ಬೆಂಗಳೂರು ಗ್ರಾಮಾಂತರ

ಹಣ, ವಸ್ತು ರೂಪದಲ್ಲಿ ಆಮಿಷ ಒಡ್ಡುವ ವ್ಯಕ್ತಿಗೆ ಜೈಲು

Published On :

ರಾಮನಗರ: ನಿರ್ದಿಷ್ಟ ವ್ಯಕ್ತಿಗೆ ಮತ ನೀಡುವಂತೆ ಮತದಾರರ ಮನವೊಲಿಸುವ ಸಲುವಾಗಿ ಹಣ ಅಥವಾ ವಸ್ತು ರೂಪದಲ್ಲಿ ಆಮಿಷ ಒಡ್ಡುವ ಅಥವಾ ತೆಗೆದುಕೊಳ್ಳುವ ವ್ಯಕ್ತಿಯು ಭಾರತ ದಂಡ ಸಂಹಿತೆ 171ಬಿ ಪ್ರಕಾರ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ, ಜುಲ್ಮಾನೆ ಅಥವಾ ಎರಡರಿಂದಲೂ ದಂಡಿತನಾಗುತ್ತಾನೆ.  ಇದಲ್ಲದೆ, ಅಭ್ಯರ್ಥಿಗೆ, ಮತದಾರನಿಗೆ ಅಥವಾ ಇನ್ನಿತರ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಗಾಯಪಡಿಸಿ, ಬೆದರಿಕೆ ಒಡ್ಡುವ ವ್ಯಕ್ತಿಯೂ ಕೂಡ ಭಾರತ ದಂಡ ಸಂಹಿತೆ 171ಸಿ ಪ್ರಕಾರ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆಗೊಳಪಡಿಸಬಹುದಾಗಿದೆ. ಲಂಚ ಕೊಡುವವರು ಹಾಗೂ ಪಡೆಯುವವರ ವಿರುದ್ಧ ಮತ್ತು ಮತದಾರರಲ್ಲಿ ಭೀತಿ ಮೂಡಿಸುವವರ ವಿರುದ್ಧ ಕ್ರಮವನ್ನು ಕೈಗೊಳ್ಳಲು ಚುನಾವಣಾ ಆಯೋಗವು ಕ್ಷಿಪ್ರ ಸಂಚಾರಿ ದಳಗಳನ್ನು ರಚಿಸಿದೆ. ಮತದಾರರು ಲಂಚದ ಆಮಿಷಕ್ಕೊಳಗಾಗದೆ, ಯಾರಾದರೂ ಲಂಚ ನೀಡಲು ಬಂದರೆ ಅಥವಾ ಲಂಚ ನೀಡುತ್ತಿರುವುದು ಹಾಗೂ ಮತದಾರರಿಗೆ ಬೆದರಿಕೆ ಒಡ್ಡುವ ಪ್ರಕರಣಗಳು ತಿಳಿದು ಬಂದರೆ ದೂರು ನಿರ್ವಹಣಾ ಕೇಂದ್ರಕ್ಕೆ ಕರೆ ಮಾಡಬಹುದು. ದೂರು ಸ್ವೀಕರಿಸಲೆಂದೇ ಸ್ಥಾಪಿಸಿರುವ ಈ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿವೆ. ಈ ಸಂಖ್ಯೆಗಳು ಟೋಲ್ ಪ್ರೀಗಳಾಗಿದ್ದು, ಕರೆ ಮಾಡುವವರಿಗೆ ಯಾವುದೇ ವೆಚ್ಚ ತಗುಲುವುದಿಲ್ಲ. ಜಿಲ್ಲೆಯ ಕನಕಪುರದಲ್ಲಿ ದೂರು ನಿರ್ವಹಣಾ ಕೇಂದ್ರವಿದ್ದು, 080-27276615, 1800-425-3134, 080-27522442 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯಲು ಸಹಕರಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕನಕಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.