ದಲಿತರಿಗೆ ಸಿಕ್ತು ದೇಗುಲ ಪ್ರವೇಶಾವಕಾಶ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ಎಮ್.ಹೊಸಹಳ್ಳಿ ಗ್ರಾಮದಲ್ಲಿ ದಲಿತರಿಗೆ ದೇಗುಲದಲ್ಲಿ ಪ್ರವೇಶಾವಕಾಶವನ್ನು ನಿರಾಕರಿಸಿ ಅಸೃಶ್ಯತೆಯನ್ನು ಆಚರಣೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯ ಪ್ರವೇಶಿಸಿದ ತಾಲೂಕು ಆಡಳಿತ ಕೊನೆಗೂ ದಲಿತರಿಗೆ ಪ್ರವೇಶವಕಾಶವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಏ.20ರಂದು ಪೊಲೀಸ್ ಸರ್ಪಗಾವಲಿನಲ್ಲಿ ದಲಿತರು ದೇಗುಲ ಪ್ರವೇಶಿಸಿ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
ಹೊಸಕೋಟೆ ತಾ.ನಂದಗುಡಿ ಹೋಬಳಿಯ ಎನ್.ಹೊಸಹಳ್ಳಿ ಗ್ರಾಮದಲ್ಲಿರುವ ಚೌಡೇಶ್ವರಮ್ಮ ದೇಗುಲದೊಳಗೆ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ದಲಿತ ಸಂಘಟನೆಯಾದ ಸಮತ ಸೈನಿಕ ದಳದ ಮುಖಂಡರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ, ಗ್ರಾಮದಲ್ಲಿ ಗುಂಪೊಂದು ದಲಿತರಿಗೆ ದೇಗುಲದ ಪ್ರವೇಶವನ್ನು ತಡೆದು ಅಸ್ಪೃಶ್ಯತೆಯನ್ನು ಆಚರಣೆ ಮಾಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಏ.8 ರಂದು ಈ ಬಗ್ಗೆ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ತಕ್ಷಣ ಗ್ರಾಮಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ವಿ.ಶಂಕರ್, ತಹಸೀಲ್ದಾರ್ ಕುಮಾರಸ್ವಾಮಿ, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ನಟರಾಜ್ ಮೊದಲಾದವರು ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ಇರುವ ಕಾರಣ ಪ್ರಕರಣ ಶಾಂತಿಯುತವಾಗಿ ಬಗೆಹರಿಸುವ ಭರವಸೆ ನೀಡಿದ್ದರು. ಎರಡು ಗುಂಪುಗಳ ನಡುವೆ ಸಭೆಗಳನ್ನು ನಡೆಸಲಾಗಿತ್ತು. ಕೆಲ ಸಭೆಗಳ ವಿಫಲ ಆಗಿದ್ದವು. ಚುನಾವಣೆ ಮುಗಿಯಲಂದು ಸುಮ್ಮನಿದ್ದ ತಾಲೂಕು ಆಡಳಿತ ಏ.20 ರಂದು ಪೊಲೀಸ್ ಸರ್ಪಗಾವಲಿನೊಂದಿಗೆ ಗ್ರಾಮದ ದೇಗುಲಕ್ಕೆ ತಹಸೀಲ್ದಾರ್ ಕುಮಾರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಹೇಮಲತಾ, ಸಿಪಿಐಗಳಾದ ರಮೇಶ್,ತಿಮ್ಮಯ್ಯ, ಅಧಿಕಾರಿಗಳ ತಂಡ ದೇಗುಲದ ಬೀಗ ತೆಗೆಯಿಸಿ ದಲಿತರನ್ನು ದೇಗುಲದೊಳಗೆ ಪ್ರವೇಶ ಮಾಡುವಂತೆ ನೋಡಿಕೊಂಡು ಪ್ರಕರಣಕ್ಕೆ ಅಂತ್ಯ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

