾಡಿಯಪ್ಪ ಪ್ರೌಢಶಾಲೆಯ ವಿದ್ಯಾರ್ಥಿ ಎಸ್.ಸಂತೋಷ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ 593 ಅಂಕ ಗಳಿಸುವುದರೊಂದಿಗೆ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಈತ ಕನ್ನಡದಲ್ಲಿ 125ಕ್ಕೆ 122 ಅಂಕ ಗಳಿಸಿದ್ದು, ಇಂಗ್ಲಿಷ್‌ನಲ್ಲಿ 100ಕ್ಕೆ 97, ಹಿಂದಿಯಲ್ಲಿ 98, ಗಣಿತದಲ್ಲಿ 92, ವಿಜ್ಞಾನದಲ್ಲಿ 91, ಸಮಾಜ ವಿಜ್ಞಾನದಲ್ಲಿ 93 ಅಂಕ ಗಳಿಸಿದ್ದಾನೆ. ಈತ ಸಾಂಸ್ಕೃತಿಕ ಮತ್ತು ಕಲಾ ಚಟುವಟಿಕೆಗಳಲ್ಲೂ ಅನೇಕ ಪ್ರಶಸ್ತಿ-ಬಹುಮಾನ ಪಡೆದಿದ್ದಾನೆ.

ಇಂಡಗುಂಜಿ ಸಂಸ್ಥೆ ವಾರ್ಷಿಕೋತ್ಸವ
ದೊಡ್ಡಬಳ್ಳಾಪುರ:
ಇಲ್ಲಿನ ಇಡಗುಂಜಿ ಮಹಾಗಣಪತಿ ನೃತ್ಯ ಸಂಸ್ಥೆಯ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಸಂಜೆ 5.30ಕ್ಕೆ ಕನ್ನಡ ಜಾಗೃತ ಭವನದಲ್ಲಿ ನಡೆಯಲಿದೆ. ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೃತ್ಯಗಾತಿ ಉಷಾ ದಾತಾರ್ ಅಧ್ಯಕ್ಷತೆ ವಹಿಸುವರು. ಸಂಗೀತ ಕಲಾವಿದ ರಾಜು ದಾತಾರ್, ಗೌರಿ ವಿಶ್ವನಾಥ್, ಡಿ.ಡಿ.ನಾಯಕ್, ನೃತ್ಯ ನಿರ್ದೇಶಕ ವೈ.ಕೆ.ಸಾಯಿಬಾಬಾ, ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ, ಜಿ.ಪಂ ಉಪಾಧ್ಯಕ್ಷ ಹನುಮಂತೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಮುನೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ.

ರುಡ್‌ಸೆಟ್‌ನಿಂದ ತರಬೇತಿ ಶಿಬಿರ
ರಾಮನಗರ:
ನೆಲಮಂಗಲದ ಅರಿಶಿನಕುಂಟೆಯ ರುಡ್‌ಸೆಟ್ ಸಂಸ್ಥೆಯು ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯ 18 ರಿಂದ 45 ವಯೋವುತಿಯೊಳಗಿನ ಕನ್ನಡ ಓದಲು ಬರೆಯಲು ಬಲ್ಲ ಆಸಕ್ತ ನಿರುದ್ಯೋಗಿ ಯುವತಿಯರಿಗಾಗಿ ವಸತಿಯುತ ಸಿದ್ಧ ಉಡುಪು ತಯಾರಿಕಾ ತರಬೇತಿ ನೀಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.