ಬೆಂಗಳೂರು ಗ್ರಾಮಾಂತರ

ಹಂಚೀಕುಪ್ಪೆ ಗ್ರಾಪಂ ನೂತನ ಅಧ್ಯಕ್ಷೆ ಜಲಜಾ ಬಸವರಾಜು

Published On :

ಕ.ಪ್ರ.ವಾರ್ತೆ ಮಾಗಡಿ ನ.25
ಹಂಚೀಕುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಜಲಜಾ ಬಸವರಾಜು ಅವಿರೋಧವಾಗಿ ಆಯ್ಕೆಯಾದರು.  ನೂತನ ಅಧ್ಯಕ್ಷೆ ಜಲಜಾ ಬಸವರಾಜು ಮಾತನಾಡಿ ಎಲ್ಲಾ ಸದಸ್ಯರು ಒಮ್ಮತದಿಂದ ನನ್ನನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಮೊದಲು ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹದಿಂದ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಈಗಾಗಲೇ ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯವಿರುವಡೆ ಕೊಳವೆ ಬಾವಿ ಕೊರೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಜನರ ಹಿತವೇ ನಮ್ಮ ಪಂಚಾಯ್ತಿ ಧ್ಯೇಯವಾಗಿದೆ. ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರ ಸಹಕಾರದಿಂದ ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಅಭಿನಂದನೆ: ಜಿಲ್ಲಾ ಪಂಚಾಯ್ತಿ ಸದಸ್ಯ ವಿಜಯಕುಮಾರ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ತಾ.ಪಂ. ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಕರಲಮಂಗಲದ ರಂಗನಾಥ್, ನರಸೇಗೌಡ, ಪುರಸಭಾ ಸದಸ್ಯ ಶಿವಕುಮಾರ್, ಮೂರ್ತಿ, ರಂಗನಾಥ, ನಾಗರಾಜು ಇತರರು ಹಂಚೀಕುಪ್ಪೆ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆ ಜಲಜಾ  ಬಸವರಾಜು ಅವರಿಗೆ ಹಾರ ಹಾಕಿ ಅಭಿನಂದಿಸಿದರು.
ವಿಜಯೋತ್ಸವ: ಹಂಚೀಕುಪ್ಪೆ ಗ್ರಾ.ಪಂ.ಗೆ ನೂತನ ಅಧ್ಯಕ್ಷೆಯಾಗಿ ಜಲಜಾ ಬಸವರಾಜು  ಅಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಮುಖಂಡರು, ಪಂಚಾಯ್ತಿ ಸದಸ್ಯರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನಂತರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯಪುರದ ನಾಯ್ಡುಗೆ ಸನ್ಮಾನ
ದೇವನಹಳ್ಳಿ: ಇಲ್ಲಿನ ಶ್ರೀ ನಗರೇಶ್ವರ ಸ್ವಾಮಿ ಭಕ್ತ ಮಂಡಳಿಯವರು ನಾಲ್ಕನೆಯ ಕಾರ್ತೀಕ ಸೋಮವಾರ ಅಂಗವಾಗಿ ಇಲ್ಲಿನ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಗಳು ಆಯೋಜಿಸಿದ್ದು ಸಂಜೆ ವಿಜಯಪುರದ ಎಂ.ವಿ.ನಾಯ್ಡು ಸಂಗಡಿಗರಿಂದ ವಚನಾಮೃತ ಗಾಯನ ಸಮಾರಂಭ ಆಯೋಜಿಸಿದ್ದರು.  ಮುಖ್ಯ ಅತಿಥಿಗಳಾಗಿ ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್ ಆಗಮಿಸಿ ಕಾರ್ತೀಕ ಮಾಸದ ಪ್ರತಿ ಸೋಮವಾರ ಭಕ್ತ ಮಂಡಳಿಯವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭಿನಂದನೀಯ. ಅಲ್ಲದೆ ಈ ದೇವಾಲಯದ ರಾಜಗೋಪುರ ಕಾರ್ಯ ಶೇಕಡ 90ರಷ್ಟು ಮುಗಿದಿದ್ದು ಉಳಿದ ಕಾರ್ಯವನ್ನು ಶೀಘ್ರದಲ್ಲೆಯೇ ಪೂರ್ಣಗೊಳಿಸಲಾಗುವುದು ಎಂದರಲ್ಲದೆ ಹಿರಿಯ ಗಾಯಕರಾದ ವಿ.ಎಂ.ನಾಯ್ಡು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ವೈ.ಸಿ.ಕೃಪಾಕರ್ ವಹಿಸಿದ್ದರು. ರತ್ನಮ್ಮ ಗಾರೆ ರವಿಕುಮಾರ್,  ನಗರ್ತ ಸಂಘದ ಮಾಜಿ ಅಧ್ಯಕ್ಷ ಸಿ.ಆರ್.ವೀರಭದ್ರಯ್ಯ, ಎ.ಸಿ.ಸಂಪನ್ನಪ್ಪ, ದೇ.ಸೂ.ನಾಗರಾಜ್ ಉಪಸ್ಥಿತರಿದ್ದರು.  ಪಿ.ವಿಶ್ವನಾಥ್ ಸ್ವಾಗತ ಕೋರಿದರು, ಎಸ್.ರಮೇಶ್ ವಂದನೆ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.