'ಬದುಕು, ಚಿಂತನೆ ಒಂದಾಗಿದ್ದಾಗ ಉತ್ತಮ ಸಾಹಿತ್ಯ ಸಾಧ್ಯ'
ಕ.ಪ್ರ.ವಾರ್ತೆ ಮಾಗಡಿ ನ. 11
ಬದುಕು ಮತ್ತು ಚಿಂತನೆಗಳು ಒಂದಾಗಿದ್ದಾಗ ಮಾತ್ರ, ಅಲ್ಲಿ ಉತ್ತಮ ಸಾಹಿತ್ಯ ಮೂಡಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ತಾ.ನಂ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಪ್ರತಿಭಾ ಕೇಂದ್ರ ಸುಂಯುಕ್ತಾಶ್ರಯದಲ್ಲಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಹೆಬ್ಬಳಲು ಗ್ರಾಮದಲ್ಲಿ ಏರ್ಪಡಿಸಿದ್ದ ಪಾನ್ಯಂ ನಟರಾಜು ದತ್ತಿ ಉಪನ್ಯಾಸ ಮತ್ತು ಎಚ್.ವಿ. ನಂಜುಂಡಯ್ಯ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ತಿದ್ದುವ ಮತ್ತು ಸರಿದಾರಿಗೆ ತರಬೇಕಾದರೆ ಮಾಧ್ಯಮಗಳ ಪಾತ್ರ ಬಹಳ ಮಹತ್ವದ್ದು, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮನುಷ್ಯನ ಅಂತರಂಗವನ್ನು ಶುದ್ಧೀಕರಿಸುತ್ತಾ ನೆಮ್ಮದಿಯಿಂದರಿಸುತ್ತವೆ. ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ನಡೆ, ನುಡಿ ಮತ್ತು ಭಾಷೆಯನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದ ತಾ.ನಂ. ಕುಮಾರಸ್ವಾಮಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಬಹುಪಾಲು ಹಿಂಸೆ, ಕ್ರೌರ್ಯಗಳನ್ನೇ ಹೆಚ್ಚಾಗಿ ವೈಭವೀಕರಿಸುತ್ತಿವೆ.
ಇವುಗಳನ್ನು ಅಷ್ಟೊಂದು ವೈಭವೀಕರಿಸುವುದು ಬೇಡ, ಮಾಧ್ಯಮಗಳು ಪಾರಂಪರಿಕ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡಿದಾಗ ಮನುಷ್ಯ ಬದಲಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಚ್.ವಿ. ನಂಜುಂಡಯ್ಯ ಅವರ ಕುರಿತು ಪತ್ರಕರ್ತ ಸಿ. ಸೀತಾರಾಂ ಮಾತನಾಡಿ ಮೈಸೂರು ವಿಶ್ವ ವಿದ್ಯಾಲಯದ ಮೊದಲ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಎಚ್.ವಿ. ನಂಜುಂಡಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿರಬೇಕಿತ್ತು ಎಂದು ಅಂದಿನ ಪತ್ರಿಕೆಗಳು ಬರೆದಿದ್ದವು. ಡಾ. ರಾಧಾಕೃಷ್ಣನ್ ಅವರಿಗೆ ಉಪನ್ಯಾಸಕ ಹುದ್ದೆಯನ್ನು ಕೊಡಿಸಿಕೊಟ್ಟವರು ಹೆಬ್ಬಳಲು ವಿ.ನಂಜುಂಡಯ್ಯನವರಾಗಿದ್ದರು. ಇಂತಹ ಮೇದಾವಿ ನಂಜುಂಡಯ್ಯ ಅವರ ಭಾವಚಿತ್ರ ಇಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಲ್ಲದಂತಿಲ್ಲ. ತಾಲೂಕು ಆಡಳಿತ ಮಂಡಳಿಯಾದರೂ ಹೆಬ್ಬಳಲು ನಂಜುಂಡಯ್ಯ ಅವರ ಪ್ರತಿಮೆಯನ್ನಾದರೂ ಮಾಡಿಸಬೇಕಿದೆ ಎಂದು ಒತ್ತಾಯಿಸಿದರು.
ಜಿ.ಪಂ. ಸದಸ್ಯ ಎಂ.ಕೆ.ಧನಂಜಯ್ಯ, ಮಾಜಿ ಅಧ್ಯಕ್ಷ ಸಿ.ಜಯರಾಂ ಮಾತನಾಡಿದರು.
ಪ್ರಶಸ್ತಿ: ತಾ.ಕಸಾಪ ಅಧ್ಯಕ್ಷ ಗಂ.ದಯಾನಂದ್, ಎಚ್.ವಿ. ನಂಜುಂಡಯ್ಯ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ತಾ.ಕಸಾಪ ಅಧ್ಯಕ್ಷ ಗಂ.ದಯಾನಂದ ಘೋಷಿಸಿದರು. ತಾಲೂಕಿನ ಕಲೆ, ಸಾಹಿತ್ಯ, ಸಂಗೀತ, ನೃತ್ಯ,ನಾಟಕ ವಿದ್ವತ್ ಇಂತಹ ವಿಷಯಗಳಿಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸತ್ಕರಿಸಲಾಗುವುದು.
ಜತೆಗೆ 10 ಸಾವಿರ ರು. ಹಾಗೂ ನೆನಪಿನ ಕಾಣಿಕೆ ಸಹ ನೀಡುವುದಾಗಿ ತಿಳಿಸಿದರು. ಹತ್ತನೆ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಅಂತರರಾಷ್ಟ್ರೀಯ ಛಾಯಚಿತ್ರ ಗ್ರಾಹಕ ಎ.ಎಚ್. ಪ್ರವೀಣ್‌ಕುಮಾರ್ ಸನ್ಮಾನಿಸಿದರು. ಕೋಲಾಟ,ಜವಳಿ, ಪಟದ ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಲ್ಕೆರೆಶಿವಣ್ಣ, ವಿಜಯಾನಾಗೇಶ್, ಪಾನ್ಯಂ. ನಟರಾಜು, ಎಂ.ಆರ್. ರಾಮಸ್ವಾಮಿ, ಮೀಸೆ ನರಸಿಂಹಯ್ಯ, ಕಲ್ಪನಾಶಿವಣ್ಣ, ಶ್ರೀಕಂಠಯ್ಯ, ಲೋಹಿತಾಶ್ವ, ಬಾವಾನಿ ರಾಮನಾಥ್, ಕೆ.ಪಿ. ವೆಂಕಟೇಶ್, ನಟಿ ಸೌಮ್ಯ, ಪದ್ಮನಾಭ್, ಕೃಷ್ಣಪ್ಪ, ಗ್ರಾ.ಪಂ. ಸದಸ್ಯ ದೊಡ್ಡನರಸಿಂಹಯ್ಯ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

