ಭಕ್ತಿ ಚಳವಳಿ ಜನರೆಡೆಗೆ ತಿರುಗಿಸಿದ್ದು ವಚನಕಾರರು: ಪ್ರೊ. ಸಿದ್ದಲಿಂಗಯ್ಯ
ಬೆಂಗಳೂರು: ಭಕ್ತಿ ಚಳವಳಿಯನ್ನು ದೇವರಿಂದ ಮನುಷ್ಯರ ಕಡೆಗೆ ತಿರುಗಿಸಿದ್ದು ವಚನಕಾರರು ಎಂದು ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಶನಿವಾರ ಶಿವರಾತ್ರೀಶ್ವರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 'ವಚನ ಚಳವಳಿಯ ಗುರಿ-ಪರ್ಯಾಯ ಸಂಸ್ಕೃತಿ' ಕುರಿತ ರಾಜ್ಯ ಮಟ್ಟದ ಚಿಂತನಾ ಸಮಾವೇಶದಲ್ಲಿ 'ಸ್ವರ್ಗ ನರಕ ಮತ್ತು ಕರ್ಮ ಸಿದ್ಧಾಂತದ ನಿರಾಕರಣೆ' ಕುರಿತು ಮಾತನಾಡಿದರು.
'ತಾನೇ ಲಿಂಗವಾದ ಬಳಿಕ ಪೂಜಿಸುವುದು ಯಾರನ್ನು?' ಎಂಬ ಮೌಲ್ಯವನ್ನು ಕೊಟ್ಟ ವಚನಕಾರರನ್ನು ಓಡಿಸಿ ಇಡೀ ದೇಶವೇ ಕಣ್ಣೀರು ಹಾಕುವಂತಾಯಿತು ಎಂದರು. 'ವೇದ, ಶಾಸ್ತ್ರ, ಆಗಮ, ಪುಣ್ಯಕ್ಷೇತ್ರಗಳ ನಿರಾಕರಣೆ' ವಿಷಯ ಕುರಿತು ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮನುಕುಲದ ವಿಮೋಚನೆಗೆ ಹೋರಾಟ ನಡೆಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತುಗಳಲ್ಲಿ ವಚನಕಾರರ ಧ್ವನಿ ಇದೆ ಎಂದು ಹೇಳಿದರು. ವೈದಿಕ ಪಠ್ಯಗಳಾದ ವೇದ ಆಗಮ ಪುರಾಣಗಳ ಬಗ್ಗೆ ದಾಸಿಮಯ್ಯನ ವಚನಗಳಲ್ಲಿ ಪ್ರತಿರೋಧ ಕಾಣುವಂತೆ ಅಂಬೇಡ್ಕರ್ ವೈದಿಕ ಪಠ್ಯಗಳ ಒಗಟುಗಳನ್ನು ತಳಸ್ಪರ್ಷಿ ಅಧ್ಯಯನದಿಂದ ಬಿಡಿಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

