ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ ಇಂದು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನ.11ರ ಸೋಮವಾರ ಇಲ್ಲಿನ ಗುರುಭವನದಲ್ಲಿ ನಡೆಯಲಿವೆ.
ಗಾಯನ, ಆಶುಭಾಷಣ, ಪ್ರಬಂಧ ರಚನೆ, ಟಿಎಲ್ಎಂ ತಯಾರಿಕೆ ಮತ್ತು ಚಿತ್ರಕಲಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿದ್ದು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಾಹಿತಿಗಾಗಿ ಶಿಕ್ಷಣ ಸಂಯೋಜಕ ರಂಜಾನಾಯಕ್ (9448882140) ಸಂಪರ್ಕಿಸಬಹುದು ಎಂದು ಬಿಇಓ ತಿಮ್ಮೇಗೌಡ ತಿಳಿಸಿದ್ದಾರೆ.
ಕಣ್ಣಿನ ಉಚಿತ ಚಿಕಿತ್ಸೆ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 189ನೇ ಮಾಸಿಕ ಉಚಿತ ಕಣ್ಣಿನ ಪರೀಕ್ಷೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಐಓಎಲ್ ಅಳವಡಿಕೆ ಶಿಬಿರ ನ.11ರ ಸೋಮವಾರ ಬೆಳಗ್ಗೆ 9.30ಕ್ಕೆ ಲಯನ್ಸ್ ಭವನದಲ್ಲಿ ನಡೆಯಲಿದೆ. ಶಿಬಿರವನ್ನು ಸೈಟ್ಫಸ್ಟ್ನ ಡಿಸಿ ಕೆ.ಸತ್ಯನಾರಾಯಣರಾಜು ಉದ್ಘಾಟಿಸುವರು. ಮಾಜಿ ಪುರಸಭಾ ಉಪಾಧ್ಯಕ್ಷ ಟಿ.ಎಸ್. ದಯಾಶಂಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ. ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಧನಲಕ್ಷ್ಮಿ ಮತ್ತು ಎಂ.ಆನಂದ್ ಕುಟುಂಬ ಶಿಬಿರವನ್ನು ಪ್ರಾಯೋಜಿಸಿದೆ.
ಬಿಜೆಪಿ ಅಭಿಯಾನ
ದೊಡ್ಡಬಳ್ಳಾಪುರ: ಇಲ್ಲಿನ ಬಿಜೆಪಿ ತಾಲೂಕು ಮತ್ತು ನಗರ ವಿವಿಧ ಘಟಕಗಳ ನೇತೃತ್ವದಲ್ಲಿ ಮುಂದಿನ ನ.17ರಂದು ಬೆಂಗಳೂರಿನಲ್ಲಿ ನಡೆಯುವ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರ ನೋಂದಣಿ ಅಭಿಯಾನ ಕಾರ್ಯಕ್ರಮ ನ.11ರಂದು ಸೋಮವಾರ ಬೆಳಗ್ಗೆ 10.30ಕ್ಕೆ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಆರಂಭವಾಗಲಿದೆ. ಬಿಜೆಪಿ ಕಾರ್ಯಕರ್ತರು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಈಗಾಗಲೇ ಅಭಿಯಾನ ನಡೆಸಿದ್ದು, ನಮೋ ರ್ಯಾಲಿಯಲ್ಲಿ ಪಾಲ್ಗೊಳ್ಳುವ ನರೇಂದ್ರಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸುವಿಕೆ ನೋಂದಣಿ ಮಾಡಿಸಿ ಸಹಕರಿಸುವಂತೆ ತಾಲೂಕು ಮತ್ತು ನಗರ ಬಿಜೆಪಿ ಪ್ರಕಟಣೆ ತಿಳಿಸಿದೆ.
3 ಮರಿಗಳಿಗೆ ಜನ್ಮ ನೀಡಿದ ಕುರಿ
ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಸಮೀಪ ಇರುವ ಊದನಹಳ್ಳಿ ಗ್ರಾಮದಲ್ಲಿ ಕುರಿಯೊಂದು 3 ಮರಿಗಳಿಗೆ ಜನ್ಮನೀಡಿ ಜನಾಕರ್ಷಣೆಗೆ ಪಾತ್ರವಾಗಿದೆ. ಇಲ್ಲಿನ ಮರಿಯಪ್ಪ ಎಂಬುವವರು ಮನೆಯಲ್ಲಿ ಸಾಕಿರುವ ಕುರಿ ಭಾನುವಾರ ಬೆಳಗ್ಗೆ 3 ಮರಿಗಳಿಗೆ ಜನ್ಮ ನೀಡಿದ್ದು ಎಲ್ಲ ಮರಿಗಳೂ ಆರೋಗ್ಯವಾಗಿವೆ. ಕಳೆದ 1 ವರ್ಷದ ಹಿಂದೆ ಈ ಕುರಿಯನ್ನು ಮರಿಯಪ್ಪ ಖರೀದಿಸಿ ತಂದಿದ್ದರು. ಇಲ್ಲಿಯವರೆಗೆ 2 ಬಾರಿ ಮರಿ ಹಾಕಿರುವ ಈ ಕುರಿ ಮೊದಲ ಬಾರಿ 1 ಮರಿಗೆ ಜನ್ಮ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

