ಬೆಂಗಳೂರು ಗ್ರಾಮಾಂತರ

ಕಾಡಿಗೆ ಬೆಂಕಿ: ಲಕ್ಷಾಂತರ ರು. ನಷ್ಟ

Published On :

ಮಾಗಡಿ: ಬಿಸ್ಕೂರು ಬಳಿ  ಕಾಡಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ನೂರಾರು ಮರಗಿಡಿಗಳು, ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಹಾನಿಯಾಗಿದೆ  ಎಂದು ಬಿಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಹೇಲ್ ತಿಳಿಸಿದರು.
   ಬಿಸ್ಕೂರು ತಿಪ್ಪಸಂದ್ರ ನಡುವೆ ಇರುವ ಸುಮಾರು 400 ಎಕರೆ ಅರಣ್ಯ ಪ್ರದೇಶದ ಒಂದು ಭಾಗದಲ್ಲಿ ಸುಮಾರು 1 ಗಂಟೆಗಳ ಕಾಲ ಬೆಂಕಿ ಉರಿಯುತ್ತಿತ್ತು. ಇದನ್ನು ನಂದಿಸಲು ಸುತ್ತಮುತ್ತಲ ಗ್ರಾಮದ ಮುಖಂಡರು ಯತ್ನಿಸಿದರು.
   ಅಗ್ನಿಶಾಮಕ ದಳಕ್ಕೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಸಹ ದೂರವಾಣಿ ಮೂಲಕ ವಿಷಯ ಮುಟ್ಟಿಸಲಾಯಿತು. ಸಕಾಲಕ್ಕೆ ಅಗ್ನಿಶಾಮಕ ದಳ ಬಾರದೆ ಸಾಕಷ್ಟು ಕಾಡು ಸುಟ್ಟು ಲಕ್ಷಾಂತರ ರು. ಮೌಲ್ಯದ ಗಿಡ ಮರಗಳಉ ಹಾನಿಗೊಳಗಾದವು ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.