ಮನುಷ್ಯನಿಗೆ ಪರಿಸರ ಕಾಳಜಿ ಬೇಕು
ದೊಡ್ಡಬಳ್ಳಾಪುರ: ಬದಲಾಗುತ್ತಿರುವ ಕಾಲಮಾನಕ್ಕೆ ಪೂರಕವಾಗಿ ಪರಿಸರವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಾಗತಿಕವಾಗಿ ಮನುಷ್ಯ ಸಂಸ್ಕೃತಿ ಉಳಿಯಬೇಕಾದರೆ ಪರಿಸರ ನೈಜ ಕಾಳಜಿ ಮರೆಯಾಗಬಾರದು ಎಂದು ಪರಿಸರವಾದಿ ಕೆ.ಗುರುದೇವ್ ಹೇಳಿದರು.
ಇಲ್ಲಿನ ಕೊಂಗಾಡಿಯಪ್ಪ ಪ್ರೌಢಶಾಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತಿನ ನೇತೃತ್ವದಲ್ಲಿ ನಡೆದ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ ಕಾರ್ಯಕ್ರಮದಲ್ಲಿ ಅವರು ಪರಿಸರದ ಆತಂಕಗಳು ವಿಚಾರದ ಕುರಿತು ಮಾಹಿತಿ ನೀಡಿದರು.
ತಿನ್ನುವ ಆಹಾರ, ಸೇವಿಸುವ ಗಾಳಿ, ಕುಡಿಯುನ ನೀರು ವಿಷವಾಗಿ ಪರಿಣಮಿಸುತ್ತಿರುವಾಗ ಮನುಷ್ಯ ಜೀವನ ದುಸ್ತರವಾಗುತ್ತದೆ. ಮಾಲಿನ್ಯಗಳು ಮಿತಿಮೀರಿರುವ ಪರಿಣಾಮ ಜಗತ್ತಿನಲ್ಲಿ ಹಲವು ಬಗೆಯ ವಿಸ್ಮಯಗಳು ಗತಿಸುತ್ತಿವೆ. ಮನುಷ್ಯರಲ್ಲಿ ರಕ್ಕಸ ಪ್ರವೃತ್ತಿ ಬೆಳೆಯುತ್ತಿದೆ. ಆಕಾರ ವಿಕಾರವಾಗುತ್ತಿದೆ. ಚಿಂತನೆಗಳು ದುರ್ಬಲವಾಗುತ್ತಿವೆ. ಮಾನಸಿಕವಾಗಿ ಭ್ರಷ್ಟರಾಗುತ್ತಿದ್ದೇವೆ ಎಂದ ಅವರು, ಪರಿಸರ ಇದ್ದ ಹಾಗೆ ವ್ಯಕ್ತಿತ್ವ ಇರುತ್ತದೆ ಎಂದರು.
ಜನಪರ ನಮ್ಮ ಜೀವನಾಡಿ ಎಂಬ ವಿಚಾರದ ಕುರಿತು ಮಾತನಾಡಿದ ಕೊಂಗಾಡಿಯಪ್ಪ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ, ಜನಪದ ನೈಜ ಸಂಸ್ಕೃತಿಯ ಪ್ರತಿರೂಪ. ಮನುಷ್ಯನ ಪರಿಶ್ರಮ, ಬದುಕು, ಆಲೋಚನೆಗಳು, ಭವಿಷ್ಯ, ಉದ್ದೇಶ, ಮಾನವೀಯ ಸಂಬಂಧಗಳ ಕುರಿತು ಜನಪದರು ಎಳೆಎಳೆಯಾಗಿ ವಿಚಾರ ಲಹರಿಯನ್ನು ತೆರೆದಿಟ್ಟಿದ್ದಾರೆ ಎಂದರು.
ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಎಂ.ಚಿಕ್ಕಣ್ಣ, ಸಂಚಾಲಕ ಜಿ.ಸಿ.ಶಿವಕುಮಾರ್, ಹಿರಿಯ ಅಧ್ಯಾಪಕರಾದ ಎಚ್.ರಾಮಕೃಷ್ಣ, ಎ.ಜಯರಾಂ, ಯುವಕವಿ ಸಂತೋಷ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

