ಬೆಂಗಳೂರು ಗ್ರಾಮಾಂತರ

'ಭಗವಾನ್ ಬುದ್ಧನ ಕುರಿತ ಸಾಹಿತ್ಯ ಕನ್ನಡದಲ್ಲಿ ಹೆಚ್ಚು ಬರಲಿ'

Published On :

ಆನೇಕಲ್ಲು: ಸಾಮಾಜಿಕ ಪರಿವರ್ತನೆಯ ಹರಿಕಾರ ಭಗವಾನ್ ಬುದ್ಧನ ಬಗ್ಗೆ ಕನ್ನಡದಲ್ಲಿ ಕಥೆ ಕಾದಂಬರಿ, ಕವನ ಹಾಗೂ ಬರಹಗಳು ವಿರಳವಾಗಿದ್ದು ಕನ್ನಡ ವಿಚಾರವಂತರಿಗೆ ಹೆಚ್ಚು ತಲುಪುವಂತಹ ವಿಚಾರಧಾರೆ ಹರಿಯಬೇಕೆಂದು ಕವಿ ಹೆಬ್ಬಗೋಡಿ ಕೃಷ್ಣಪ್ಪ ತಿಳಿಸಿದ್ದಾರೆ. ಅವರು ಬುದ್ಧ ಪೂರ್ಣಿಮೆ ಅಂಗವಾಗಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಪ್ರಬುದ್ಧ ಪರಿವರ್ತ್ನ ಬಳಗದವರು ಹಮ್ಮಿಕೊಂಡಿದ್ದ ಕಾವ್ಯ ಕಮ್ಮಟದಲ್ಲಿ ಮಾತನಾಡಿ ಬುದ್ಧನ ಆದರ್ಶ ಹಾಗೂ
ತತ್ವಗಳು ಜೀವಂತ ವಿರಬೇಕಾದಲ್ಲಿ ಯುವ ಸಾಹಿತಿಗಳು ಹಾಗೂ ಬರಹಗಾರರು ಬುದ್ಧ ಚರಿತೆಯ ಅಮೂಲಾಗ್ರ ಅದ್ಯಯನ ಮಾಡಿ ಕನ್ನಡದಲ್ಲಿ ಬಿಡಿ ಬರಹಗಳ ಮೂಲಕ ಜನ  ಮಾನಸ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ಕವಿ ವಿಶಾಲ ಆರಾಧ್ಯ ಮಾತನಾಡಿ ಬುದ್ಧ ಎಂದರೆ ಜ್ಞಾನ. ಸಮಾಜದಲ್ಲಿ ಎಲ್ಲರಿಗೂ ಉತ್ತಮ ಬದುಕು ಹಾಗೂ ಸಮಾನ ಅವಕಾಶ ಸಲ್ಲಬೇಕಾದಲ್ಲಿ ಬುದ್ಧನ ತತ್ವ ಅದರ್ಶವಾಗಿದೆ ಎಂದರು.  ಚಿಂತನಕಾರರಾದ ಜಿಗಣಿ ರಾಮಕೃಷ್ಣ,  ಚುಟುಕು ಕವಿ ಆನೇಕಲ್ ಶಂಕರ್, ಕೃಷ್ಣಪ್ಪ, ರಾಮಕೃಷ್ಣಪ್ಪ,  ಅಮರೇಶ್, ಪ್ರತಿಭೆಯನ್ನು ತೋರಿದರು. ಸಾಹಿತಿ ಮಹೇಶ್ ಊಗಿನಹಳ್ಳಿ ಸ್ವಾಗತ ಕೋರಿದರು. ಹುಸ್ಕೂರು ಮುನಿಯಪ್ಪ ನಿರೂಪಣೆ ಮತ್ತು ವಂದನೆ ಸಲ್ಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.