ಬೆಂಗಳೂರು ಗ್ರಾಮಾಂತರ

ವೈಜ್ಞಾನಿಕ ಮೀನು ಸಾಕಾಣಿಕೆ ಅಳವಡಿಸಿಕೊಳ್ಳಿ

Published On :

ಕ.ಪ್ರ. ವಾರ್ತೆ ಮಾಗಡಿ ಮೇ 26
ಕರೆಗಳ ಸಂರಕ್ಷಣೆ ಮತ್ತು ಮೀನುಗಾರರ ಸುಧಾರಣೆಗೆ ಅವ್ವೇರಹಳ್ಳಿ ಪುನರ್ವಸತಿ ಮೀನುಗಾರರ ಸಹಕಾರ ಸಂಘ  ಪ್ರಮುಖ ಪಾತ್ರ ವಹಿಸಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜಯಾದವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಗಡಿ ತಾಲೂಕಿನ ಮಂಚನಬೆಲೆ ಪಂಚಾಯ್ತಿ ವ್ಯಾಪ್ತಿಯ ಅವ್ವೇರಹಳ್ಳಿಯಲ್ಲಿ ಮೀನುಗಾರ ಇಲಾಖೆ, ರಾಷ್ಟ್ರೀಯ ಮೀನುಗಾರರ ಅಭಿವೃದ್ಧಿ ಮಂಡಲಿ ಸಹಯೋಗದೊಂದಿಗೆ ಅವ್ವೇರಹಳ್ಳಿ ಮೀನುಗಾರರ ಪುನರ್ವಸತಿ ಮೀನುಗಾರರ ಸಹಕಾರ ಸಂಘದ ಸದಸ್ಯರಿಗೆ ಮೂರು ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೀನುಗಾರರು ತಮ್ಮ ದುಡಿಮೆಯಿಂದ ಜೀವನ ಸುಧಾರಣೆ ಕಷ್ಟ ಸಾಧ್ಯವಾಗಿದ್ದು, ಇಲಾಖೆ ನೀಡುವ ತರಬೇತಿ ಪಡೆಯುವ ಮೂಲಕ ವೈಜ್ಞಾನಿಕವಾಗಿ ಮೀನು ಸಾಕಾಣಿಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಮೀನು ಹಿಡಿದು ಮಾರಾಟ ಮಾಡುವುದರಿಂದ ಆರ್ಥಿಕ ಸುಧಾರಣೆ ಸಾಧ್ಯವಿದೆ. ಆದರೂ ತಮ್ಮ ಮಕ್ಕಳನ್ನು ಮೀನುಗಾರಿಕೆಗೆ ಹೆಚ್ಚು ತೊಡಗಿಸದೆ ಶಿಕ್ಷಣ ನೀಡಬೇಕು. ಅದರಲ್ಲೂ ಹೆಣ್ಣು ಮಕ್ಕಳನ್ನು ಮೀನು ಹಿಡಿಯಲು ಕೆರೆ ಇಳಿಸುವುದು ಬೇಡ, ಮಹಿಳೆಯರು ನೀರಿಗಿಳಿದು ಮೀನು ಹಿಡಿಯಲು ಮಾಡುತ್ತಿರುವ ಧೈರ್ಯ ನಿಜಕ್ಕೆ ಸಾಹಸವೇ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅವ್ವೇರಹಳ್ಳಿ ರಸ್ತೆ ಅಭಿವೃದ್ಧಿಗೆ ಕಾನೂನು ತೊಡಕಿದ್ದು, ಶಾಸಕ ಎಚ್.ಸಿ. ಬಾಲಕೃಷ್ಣ ಅವರೊಂದಿಗೆ ಚರ್ಚಿಸಿ ರಸ್ತೆ ಅಭಿವೃದ್ಧಿ ಪಡಿಸಿ ಡಾಂಬರೀಕರಣಗೊಳಿಸಲು ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರಲ್ಲದೆ ಮೀನುಗಾರರು ಸಂಘದ ಮೂಲಕ  ವಿಮೆ ಮಾಡಿಸಿಕೊಂಡು ಭವಿಷ್ಯದಲ್ಲಿ ಭದ್ರತೆ ಮಾಡಿಕೊಳ್ಳಬೇಕು ಹಾಗೂ ಇಲಾಖೆ ನೀಡುವ ಸೌಲತ್ತು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ರಾಮನಗರ ಜಿಲ್ಲಾ ಮೀನುಗಾರಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಮಾತನಾಡಿ,  ವೈಜ್ಞಾನಿಕವಾಗಿ ಸಮಗ್ರ ಮೀನು ಕೃಷಿಯಿಂದ ಮೀನಿನ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು.ತಂತ್ರಜ್ಞಾನ ಅಳವಡಿಕೆ ಬಹಳ ಮುಖ್ಯ ಎಂದು ತರಬೇತಿ ಕುರಿತು ಹಾಗು ಸಹಾಯಧನ ಕುರಿತು ವಿವರಿಸಿದರು. ಇದೇ ವೇಳೆ ತರಬೇತಿ ಪಡೆದ ಪಲಾನುಭವಿಗಳಿಗೆ ಮೀನಿನ ಬಲೆ ಇತರೆ ಸೌಲತ್ತುಗಳನ್ನು ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ವಿತರಿಸಿದರು. ಅವ್ವೇರಹಳ್ಳಿ ಮೀನುಗಾರರ ಪುನರ್ವಸತಿ ಸಹಕಾರ ಸಂಘದ ಅಧ್ಯಕ್ಷ ಎ.ಬಿ.ಲೋಕೇಶ್  ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಹಂಚೀಕುಪ್ಪೆ ಗ್ರಾಪಂ ಅಧ್ಯಕ್ಷ ಕೂನಯ್ಯ, ಸದಸ್ಯ ಬಾಳೇಗೌಡ, ಕೃಷ್ಣಪ್ಪ, ಅಪ್ಪಾಜಿಗೌಡ, ಮೀನುಗಾರಿಕೆ ಸಹಾಯಕ ನಿರ್ದೇಶಕ ಅನಂತ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.