ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸದೃಢತೆಗಾಗಿ ಆಟದ ಮೈದಾನ ನಿರ್ಮಾಣ: ಬಾಲಕೃಷ್ಣ
ಕ.ಪ್ರ.ವಾರ್ತೆ ಮಾಗಡಿ ನ.14
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಆಟದ ಮೈದಾನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಮಣಿಗನಹಳ್ಳಿ ಶಾಲಾ ಆವರದಲ್ಲಿ ರಾಷ್ಟ್ರೀಯ ಮಕ್ಕಳ ದಿನಾಚರಣೆ ಪ್ರಯುಕ್ತ ನೂತನ ಆಟದ ಮೈದಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಪ್ರತಿ ಹೋಬಳಿಗೊಂದು ಸುಂದರವಾದ ಸುಸಜ್ಜಿತ ಆಟದ ಮೈದಾನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಪೂರಕ ವಾತಾವರಣದ ಜತೆಗೆ ದೈಹಿಕ ಬೆಳವಣಿಗೆಗೂ ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದರು.ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಅಗತ್ಯವಿರುವಡೆ ಶಾಲಾ ಕಾಲೇಜುಗಳನ್ನು ಬಾಲಕೃಷ್ಣ ಪ್ರಾರಂಭಿಸಿದ್ದಾರೆ. ಈಗ ಆಟದ ಮೈದಾನ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದು, ಮಕ್ಕಳ ಶೈಕ್ಷಣಿಕವಾದ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ರೂಫಿಸಲು ಮುಂದಾಗಿದ್ದಾರೆ. ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರುವುದರ ಜತೆಗೆ ಕ್ರೀಡೆಗಳಲ್ಲೂ ತಾಲೂಕಿನ ಕೀರ್ತಿ ಪತಾಕೆ ಹಾರಿಸುವಂತೆ ಕರೆ ನೀಡಿದರು. ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್, ಮಣಿಗನಹಳ್ಳಿ ಮುಖ್ಯಶಿಕ್ಷಕ ನಾರಾಯಣ್, ಎಂಆರ್. ರಾಮಸ್ವಾಮಿ, ಜಯರಾಮು, ನಾಗರಾಜು, ಪಿಡಿಓ ರಾಮಚಂದ್ರು, ತಾ.ಪಂ. ಇಓ ಕೆ.ಬಿ. ಅಕ್ಕೋಜಿ, ರಾಜಣ್ಣ, ಮೂರ್ತಿ, ಕುಮಾರ್, ಹನುಮಂತಪ್ಪ, ಕೃಷ್ಣ, ಜಿ.ಪಂ.ಸದಸ್ಯ ಹಂಸಕುಮಾರಿ, ನಾಗೇಶ್, ವಿಜಯಣ್ಣ ಇತರರು ಇದ್ದರು.
ವಿಕಲಚೇತನ ಮಕ್ಕಳ ಪೋಷಕರೊಂದಿಗೆ ಆಪ್ತ ಸಮಾಲೋಚನೆ
ನೆಲಮಂಗಲ: ಪೋಷಕರ ನಿರ್ಲಕ್ಷದಿಂದ ಮಕ್ಕಳು ವಿಕಲಚೇತನರಾಗಿ ಹುಟ್ಟಿದ್ದಾರೆ ಹೊರತು ಮಗುವಿನ ಪಾಪ ಕರ್ಮದ ಫಲವಲ್ಲ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಂಗರಾಜು ತಿಳಿಸಿದರು. ಅವರು ಗುರುವಾರ ಪಟ್ಟಣದ ಬಿ.ಆರ್.ಸಿ. ಕಚೇರಿಯಲ್ಲಿ ನಡೆದ ವಿಕಲ ಚೇತನ ಮಕ್ಕಳ ಪೋಷಕರೊಂದಿಗೆ ಆಪ್ತ ಸಮಾಲೋಚನೆ ಸಭೆಯಲ್ಲಿ ಮಾತನಾಡುತ್ತಾ ಮಗು ವಿಕಲಚೇತನವಾಗಿದ್ದರೂ ಅಂಥ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಮಗುವಿನ ಮನೆಯ ಬಳಿಗೆ ಸಂಯೋಜಕರನ್ನು ಕಳಿಹಿಸಿ ಮಗುವಿಗೆ ಅಗತ್ಯವಾದಷ್ಟು ಶಿಕ್ಷಣವನ್ನು ಕಲಿಸುವ ವ್ಯವಸ್ಥೆ ಇದೆ. ಮಗು ಶಾಲೆಗೆ ಬರಲು ಸಹಾಯವಾಗಲು ಟ್ರೈಸಿಕಲ್ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ರಾಂಪ್ಸ್ ಮತ್ತು ವಿದ್ಯಾರ್ಥಿ ವೇತನ ಸೇರಿದಂತೆ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಗೆ ಸರ್ಕಾರದಿಂದಲೇ ಹಣಕಾಸಿನ ಸೌಲಭ್ಯವನ್ನು ಸಹ ನೀಡುತ್ತಿದೆ. ಪೋಷಕರು ಯಾವ ಕಾರಣಕ್ಕು ಮಗುವನ್ನು ಶಿಕ್ಷಣದಿಂದ ವಂಚಿತರಾಗದಂತೆ ಸಹಕಾರ ನೀಡಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

