'ಪುಸ್ತಕ ಓದುವ ಹವ್ಯಾಸ ಅಗತ್ಯ'
ನೆಲಮಂಗಲ: ಶಿಕ್ಷಕ ವೃತ್ತಿಯಲ್ಲಿ ಯಶಸ್ಸುಗಳಿಸಬೇಕಾದರೆ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದರೆ ಮಕ್ಕಳಿಗೆ ಅವಶ್ಯ ಮಾಹಿತಿ ನೀಡುವುದರಿಂದ ವಿದ್ಯಾರ್ಥಿಗಳ ಮನದಲ್ಲಿ ಅಚ್ಚು ಮೆಚ್ಚಿನ ಗುರುಗಳಾಗಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ತಿಳಿಸಿದರು. ಅವರು ಬುಧವಾರ ಪಟ್ಟಣದ ಅಡೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ದೀಪ ತಾನು ಉರಿದು ಇತರರಿಗೆ ಬೆಳಕನ್ನು ನೀಡುವಂತೆ ಶಿಕ್ಷಕ ಸದಾ ಮಕ್ಕಳಿಗೆ ಜ್ಞಾನವನ್ನು ಹಂಚುವುದು ನಿಜವಾದ ವೃತ್ತಿ ಧರ್ಮ. ಅದಕ್ಕಾಗಿ ಮಕ್ಕಳೊಂದಿಗೆ ಸೌಜನ್ಯದಿಂದ ಮತ್ತು ಪ್ರೀತಿ ವಿಶ್ವಾಸದಿಂದ ಮಕ್ಕಳ ಮನಸ್ಸನ್ನು ಗೆಲ್ಲುವ ಮೂಲಕ ಪಠ್ಯ ವಸ್ತುವಿನಲ್ಲಿ ವಿಷಯಗಳನ್ನು ಅರ್ಥಪೂರ್ಣವಾಗಿ ತಿಳಿಸುವ ಕೌಶಲ್ಯ ಹೊಂದಬೇಕು ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ತಾಲ್ಲೂಕು ಉತ್ತಮ ಸಾಧನೆಯನ್ನು ಗಳಿಸುತ್ತ ಬಂದಿದೆ. ಮುಂದೆಯೂ ತಾಲೂಕು ಸ್ಥಾನವನ್ನು ಉಳಿಸಿಕೊಂಡು ಹೋಗಲು ತಾಲೂಕಿನ ಶಿಕ್ಷಕ ಸಮುದಾಯ ಶ್ರಮ ವಹಿಸಬೇಕು ಎಂದು ಶಿಕ್ಷಣ ಸಂಯೋಜಕ ಆಂಜಿನಪ್ಪ ಶಿಕ್ಷಕರಿಗೆ ತಿಳಿಸಿದರು.
ಶಿಕ್ಷಕರಿಗಾಗಿ ಗಾಯನ, ಆಶುಭಾಷಣ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಸ್ಥಳದಲ್ಲೆ ಚಿತ್ರ ಬಿಡಿಸುವ 5 ಸ್ಪರ್ಧೆಗಳನ್ನು ನಡೆಸಲಾಯಿತು. ಪ್ರಾಥಮಿಕ ಶಾಲಾ ಹಂತದಲ್ಲಿ ಒಟ್ಟು ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರೌಡಶಾಲಾ ವಿಭಾಗದಿಂದ ಶಿಕ್ಷಕರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿಜೇತರಾದ ಶಿಕ್ಷಕರು: ಪ್ರಾಥಮಿಕ ಶಾಲಾ ವಿಭಾಗ: ಆಶುಭಾಷಣ ನರಸಿಂಹರಾಜು ವೀರಸಾಗರ ಶಾಲಾ ಶಿಕ್ಷಕ (ಪ್ರಥಮ) ರೂಪ ಪಬ್ಲಿಕ್ ಶಾಲೆ ಲಕ್ಕೂರು (ದ್ವಿತೀಯ)
ಪ್ರೌಢಶಾಲೆ: ವಿ.ರವಿಕುಮಾರ್ ಬೈರನಾಯಕನಹಳ್ಳಿ ಸರ್ಕಾರಿ ಶಾಲೆ (ಪ್ರಥಮ) ಮೋಹನ್ಕುಮಾರ್ ಸರ್ಕಾರಿ ಶಾಲೆ ಬರದಿ ಮಂಡಿಗೆರೆ.
ಗಾಯನ: ಕುಮಾರ್(ಪ್ರಥಮ) ಶಶಿಕಲ ಪಬ್ಲಿಕ್ ಸ್ಕೂಲ್ ದಾಬಸ್ಪೇಟೆ (ದ್ವಿತೀಯ) ಎಂ.ಆರ್.ನಟರಾಜು ಕಂಬಾಳು ಶಾಲೆ (ಪ್ರಥಮ) ಲೀಲಾ ಕೃಷ್ಣ ಸೋಲದೇವನಹಳ್ಳಿ ಶಾಲೆ (ದ್ವಿತೀಯ)
ಪ್ರಬಂಧ: ರೇಣುಕಮ್ಮ ವಾಜರಹಳ್ಳಿ ಶಾಲೆ (ಪ್ರಥಮ) ರೇವಮ್ಮ ಅಡೇಪೇಟೆ ಶಾಲೆ (ದ್ವಿತೀಯ)
ಪ್ರೌಢಶಾಲಾ ವಿಭಾಗ: ಹೇಮಾವತಿ ಸೋಲದೇವನಹಳ್ಳಿ (ಪ್ರಥಮ) ಪ್ರವೀಣ್ಕುಮಾರ್ (ದ್ವಿತೀಯ) ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಭಾಗವಹಿಸಬೇಕಾಗುತ್ತದೆ.
ಟಿ.ಗಂಗರಾಜು, ಮುತ್ತಗಂಗಯ್ಯ, ಬೈಲಪ್ಪ, ಅಕ್ಷರದಾಸೋಹದ ಪ್ರಕಾಶ್, ಗುರುಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

