ದೇವಾಲಯಕ್ಕೆ ಸೇರಿದ ಭೂಮಿ ಒತ್ತುವರಿ: ಠಾಣೆಗೆ ದೂರು
ಚನ್ನಪಟ್ಟಣ: ಕೋಟೆ ಮಾರಮ್ಮನ ದೇವಾಲಯಕ್ಕೆ ಸೇರಿದ ಭೂಮಿಯನ್ನು ಮಾಜಿ ನಗರಸಭಾ ಸದಸ್ಯರು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ನಗರಸಭಾ ಪೌರಾಯುಕ್ತ ಜಗದೀಶ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಟೆ ಮಾರಮ್ಮ ದೇವಾಲಯ ಸಮಿತಿಯ ಸದಸ್ಯರು ಆಗ್ರಹ ಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿರುವ ಪೌರಾಯುಕ್ತರು, ಈ ಜಾಗವನ್ನು 1991ರ ಪುರಸಭಾ ಅಧ್ಯಕ್ಷರಾಗಿದ್ದ ಸಿ.ಕೆ.ನಾಗರಾಜು ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಕೋಟೆಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆಂದು ಮೀಸಲಿರಿಸಲಾಗಿದೆ. ಆದರೆ ಮಾಜಿ ನಗರಸಭಾ ಸದಸ್ಯ ಗೋಪಾಲಕೃಷ್ಣ ಎಂಬುವರು ಅಕ್ರಮವಾಗಿ ಕಟ್ಟಡ ಕಟ್ಟಲು ಮುಂದಾಗಿದ್ದಾರೆ ಎಂದು ಆಪಾಧಿಸಿದ್ದಾರೆ.
ಗೋಪಾಲ ಕೃಷ್ಣ ಎಂಬುವರಿಗೆ ಈ ಸ್ಥಳದಲ್ಲಿ ಕೇವಲ 16 ಗುಂಟೆ ಭೂಮಿ ಮಾತ್ರ ಇದ್ದು, ಈ ಆವರಣದಲ್ಲಿ ತಿಮ್ಮಪ್ಪ ರಾಜ ಅರಸು ಅರಮನೆ, ಕರೋಠಿ ಹಾಗೂ ಇವರಿಗೆ ಸೇರಿದ ಜಾಗವನ್ನು ಸ್ಪಷ್ಟಪಡಿಸಲಾಗಿದೆ. ದಾಖಲಾತಿ ಪ್ರಕಾರ ಇವರಿಗೆ 12523 ಚದರಡಿ ಜಾಗ ಇದ್ದು ಅಕ್ರಮವಾಗಿ 23 ಸಾವಿರ ಚದರಡಿಗೂ ಹೆಚ್ಚು ಜಾಗವನ್ನು ಒತ್ತ್ತುವರಿ ಮಾಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಲಿ ಸದಸ್ಯರು ಆರೋಪಿಸಿದರು.
ರಜಾದಿನದಲ್ಲಿ ಕೆಲಸ: ಕೋಟೆ ಮಾರಮ್ಮ ದೇವಾಲಯದ ಜಾಗವನ್ನು ಒತ್ತುವರಿ ಮಾಡಿ ಕೊಳ್ಳಲು ಮುಂದಾಗಿರುವ ಗೋಪಾಲಕೃಷ್ಣ ರಜಾದಿನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಇವರಿಗೆ ಕೂಡಲೇ ಅಕ್ರಮ ಕಟ್ಟಡ ನಿರ್ಮಾಣಕಾಮಗಾರಿ ಕೈಬಿಡುವಂತೆ ಸೂಚಿಸಬೇಕೆಂದರು.
ಸ್ಥಳಕ್ಕೆ ಭೇಟಿ: ಪೌರಾಯುಕ್ತರ ದೂರಿನ ಹಿನ್ನೆಲೆಯಲ್ಲಿ ಪುರ ಪೊಲೀಸ್ ಠಾಣೆ ಪಿಎಸ್ಐ ವಿಜಯ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ದಾಖಲೆಗಳನ್ನ ಪಡೆದುಕೊಂಡ ಅವರು ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಕೆಲಸ ನಡೆಸದಂತೆ ಸ್ಪಷ್ಟಪಡಿಸಿದರು. ನಿರ್ಮಾಣ ಮಾಡುತ್ತಿರುವ ಕಟ್ಟಡಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬ ಸಂಗತಿಯನ್ನು ಈ ಸಂದರ್ಭದಲ್ಲಿ ಪೌರಾಯುಕ್ತರು ಸ್ಪಷ್ಟಪಡಿಸಿದರು.
ಸ್ಥಳದಲ್ಲಿ ಹಾಜರಿದ್ದು ದೇವಾಲಯ ಸಮಿತಿ ಗೌರವಾಧ್ಯಕ್ಷ ಎಳವೇಗೌಡ, ಕಾರ್ಯದರ್ಶಿ ದೇವೇಗೌಡ(ಕೃಷ್ಣ), ವಿಶ್ವನಾಥ್ ಇನ್ನೂ ಮುಂತಾದವರು ಜಾಗಕ್ಕೆ ಸಂಬಂಧಿಸಿದಂತೆ ಅಳತೆ ಮಾಡಿಸಿ ಮಾರಮ್ಮ ದೇವಿಯ ಜಾತ್ರ ಮಹೋತ್ಸವಕ್ಕೆ ಸೇರಿದ ಜಾಗವನ್ನು ದೇವಾಲಯಕ್ಕೆ ಬಿಡುವಂತೆ ತಿಳಿಸಿದರು.
ಬನ್ನೇರುಘಟ್ಟ ಪಾರ್ಕಿಗೆ ರಜೆ
ಆನೇಕಲ್ಲು: ಏ.17 ಗುರುವಾರ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಚುನಾವಣಾ ಕರ್ತವ್ಯದಲ್ಲಿ ಕೆಲ ಸಿಬ್ಬಂದಿ ನಿರತರಾಗಿರುವುದರಿಂದ ಉದ್ಯಾನವ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶವಿರುವುದಿಲ್ಲ ಎಂದು ಆಡಳಿತಾಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ. ಜನ ಸಾಮಾನ್ಯರೂ ರಜೆ ಕಾರಣ ಪಾರ್ಕಿನ ಭೇಟಿ ರದ್ದು ಮಾಡಿ ಚುನಾವಣೆಯಲ್ಲಿ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.
ಮಾಯಸಂದ್ರದಲ್ಲಿ ಕರಗ ಮಹೋತ್ಸವ
ಆನೇಕಲ್ಲು: ಆನೇಕಲ್ ತಾಲೂಕಿನ ಮಾಯಸಂದ್ರದಲ್ಲಿ ಪುರಾತನ ಸಾಂಪ್ರದಾಯಿಕ ಕರಗ ಮಹೋತ್ಸವ ನಡೆಯಲಿದೆ. ಏ.13 ಭಾನುವಾರ ತಡರಾತ್ರಿ 2 ಗಂಟೆಗೆ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

