ಮಧು ಮೇಹಿ ರೋಗಿಗಳ ಅಂಗ ರಕ್ಷಣೆ ಸಾಧ್ಯ: ದೇವಿ ಶೆಟ್ಟಿ
ಕ.ಪ್ರ. ವಾರ್ತೆ, ಆನೇಕಲ್ಲು, ನ.16
ಭಾರತವು ಮಧುಮೇಹಿ ರೋಗಿಗಳ ರಾಜಧಾನಿ ಎಂಬ ಅಪಖ್ಯಾತಿಗೆ ಒಳಗಾಗಿರುವುದು ನೋವಿನ ಸಂಗತಿ. ಈ ಅಪವಾದ ತಪ್ಪಿಸಿ ರೋಗಿಗಳು ನೆಮ್ಮದಿಯ ಜೀವನ ನಡೆಸಲು ಬೇಕಾದ ಅತ್ಯಾಧುನಿಕ ಸೌಲಭ್ಯದ ಕ್ಲಿನಿಕ್ ಅನ್ನು ನಾರಾಯಣ ಹೆಲ್ತ್ ಸಿಟಿ ಆವರಣದಲ್ಲಿ ತೆರೆಯಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಖ್ಯಾತ ಹೃದಯ ತಜ್ಞ ಡಾ. ದೇವೀ ಶೆಟ್ಟಿ ತಿಳಿಸಿದ್ದಾರೆ.
ಅವರು ತಾಲೂಕಿನ ನಾರಾಯಣ ಹೆಲ್ತ್ ಸಿಟಿ ಮತ್ತು ಅಂತಾರಾಷ್ಟ್ರೀಯ ಕಾನ್ವಟೆಕ್ ಸಂಸ್ಥೆಯ ಸಹಯೋಗದದೊಂದಿಗೆ ವಿಶ್ವ ಮಧುಮೇಹ ದಿನಾಚರಣೆಯಂದು ಡಯಾಬಿಟಿಕ್ ಅಂಗ ರಕ್ಷಣೆ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಮಧು ಮೇಹಿ ರೋಗಿಗಳಿಗೆ ಬಹು ಬೇಗ ಅಲ್ಸರ್ ಆಗಿ ಹುಣ್ಣು ಗುಣಮುಖವಾಗದೇ ಅಂಗ ಕಳೆದುಕೊಳ್ಳಬೇಕಾದ ಸ್ಥಿತಿ ಇದೆ. ಆದರೆ ಇತ್ತೀಚಿನ ವೈದ್ಯಕೀಯ ತಾಂತ್ರಿಕತೆ ಹಾಗೂ ಔಷಧಗಳ ಸಹಕಾರದಿಂದ ಇನ್ನು ಮುಂದೆ ಗ್ಯಾಂಗರಿನ್ನಂತಹ ಅಂಗ ಛೇದನ ತಡೆಯಬಹುದಾದ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಲಭ್ಯವಿದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳಿಂದ ಗಾಯ ಗುಣಮುಖ ಹೊಂದಿ ಹೊರಭಾಗದ ರಕ್ತ ಪರಿಚಲನೆಯ ಮೌಲ್ಯೀಕರಣ ತಿಳಿಯಬಹುದಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಇದೆ ಎಂದರು. ಕಾನ್ವೆಟಿಕ್ ಏಸಿಯಾ ಪೆಸಿಫಿಕ್ ವಿಭಾಗದ ಅಧ್ಯಕ್ಷ ಜಾನ್ ಎಂ. ಲಿಂಡ್ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

