ಬೆಂಗಳೂರು ಗ್ರಾಮಾಂತರ

ಜ.31ರ ನಂತರ 1,13,274 ಹೊಸ ಮತದಾರರ ಸೇರ್ಪಡೆ

Published On :

2014ರ ಜನಗಣತಿ ಪ್ರಕಾರ ಕ್ಷೇತ್ರದಲ್ಲಿ ಒಟ್ಟಾರೆ ಜನಸಂಖ್ಯೆ 29,57,475 ಆಗಿದೆ.


ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜನವರಿ 31ರ ನಂತರ 1,13,274 ಹೊಸ ಮತದಾರರ ಸೇರ್ಪಡೆಯಾಗಿದೆ. ಇದರೊಂದಿಗೆ ಕ್ಷೇತ್ರದ ಒಟ್ಟಾರೆ ಮತದಾರರ ಸಂಖ್ಯೆ 22 ಲಕ್ಷವನ್ನು ಸಮೀಪಿಸಿದೆ. ಈ ಮುನ್ನ ಕ್ಷೇತ್ರದಲ್ಲಿ 10,76,000 ಪುರುಷರು, 10,00,666 ಮಹಿಳೆಯರು, 219 ಇತರರು ಸೇರಿದಂತೆ 20,76,885 ಮತದಾರರಿದ್ದರು. ಇದೀಗ ಅಂತಿಮವಾಗಿ ಮತದಾರರ ಪಟ್ಟಿಯಲ್ಲಿ 11,35,666 ಪುರುಷರು, 10,54,232 ಮಹಿಳೆಯರು, 261 ಇತರರು ಸೇರಿದಂತೆ ಒಟ್ಟಾರೆ ಮತದಾರರ ಸಂಖ್ಯೆ 21,90,159 ಆಗಿದೆ.


2013ರ ಆಗಸ್ಟ್‌ನಲ್ಲಿ ನಡೆದಿದ್ದ ಈ ಕ್ಷೇತ್ರದ ಉಪ ಚುನಾವಣೆಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ 2,28,142 ಮತದಾರರು ಹೆಚ್ಚಳವಾಗಿದ್ದಾರೆ. 2014ರ ಜನಗಣತಿ ಪ್ರಕಾರ ಕ್ಷೇತ್ರದಲ್ಲಿ ಒಟ್ಟಾರೆ ಜನಸಂಖ್ಯೆ 29,57,475 ಆಗಿದೆ. ಒಟ್ಟು ಜನ ಸಂಖ್ಯೆಯಲ್ಲಿ ಶೇಕಡ 74.05ರಷ್ಟು ಮತದಾರರಿರುವುದು ವಿಶೇಷ.


ಕ್ಷೇತ್ರವಾರು ಹೆಚ್ಚಳ ವಿವರ...


ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 6107, ರಾಮನಗರದಲ್ಲಿ 8347, ಕನಕಪುರದಲ್ಲಿ 2087, ಚನ್ನಪಟ್ಟಣದಲ್ಲಿ 5099, ಕುಣಿಗಲ್  ಕ್ಷೇತ್ರದಲ್ಲಿ 3442 ಮತದಾರರು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಹೊಸ ಸೇರ್ಪಡೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳದ್ದೇ ಸಿಂಹಪಾಲು. ರಾಜರಾಜೇಶ್ವರಿ ನಗರದಲ್ಲಿ 36650, ಬೆಂಗಳೂರು ದಕ್ಷಿಣದಲ್ಲಿ 34078, ಆನೇಕಲ್‌ನಲ್ಲಿ 16471 ಹೊಸ ಮತದಾರರು ನೊಂದಾಯಿಸಿಕೊಂಡಿದ್ದಾರೆ.


 ಕ್ಷೇತ್ರವಾರು ಮತದಾರರು


ಪ್ರಸ್ತುತ ಸಿದ್ಧಗೊಂಡಿರುವ ಅಂತಿಮ ಪಟ್ಟಿ ಪ್ರಕಾರ  ಮಾಗಡಿ 1,07,340 ಪುರುಷರು, 1,02,529 ಮಹಿಳೆಯರು, 29 ಇತರರು ಸಹಿತ  2,09,938, ರಾಮನಗರದಲ್ಲಿ ಪುರುಷರು 96,213, ಮಹಿಳೆಯರು 95,031, ಇತರರು 29 ಸೇರಿದಂತೆ 1,91,273 ಮತದಾರರಿದ್ದಾರೆ.  
ಟಿ  ಕನಕಪುರದಲ್ಲಿ ಪುರುಷರು 1,07,874, ಮಹಿಳೆಯರು 1,07,456, ಇತರರು 16 ಒಳಗೊಂಡಂತೆ 2,15,346, ಚನ್ನಪಟ್ಟಣದಲ್ಲಿ ಪುರುಷರು 1,02,066, ಮಹಿಳೆಯರು 1,06,414, ಇತರರು 5 ಸೇರಿದಂತೆ ಒಟ್ಟು 2,08,485 ಮತದಾರರು ಪಟ್ಟಿಯಲ್ಲಿದ್ದಾರೆ.  
ಟಿ  ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 89,544 ಪುರುಷರು, 87,674 ಮಹಿಳೆಯರು, 16 ಇತರರು, ಒಟ್ಟು 1,77,234, ರಾಜರಾಜೇಶ್ವರಿ ನಗರದಲ್ಲಿ ಪುರುಷರು 2,03,506, ಮಹಿಳೆಯರು 1,82,958, ಇತರರು 44, ಒಟ್ಟು 3,86,535 ಮತದಾರರ ಹೆಸರು ಪಟ್ಟಿಯಲ್ಲಿದೆ.
ಟಿ  ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 5 ಲಕ್ಷದ ಅಂಚಿಗೆ ಸಮೀಪಿಸಿದೆ. ಅಲ್ಲಿ ಪುರುಷರು 2,66,078, ಮಹಿಳೆಯರು 2,29,439, ಇತರರು 81, ಒಟ್ಟು 4,95,598  ಹಾಗೂ  ಆನೇಕಲ್ ಕ್ಷೇತ್ರದಲ್ಲಿ ಪುರುಷರು 1,63,145, ಮಹಿಳೆಯರು 1,42,654, ಇತರರು 51 ಸೇರಿದಂತೆ ಒಟ್ಟು ಮತದಾರ ಸಂಖ್ಯೆ 3,05,750 ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.