ಬೆಂಗಳೂರು ಗ್ರಾಮಾಂತರ

ಮರಳು ದಂಧೆ; ದಲಿತರ ಸ್ಮಶಾನ ಬಲಿ

Published On :

ಕ.ಪ್ರ.ವಾರ್ತೆ ಸೂಲಿಬೆಲೆ ನ.21
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯಲ್ಲಿರುವ ಕೆಲ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಫಿಲ್ಟರ್ ಮರಳುಗಾರಿಕೆ ಪರಿಸರವನ್ನು ಮಾತ್ರವಲ್ಲದೇ ದಲಿತರ ಸ್ಮಶಾನ ಭೂಮಿಯನ್ನು ನುಂಗಿ ನೀರು ಕುಡಿಯಲು ಮುಂದಾಗಿದ್ದು, ಸ್ಮಶಾನವನ್ನು ರಕ್ಷಣೆ ಮಾಡಿ ಎಂದು ಗ್ರಾಮಸ್ಥರು ತಹಸೀಲ್ದಾರಿಗೆ ಮೊರೆಯಿಟ್ಟಿದ್ದಾರೆ.
ನಂದಗುಡಿ ಹೋಬಳಿಯ ಲಿಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ನಾನಾ ಕಡೆ ಅಕ್ರಮವಾಗಿ ಫಿಲ್ಟರ್ ಮರಳುಗಾರಿಕೆ ನಡೆಯುತ್ತಿದ್ದು, ಸರ್ಕಾರಿ ಮತ್ತು ಖಾಸಾಗಿ ಭೂಮಿಗಳಲ್ಲದೇ, ಕೆರೆ, ಕುಂಟೆ ಇತ್ಯಾದಿ ಸ್ಥಳಗಳಲ್ಲಿ ರಾಜರೋಷವಾಗಿ ಮುನ್ನಡೆಯುತ್ತಿದೆ. ಖರಾಬ ಜಾಗವಲ್ಲದೆ ಖಾಸಗಿ ಭೂಮಿಗಳ ಸುತ್ತ ಪಿಲ್ಟರ್ ತಯಾರಿಕೆ ಘಟಕಗಳನ್ನು ಸ್ಥಾಪನೆ ಮಾಡಿಕೊಂಡಿರುವ ಕೆಲವರು ಮಣ್ಣನ್ನು ಅಗೆದು ಅದನ್ನು ಯಂತ್ರದಲ್ಲಿ ಶೋಧಿಸಿದ್ದಾರೆ. ಮಣ್ಣನ್ನು ಅಗೆಯುತ್ತಾ ಎಲ್ಲಡೆ ಗುಂಡಿಗಳನ್ನು ಮಾಡಿದ್ದಾರೆ. ಲಿಂಗಾಪುರ ಗ್ರಾಮದಲ್ಲಿ ಹೆಚ್ಚಾಗಿ ದಲಿತರಿದ್ದು, ಇವರಿಗೆಂದು ನೀಡಿರುವ ಸ್ಮಶಾನ ಭೂಮಿಯನ್ನು ಬಿಡದೆ ಕೆಲವರು ಒತ್ತವರಿ ಮಾಡಿಕೊಂಡಿದ್ದಾರೆ. ಸತ್ತ ವ್ಯಕ್ತಿಗಳನ್ನು ಹೂತಿರುವ ಗೋರಿಗಳನ್ನು ಬಿಡದೇ ಮಣ್ಣನ್ನು ಅಗೆದು ಪಿಲ್ಟರ್ ಮರಳು ತಯಾರಿಕೆಗೆ ಕಬಳಿಸುತ್ತಿರುವ ಕಾರಣ ಸ್ಮಶಾಸನಕ್ಕೆ ಕುತ್ತು ಬಂದಿದೆ ಎಂದು ತಹಸೀಲ್ದಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಪಂ ಸದಸ್ಯನ ಕೃತ್ಯ: ಗ್ರಾಪಂ ಸದಸ್ಯನೊಬ್ಬ ರಾಜಕಾರಣದ ಕುಮ್ಮಾಕಿನಿಂದ ಫಿಲ್ಟರ್ ಮರಳುಗಾರಿಕೆಯಲ್ಲಿ ತೊಡಗಿ ಸ್ಮಶಾನ ಭೂಮಿ ಅಲ್ಲದೇ ಅಂತರ್ಜಲವೃದ್ಧಿಗಾಗಿ ತೊಡಗಿರುವ ಚೆಕ್ ಡ್ಯಾಂನ್ನು ನಾಶ ಮಾಡುತ್ತಿದ್ದಾರೆ. ಇದರಲ್ಲಿನ ನೀರನ್ನು ಬಳಿಸಿ ಫಿಲ್ಟರ್ ಮರಳು ತಯಾರಿಕೆಗೆ ಬಳಿಸುತ್ತಿದ್ದಾರೆ. ಚೆಕ್ ಡ್ಯಾಂ ನಾಶದಿಂದ ಅಂತರ್ಜಲಕ್ಕೆ ಕಂಟಕ ಬಂದಿದ್ದು, ಜಾನುವಾರುಗಳಿಗೆ ನೀರಿಲ್ಲದಂತಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ದಲಿತ ಜಾಗೃತಿ ಸಮಿತಿ ತಕ್ಷಣ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ದೂರು ನೀಡಿ ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.