ಬೆಂಗಳೂರು ಗ್ರಾಮಾಂತರ

ರಾಜಕಾರಣಿಗೆ ತಾಳ್ಮೆ ಅಗತ್ಯ: ರಾಜ್ಯಪಾಲ

Published On :

ಆನೇಕಲ್ಲು: ಮುಂದಾಲೋಚನೆ, ನಾಲಿಗೆ ಮೇಲಿನ ಹಿಡಿತ, ಶಾಂತ ರೀತಿಯ ಪ್ರತಿಪಾದನೆ ರಾಜಕಾರಣಿಯ ಪ್ರಮುಖ ಗುಣ ಲಕ್ಷಣಗಳು. ಅದನ್ನು ಮರೆತು ತನ್ನ ಸ್ಥಾನ ಹಾಗೂ ನಾಡಿನ ಕೀರ್ತಿಗೆ ಅಪಚಾರ ತರುವ ಕೆಲಸ ಪ್ರಬುದ್ಧ ರಾಜಕಾರಣಿ ಮಾಡಬಾರದು ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ತಿಳಿಸಿದರು. ಬೆಳಗಾವಿ ಅಧಿವೇಶನ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಮುಖ್ಯ ಮಂತ್ರಿಯಾಗಿ ಯಡಿಯೂರಪ್ಪ ಸಂಯಮ, ತಾಳ್ಮೆಯನ್ನು ರೂಢಿಸಿಕೊಳ್ಳಬೇಕು. ಸದನದಲ್ಲಿ ವಿಷಯಗಳ ಕೂಲಂಕಷ ಚರ್ಚೆಯಾಗಬೇಕು. ಜನಪರ ಯೋಜನೆಗಳ ಜಾರಿಗಾಗಿಯೇ ಶಾಸಕಾಂಗ ಸಭೆ ನಡೆಯುವುದು ಎಂದರು.
ಎಂಇಎಸ್ ನಡೆ ಸರಿಯಲ್ಲ: ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು ಎಂಇಎಸ್ ಶಾಸಕರು ಸಭಾ ತ್ಯಾಗ ಮಾಡಿ ಶಾಸಕರ ಸಭೆಗೆ ಅಗೌರವ ತಂದಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾಷೆಯ ಅಂದಾಭಿಮಾನಕ್ಕಾಗಿ ಕ್ಷೇತ್ರದ ಜನರ ಹಿತರಕ್ಷಣೆ ಬಲಿಕೊಡಬಾರದು. ಸ್ನೇಹ ಸೌಹಾರ್ಧತೆಯನ್ನು ಮೈಗೂಡಿಸಿಕೊಂಡು ದೇಶದ ಐಕ್ಯತೆ ಸಾಧಿಸಬೇಕಾದ ಜವಾಬ್ದಾರಿಯನ್ನು ಎಲ್ಲ ಚುನಾಯಿತ ಪ್ರತಿನಿಧಿಗಳೂ ಪಾಲಿಸಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.