ಮಾಗಡಿಯಲ್ಲಿ ಬೃಹತ್ ದನಗಳ ಜಾತ್ರೆ
ತಿರುಮಲೆ ಶ್ರೀನಿವಾಸ್
ಮಾಗಡಿ: ತಿರುಮಲೆ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ತವರೂರು ಮಾಗಡಿಯಲ್ಲಿ ಸುಪ್ರಸಿದ್ಧ ಬೃಹತ್ ದನಗಳ ಜಾತ್ರೆ ನಡೆಯುತ್ತಿದೆ.
ಮಾಂಡವ್ಯ ಕ್ಷೇತ್ರದಿಂದ ಪ್ರಖ್ಯಾತಿ ಗಳಿಸಿರುವ ತಿರುಮಲೆ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ದನಗಳ ಬೃಹತ್ ಜಾತ್ರೆ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ.
ಈ ಬೃಹತ್ ದನಗಳ ಜಾತ್ರೆಗೆ ಈಗಾಗಲೇ ರಾಜ್ಯದ ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ, ಮದ್ದೂರು, ರಾಮನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಅನೇಕಲ್, ಕೋಲಾರ, ಶಿರಾ,ಪಾವಗಡ, ಮಧಗಿರಿ ಹಾಗೂ ನೆರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ರಾಸುಗಳನ್ನು ಖರೀದಿಸಲು ರೈತರು ತಂಡೋಪ ತಂಡವಾಗಿ ಬರುತ್ತಾರೆ. ರಾಸುಗಳು ವ್ಯಾಪಾರ ಭರ್ಜರಿಯಾಗಿಯೇ ನಡೆದಿದ್ದು, ಸಾಮಾನ್ಯವಾಗಿ ಜಾತ್ರೆಗಳಲ್ಲಿ ಹಳ್ಳಿಗಾಡಿನ ಹಳ್ಳೀಕಾರ್ ಮತ್ತು ಅಮೃತ್ ಮಹಲ್ ಜಾತಿಯ ಎತ್ತುಗಳು ಹೆಚ್ಚಾಗಿ ಕಾಣುತ್ತೇವೆ. ಜೋಡಿ ಎತ್ತುಗಳಿಗೆ ಅಂದಾಜು 20 ಸಾವಿರ ರು. ನಿಂದ 2 ಲಕ್ಷದ ವರೆಗೂ ಮಾರಾಟವಾಗುತ್ತಿರುವುದು ಮತ್ತೊಂದು ವಿಶೇಷ. ಇದು ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಜಾತ್ರೆಯಾಗಿದೆ.
ಖರೀದಿ ಭರಾಟೆ: ಆಧುನಿಕ ಯುಗದಲ್ಲಿ ದೇಶಿಯ ತಳಿಗಳು ಕಣ್ಮರೆಯಾಗುತ್ತಿರುವ ದಿನಗಳಲ್ಲಿಯೂ ಮಾಗಡಿಯಲ್ಲಿ ದನಗಳ ಬೃಹತ್ ಜಾತ್ರೆ ನಡೆಯುತ್ತಿದ್ದು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಕಳೆದ 50 ವರ್ಷಗಳ ಹಿಂದೆ 40 ದಿನಗಳ ಕಾಲ ರಾಸುಗಳ ಜಾತ್ರೆ ನಡೆಯುತ್ತಿತ್ತು. ಇದೀಗ ಕೇವಲ 4 ರಿಂದ 5 ದಿನಗಳಿಗೆ ಬಂದು ನಿಂತಿದೆ.
ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಪ್ರೀತಿಯಿಂದ ಸಾಕಿರುವ ರಾಸುಗಳು ಈ ಜಾತ್ರೆಯಲ್ಲಿ ಮಾರಾಟಕ್ಕಿವೆ. ಶ್ರೀಗಳು ಕಟ್ಟಿರುವ ಈ ಜೋಡಿ ಎತ್ತುಗಳು 2 ಲಕ್ಷ ರು. ಬೆಲೆಯದ್ದಾಗಿದೆ. ಈ ಜೋಡಿ ಎತ್ತುಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಬೆಲೆಗಳ ಭರಾಟೆ: ಜಾತ್ರೆಯಲ್ಲಿ ಉತ್ತಮ ರಾಸುಗಳು ಸೇರುತ್ತವೆ. ವ್ಯಾಪಾರವೂ ಭರ್ಜರಿಯಾಗಿ ನಡೆಯತ್ತದೆ. ಉತ್ತಮ ಮೈಕಟ್ಟಿನ ಹಳ್ಳಿಕಾರ, ಅಮೃತ್ ಮಹಲ್ ಎತ್ತುಗಳಿಗೆ ಭಾರಿ ಬೇಡಿಕೆಯಿದ್ದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.
ಸ್ಥಳದ ಅಭಾವ: ದೇವಸ್ಥಾನದ ಸುತ್ತಮುತ್ತ ಕಾಂಕ್ರಿಟ್ ಮನೆಗಳೂ ಬಾನೆತ್ತೇರಕ್ಕೆ ಎದ್ದಿರುವುದರಿಂದ ದನಗಳ ಜಾತ್ರೆಗೆ ಸ್ಥಳದ ಕೊರತೆಯನ್ನು ರೈತರು ಎದುರಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

