ಅಂಗವಿಕಲ ಮಗು ಹುಟ್ಟಿದ್ದಕ್ಕೆ ವೈದ್ಯರೆ ಕಾರಣ: ಪೊಲೀಸರಿಗೆ ದೂರು
ದೇವನಹಳ್ಳಿ: ದೇವನಹಳ್ಳಿಯ ಶಾಂತಿನಗರದಲ್ಲಿ ವಾಸವಾಗಿರುವ ಲಕ್ಷ್ಮೀ ನಾಗರಾಜ್ ಎಂಬುವರು ಗರ್ಭವತಿಯಾಗಿದ್ದು ಹೆರಿಗೆ ಸಂದರ್ಭದಲ್ಲಿ ಇಲ್ಲಿನ ಶಿರಡಿ ಸಾಯಿ ಆಸ್ಪತ್ರೆಯ ವೈದ್ಯರು ಸರಿಯಾದ ಆರೋಗ್ಯ ಸೇವೆ ನೀಡದೇ ಇದ್ದ ಕಾರಣದಿಂದಾಗಿ ತಮಗೆ ಅಂಗವಿಕಲತೆಯಿರುವ ಮಗು ಹುಟ್ಟಿದೆ ಎಂದು ಆರೋಪಿಸಿ ದೇವನಹಳ್ಳಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಇಲ್ಲಿನ ಲಕ್ಷ್ಮಿ ನಾಗರಾಜು ಎಂಬುವರು ಎರಡನೇ ಮಗುವಿಗೆ ಹೆರಿಗೆ ಸಂಬಂಧಿಸಿದಂತೆ ಶಿರಡಿ ಸಾಯಿ ಆಸ್ಪತ್ರೆಯ ಮಹಿಳಾ ವೈದ್ಯೆ ಡಾ.ಸುನಿತಾ ಎಸ್.ಮೂರ್ತಿ ಎಂಬುವರ ಹತ್ತಿರ ಮೇ 5 ರಿಂದ ನ.5ರವರೆಗೆ ಅವರು ಸೂಚಿಸಿದ ದಿಗಳಲ್ಲಿ ಬಂದು ಸೂಕ್ತ ಚಿಕಿತ್ಸೆ ಪಡೆದರು. ಸ್ಕ್ಯಾನಿಂಗ್ ಮಾಡಿಸಲಾಗಿದ್ದು ಅದರಲ್ಲಿ ಬೆಳೆಯುತ್ತಿರುವ ಮಗು ಆರೋಗ್ಯವಾಗಿದ್ದು ಬೆಳವಣಿಗೆ ಚೆನ್ನಾಗಿದೆ. ಯಾವುದೇ ತೊಂದರೆಗಳಿಲ್ಲ ಎಂದು ವರದಿ ನೀಡಿದ್ದು ನ.10 ರಂದು ಹೆರಿಗೆಯಾಗಬಹುದೆಂದು ದಿನಾಂಕ ತಿಳಿಸಿದ್ದರು. ನ.10 ರಂದು ವೈದ್ಯರಿಗೆ ಕರೆ ಮಾಡಿದಾಗ ವೈದ್ಯರು ಮೀಟಿಂಗ್ನಲ್ಲಿ ಇದ್ದಾರೆ ಎಂದು ಮೆಸೇಜ್ ಮಾಡಿರುತ್ತಾರೆ. ಹೆರಿಗೆ ನೋವು ಹೆಚ್ಚಾದ್ದರಿಂದ ಆವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷ್ಮೀಯವರಿಗೆ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾರೆ. ಆದರೆ ಮಗುವಿನ ಬಲಗೈನ ಒಂದು ಬೆರಳು ಮತ್ತು ಬಲಗಾಲಿನ ನಾಲ್ಕು ಬೆರಳುಗಳು ಬೆಳವಣಿಗೆಯಲ್ಲಿ ಕುಂಠಿತವಾಗಿವೆ.
ಅಂಗವಿಕಲತೆ ಬಗ್ಗೆ ಶಿರಡಿ ಸಾಯಿ ಆಸ್ಪತ್ರೆಯ ವೈದ್ಯರಿಗೆ ತಿಳಿಸಿದರೂ ಅವರು ಬರದೆ ನಿರಾಕರಿಸಿದ್ದಾರೆ. ಅಲ್ಲದೆ ನ.12 ರಂದು ಆಸ್ಪತ್ರೆಗೆ ಮಗುವಿನ ಸಮೇತ ಶಿರಡಿ ಸಾಯಿ ಆಸ್ಪತ್ರೆಗೆ ಬಂದರೂ ವೈದ್ಯರು ಯಾವುದೇ ಚಿಕಿತ್ಸೆ ನೀಡಿಲ್ಲ. ಅಲ್ಲದೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿ ವೈದ್ಯರ ನಿರ್ಲಕ್ಷವೇ ಕಾರಣ ಇವರ ವಿರುದ್ದ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

