ವಿವಾಹಿತೆ ಆತ್ಮಹತ್ಯೆ ಯತ್ನ
ಮಾಗಡಿ: ಜೀವನದಲ್ಲಿ ಜಿಗುಪ್ಸೆ ಹೊಂದಿ ವಿವಾಹಿತೆಯೊಬ್ಬಳು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಾಗಡಿ ತಾಲೂಕಿನ ಹಳೇ ಮಸೀದಿ ಮೊಹಲ್ಲಾ ಬಳಿ ಶನಿವಾರ ಸಂಜೆ ನಡೆದಿದೆ. ಶಹಿದ್ ಖಲಿಂ ಎಂಬುವರ ಪತ್ನಿ ಶಾಹೀದ್ (30) ಆತ್ಮಹತ್ಯೆಗೆ ಯತ್ನಿಸಿರುವ ದುರ್ದೈವಿ. ಇವರಿಗೆ ಮೂರು ಮಂದಿ ಮಕ್ಕಳಿದ್ದಾರೆ ಎನ್ನಲಾಗಿದೆ. ಶಾಹೀದ್ಗೆ ಮೈ ಸುಟ್ಟ ಗಾಯವಾಗಿದ್ದು, ಗಾಯಾಳುವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಿರುವುದಾಗಿ ಡಾ. ಆಶಾ ತಿಳಿಸಿದ್ದಾರೆ.
ಇಂದು ಕನ್ನಡ ರಾಜ್ಯೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ದರ್ಗಾಪುರದ ಶ್ರೀ ಕನ್ನಡ ಜ್ಯೋತಿ ಯುವಕರ ಸಂಘದ ನೇತೃತ್ವದಲ್ಲಿ 58ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನ.24ರ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ವೈಗದ ಸೈಕಲ್ ಸ್ಪರ್ಧೆ, ಹಗ್ಗಜಗ್ಗಾಟ, ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ನಗರಸಭಾ ಸದಸ್ಯ ಕೆ.ಬಿ.ಮುದ್ದಪ್ಪ ಧ್ವಜಾರೋಹಣ ಮಾಡಲಿದ್ದು, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್ ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅಧ್ಯಕ್ಷತೆ ವಹಿಸುವರು. ನಗರಸಭಾ ಸದಸ್ಯರಾದ ತ.ನ.ಪ್ರಭುದೇವ್, ಎಂ.ಮಲ್ಲೇಶ್, ಪಿಎಸೈ ಎಂ.ಎಲ್.ಗಿರೀಶ್, ಮುಖಂಡರಾದ ಶ್ರೀರಾಂ, ಅಶ್ವತ್ಥ್ ಮತ್ತಿತರರು ಭಾಗವಹಿಸಲಿದ್ದಾರೆ.
ಬಾಬಯ್ಯ ಉತ್ಸವ ಇಂದು
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ನ.24ರ ಭಾನುವಾರ ಮೊಹರಂ ಹಬ್ಬದ ಅಂಗವಾಗಿ ಬಾಬಯ್ಯ ಉತ್ಸವ ನಡೆಯಲಿದೆ. ಗ್ರಾಮದ ಸರ್ವಧರ್ಮಿಯರು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಸರ್ವ ಧರ್ಮ ಸಮನ್ವಯದ ಮಹತ್ವದ ಉದ್ದೇಶದಿಂದ ಈ ಆಚರಣೆ ನಡೆದುಕೊಂಡು ಬರುತ್ತಿದೆ. ವಿವಿಧ ಬಗೆಯ ವೇಷ ಭೂಷಣಗಳೊಂದಿಗೆ ಬಾಬಯ್ಯ ಮೆರವಣಿಗೆ ನಡೆಯಲಿದೆಯ. ಉತ್ಸವ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

