ಬೆಂಗಳೂರು ಗ್ರಾಮಾಂತರ

ಇಸ್ಪೀಟ್ ಆಟ7 ಮಂದಿ ಸೆರೆ

Published On :

ಪಾವಗಡ: ಇಸ್ಪೀಟ್ ಆಟಗಾರರ ಮೇಲೆ ದಾಳಿ ನಡೆಸಿದ ಪಾವಗಡ ಪೊಲೀಸರು ಆಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಬಂಧಿಸಿ ಅವರಲ್ಲಿದ್ದ 8 ಸಾವಿರ ರು. ನಗದು ಮತ್ತು ಒಂದು ಮಾರುತಿ ಕಾರು, 4 ಬೈಕ್, 6 ಮೊಬೈಲ್ ಸೇರಿ ಒಟ್ಟು 4.5 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುರಸಭೆ ಮಾಜಿ ಸದಸ್ಯ ನಾಗೇಶ್, ವಿ.ಎಸ್. ಕಾನ್ವೆಂಟ್‌ನ ಮುತ್ಯಾಲಪ್ಪ, ಗಂಗಾಧರ್, ಬ್ರಹ್ಮೇಂದ್ರಕುಮಾರ್, ರಾಮಕೃಷ್ಣಪ್ಪ, ಹನುಮಂತರಾಯಪ್ಪ, ಬಾಬು ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪುರಸಭೆ ಸದಸ್ಯ ಬಾಲು ತಲೆಮರೆಸಿಕೊಂಡಿದ್ದಾರೆ. ಪಟ್ಟಣದ ಹೊರವಲಯದ ದಾಳಿಂಬೆ ತೋಟದಲ್ಲಿ ಆಟವಾಡುತ್ತಿದ್ದಾಗ ಭಾನುವಾರ ಸಂಜೆ ಸಿಪಿಐ ಭಾನುಪ್ರಕಾಶ್, ಪಿಎಸ್‌ಐ ರಾಮಕೃಷ್ಣಯ್ಯ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.

'ಅಗ್ಗದ ಮದ್ಯ ಮರುಚಿಂತನೆ ಮಾಡಿ ಸಿಎಂ'
ಹಾಸನ: ಅಗ್ಗದ ಮದ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರುಚಿಂತನೆ ಮಾಡಬೇಕೆಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ತಿಳಿಸಿದ್ದಾರೆ. ಗಾಂಧೀಜಿಯವರ ಆಶಯ, ತತ್ವ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿದೆ. ಸುಖೀ ಸಮಾಜ ನಿರ್ಮಾಣಕ್ಕೆ  ಸಂಪೂರ್ಣ ಮದ್ಯಪಾನ ನಿಷೇಧವಾಗಬೇಕು ಎಂದಿದ್ದಾರೆ. ಕುಡಿತದ ಅಮಲಿನಿಂದಾಗುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರಗಳ ಬಗ್ಗೆ ಪ್ರತಿದಿನ ಮಾಧ್ಯಮಗಳ ಮೂಲಕ  ತಿಳಿಯುತ್ತೇವೆ. ಹೀಗಿದ್ದೂ  ಮುಖ್ಯಮಂತ್ರಿಗಳು ನೀಡಿರುವ  ಹೇಳಿಕೆ ಸಾಮಾಜಿಕ ಪರಿವರ್ತನೆಗೆ ವ್ಯತಿರಿಕ್ತವಾಗಿದೆ.ಈ ಕಾರಣದಿದಂ  ಮುಖ್ಯಮಂತ್ರಿಗಳು ಅಗ್ಗದ ಮದ್ಯದ ಯೋಚನೆ ಕೈ ಬಿಟ್ಟು ಸಂಪೂರ್ಣ ಮದ್ಯಪಾನ ನಿಷೇಧದ ಬಗ್ಗೆ ಚಿಂತನೆ ಮಾಡಿ ಉತ್ತಮ ನಾಗರಿಕ ಸಮಾಜದ ಹರಿಕಾರರಾಗಲೆಂದು ಆಗ್ರಹಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ಬಾಲಕ ಸಾವು
ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ಮೇ 13 ರಂದು ಹಲ್ಲೆಗೊಳಗಾಗಿದ್ದ ಬಾಲಕ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಈ ಸಂಬಂಧ ಕೆಂಗೇರಿ ಪೊಲೀಸರು ಇಬ್ಬರು ಬಾಲಕರು ಸೇರಿ ಮೂವರನ್ನು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಗೌರೀಶ್(17) ಮೃತ ಬಾಲಕ. ಶರತ್ ಅಲಿಯಾಸ್ ಡಬ್ಬಲ್ ಹಾಗೂ ಇಬ್ಬರು ಬಾಲಕರು ಬಂಧಿತರು. ರಂಗ, ಪ್ರಜ್ವಲ್ ಹಾಗೂ ಪಾಲ್ ಪರಾರಿಯಾಗಿರುವವರು. ಬಂಧಿತ ಇಬ್ಬರು ಕಾನೂನು ಸಂಘರ್ಷಕ್ಕೊಳಪಟ್ಟವರಾದ್ದರಿಂದ ಅವರನ್ನು ಮಡಿವಾಳದ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ. ಕಳೆದ ಜನವರಿಯಲ್ಲಿ ಮೋಹನ್ ಮತ್ತು ಆತನ ಸ್ನೇಹಿತರು ಶರತ್ ಹಾಗೂ ಇತರರ ಮೇಲೆ ಹಲ್ಲೆ ಮಾಡಿದ್ದರು. ಹಾಗಾಗಿ ಅವರ ನಡುವೆ ಹಳೆ ವೈಷಮ್ಯ ಇತ್ತು. ಅದೇ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆ ವಿವರ: ಮೇ 13ರಂದು ಗೌರೀಶ್ ಹಾಗೂ ಆತನ ಸ್ನೇಹಿತ ಮೋಹನ ಗಾಂಧಿನಗರ 6ನೇ ಮುಖ್ಯರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದ ಅದೇ ಬಡಾವಣೆಯ ಮೂವರು ಮೋಹನ್ ಜೊತೆ ಜಗಳ ತೆಗೆದರು. ಮೋಹನ್ ಅಲ್ಲಿಂದ ಪರಾರಿಯಾದ. ಆದರೆ, ಏನೂ ತಿಳಿಯದೆ ಅಲ್ಲೇ ನಿಂತಿದ್ದ ಗೌರೀಶ್‌ಗೆ ಚಾಕುವಿನಿಂದ ಇರಿದರು. ತಕ್ಷಣ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

ಬೈಕ್‌ನಿಂದ ಬಂದು ಸರ ಅಪಹರಣ
ಬೆಂಗಳೂರು: ಅಂಗಡಿಯಿಂದ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರ ಸರ ದೋಚಿರುವ ಘಟನೆ ಜೀವನ್‌ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಬಿ.ನಗರ 11ನೇ ಮುಖ್ಯರಸ್ತೆ ನಿವಾಸಿ ಲಕ್ಷ್ಮಿ ಸರ ಕಳೆದುಕೊಂಡವರು. ಶನಿವಾರ ರಾತ್ರಿ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಈ ಕೃತ್ಯವೆಸಗಿದ್ದಾರೆ. ಎದುರಿನಿಂದ ಬೈಕ್‌ನಲ್ಲಿ ಬಂದ ಆರೋಪಿಗಳು ಪೆಟ್ರೋಲ್ ಬಂಕ್ ಎಲ್ಲಿದೆ ಎಂದು ಕೇಳುವ ನೆಪದಲ್ಲಿ ಸರ ದೋಚಿ ಪರಾರಿಯಾಗಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ನೇಣಿಗೆ ಶರಣಾದ ಗೃಹಿಣಿ
ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾವಲ್‌ಭೈರಸಂದ್ರದ ನಿವಾಸಿ ಗ್ರೇಸಿ ಆತ್ಮಹತ್ಯೆ ಮಾಡಿಕೊಂಡವರು. ಶ್ಯಾಂಪುರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ,ಶನಿವಾರ ರಾತ್ರಿ ನೇಣಿಗೆ ಶರಣಾಗಿದ್ದರು.  ಬೆಳಗ್ಗೆ ಮಾಲೀಕರಿಗೆ ಗ್ರೇಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.