ಅನುಭವಕ್ಕಿಂತ ಮತ್ತೊಂದು ಜ್ಞಾನವಿಲ್ಲ: ದೇವೇಗೌಡ
ಕ.ಪ್ರ. ವಾರ್ತೆ ಮಾಗಡಿ ನ.18
ಅನುಭವಕ್ಕಿಂತ ಮತ್ತೊಂದು ಜ್ಞಾನವಿಲ್ಲ ಎಂದು ಸಂಸದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಕುದೂರು ಹೋಬಳಿ ಕಳ್ಳೀಪಾಳ್ಯದಲ್ಲಿನ ಭಕ್ತ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಲಕ್ಷ ದೀಪೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ, ಅನುಭವ ಎಲ್ಲಾ ಜ್ಞಾನ ಸಂಪತ್ತಾಗಿದೆ. ಆಸ್ತಿಕರಿಗೆ ದೇವರಿದ್ದಾನೆ, ನಾಸ್ತಿಕರಿಗೆ ದೇವರಿಲ್ಲ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಸನಾತನ ಧರ್ಮದಲ್ಲಿ ದೇವರು, ಧರ್ಮ, ಸಂಸ್ಕೃತಿ, ಧಾರ್ಮಿಕ ಆಚರಣೆಗಳು ನಂಬಿಕೆ ತಳಹದಿಯಲ್ಲಿ ನಡೆದಿದೆ ಎಂದರು.
ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಭಕ್ತ ಮುನೇಶ್ವರಸ್ವಾಮಿ ಕುರಿತು ಭಕ್ತಿಗೀತೆ ಧ್ವನಿ ಸುರುಳಿಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬಿಡುಗಡೆಗೊಳಿಸಿದರು.
ಭಕ್ತ ಮುನೇಶ್ವರಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗಸ್ವಾಮಯ್ಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಎಚ್.ಎಂ. ಕೃಷ್ಣಮೂರ್ತಿ ಧಾರ್ಮಿಕ ಆಚರಣೆ ಕುರಿತು ಮಾತನಾಡಿದರು. ಕೃಷ್ಣ, ನಾಗರಾಜು, ಗುತ್ತಿಗೆದಾರ ತಮ್ಮಯ್ಯ, ಜಯಕುಮಾರ್, ಗಂಗಬೋರಯ್ಯ, ರಾಜಣ್ಣ, ವೆಂಕಟೇಶ್, ಮೂರ್ತಿ, ಕೆಂಪಣ್ಣ, ಶೇಖರ್, ಚಿಕ್ಕವೀರಯ್ಯ, ಎಂ.ಆರ್. ರಾಮಸ್ವಾಮಿ,ರಂಗಪ್ಪ, ನಾರಸಂದ್ರ ಎಂ.ಎಚ್. ಸುರೇಶ್, ಹನುಮಂತಯ್ಯ, ದಯಾನಂದ್, ಗೋಪಾಲಯ್ಯ, ಮೂರ್ತಿ, ಗೀತಾ, ಪುಷ್ಪ, ನಳಿನಿ, ರಘು, ಬಾಲಕೃಷ್ಣ, ಚಂದ್ರಶೇಖರ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ನಾಳೆ ನೋಂದಣಿ ಅಭಿಯಾನ
ಚನ್ನಪಟ್ಟಣ: ನ.20ರಂದು ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮಾಸ್ತಮ್ಮ ವಾಣಿ ಕಾರ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸು.ತ. ರಾಮೇಗೌಡ ಉದ್ಘಾಟನೆ ನೆರವೇರಿಸಲಿದ್ದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಶಿವಮಾದು ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ವಕೀಲರ ಸಂಘದ ಅಧ್ಯಕ್ಷ ಹನುಮಂತೇಗೌಡ ಪರಿಷತ್ತಿನ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಗರಸಭಾ ಸದಸ್ಯ ಪಿ. ಮಧು ಹಾಗೂ ಪತ್ರಕರ್ತ ಡಿ.ಎಂ. ಮಂಜುನಾಥ್ ಉಪಸ್ಥಿತರಿರುತ್ತಾರೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ವಿಜಯ್ ರಾಂಪುರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

