ಬೆಂಗಳೂರು ಗ್ರಾಮಾಂತರ

ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೆ ಬರಲಿ: ಒತ್ತಾಯ

Published On :

ದೊಡ್ಡಬಳ್ಳಾಪುರ:  ಮೂಡನಂಬಿಕೆ ಆಚರಣೆ ನಿಷೇಧ ಮಸೂದೆ ಜಾರಿಗೆ ತರುವ ಬಗ್ಗೆ ಹಿಂಜರಿಯುವುದು ಬೇಡ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಬಾನಾಮತಿ, ಕಂದಾಚಾರ, ವಾಮಾಚಾರ, ನರಬಲಿ, ಪವಾಡ, ಜ್ಯೋತಿಷ್ಯದಂತಹ ಆಚರಣೆಗಳ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಸ್ವಹಿತಾಸಕ್ತಿಗಾಗಿ ಕರಡು ಮಸೂದೆ ವಿರೋಧಿಸುವ ಮೊದಲು ಸತ್ಯಾಸತ್ಯತೆಯ ಅರಿವು ಮುಖ್ಯ. ರಾಜಕೀಯಕ್ಕಾಗಿ ವಿರೋಧ ಎನ್ನುವಂತಾಗಬಾರದು. ದುರ್ಬಲ ಮನಸ್ಸು ನೆಮ್ಮದಿಯಿಂದ ಬದುಕಬೇಕಾದರೆ ಮಸೂದೆ ಜಾರಿಯಾಗಬೇಕು. ಮೂಡನಂಬಿಕೆ ಹೆಸರಲ್ಲಿ ಮಾನಸಿಕ ಅಸ್ವಸ್ಥರನ್ನಾಗಿರುವ ಈ ಹಗಲು ದರೋಡೆ ಬೇಕೇ ಬೇಡವೇ ಎಂಬುದನ್ನು ಜನ ನಿರ್ಧರಿಸಲಿ. ಧ್ವನಿಯೆತ್ತುವ ಮೊದಲು ನಂಬಿಕೆ ಮತ್ತು ಮೌಢ್ಯದ ಅರ್ಥ ತಿಳಿದುಕೊಳ್ಳಲಿ ಎಂದು ಅವರು ಹೇಳಿದ್ದು, ಮುಖ್ಯಮಂತ್ರಿಗಳು ಬಹಿರಂಗ ಚರ್ಚೆ ಅವಕಾಶ ನೀಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.