ಬೆಂಗಳೂರು ಗ್ರಾಮಾಂತರ

ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆಯ ಉಳಿವು

Published On :

ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಮುತ್ಯಾಲಮ್ಮ ಕೃಪಾ ಪೋಷಿತ ನಾಟಕ ಮಂಡಲಿ ನೇತೃತ್ವದಲ್ಲಿ ಶ್ರೀಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ರಾಜಾಸತ್ಯವ್ರತನ ಗರ್ವಭಂಗ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗುರುದತ್ತ ಸ್ವಾಮೀಜಿ ಮಾತನಾಡಿ, ಮಾತನಾಡಿ ರಂಗಭೂಮಿ ಇಂದು ಅನೇಕ ಆತಂಕಗಳನ್ನು ಎದುರಿಸಿಯೂ ಸಮರ್ಥವಾಗಿ ನಿಲ್ಲುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ನೈಜ ಕಲಾವಂತಿಕೆಯನ್ನು ನಾವು ನೋಡಲು ರಂಗಭೂಮಿಯಲ್ಲಿ ಮಾತ್ರ ಸಾಧ್ಯ. ಸಿನಿಮಾ ನೈಜ ಕಲೆಯ ಅನಾವರಣವಲ್ಲ. ಆದರೆ ಇಂದು ರಂಗಕರ್ಮಿಗಳ ಬದುಕು ದುಸ್ತರವಾಗಿದೆ. ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ವ್ಯವಸ್ಥೆ ಗಮನ ಹರಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಕಲಾವಿದರ ಬದಕು ದುಸ್ತರವಾಗುತ್ತಿದೆ. ಬದಲಾದ ಕಾಲಘಟ್ಟಕ್ಕೆ ಪೂರಕವಾಗಿ ಸಾಂಸ್ಕೃತಿಕ ಆಲೋಚನೆಗಳು ಬದಲಾಗುತ್ತಿವೆ. ರಂಗ ಕಲಾವಿದರ ಬೇಕು-ಬೇಡಗಳಿಗೆ ಸಮುದಾಯ ಸ್ಪಂದಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಮಾಸಾಶನ ಮತ್ತಿತರ ಸವಲತ್ತುಗಳನ್ನು ನೀಡಬೇಕು. ಹಲವು ಬಾರಿ ನೈಜ ಕಲಾವಿದರನ್ನು ನಿರ್ಲಕ್ಷಿಸುತ್ತಲೇ ಬರಲಾಗುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲಾವಂತಿಕೆ ಉಳಿಯುತ್ತದೆ ಎಂದರು.
ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಬಿ.ಹನುಮಂತರಾವ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮುತ್ಯಾಲಮ್ಮ ದೇಗುಲ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್, ನಗರಸಭಾ ಮಾಜಿ ಅಧ್ಯಕ್ಷೆ ಶಾಂತಮ್ಮ, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್, ತಾ.ಕಲಾವಿದರ ಸಂಘದ ಅಧ್ಯಕ್ಷ ರಾಮಮೂರ್ತಿ, ಕಾರ್ಯದರ್ಶಿ ಚಂದ್ರಶೇಖರ್, ಕಲಾವಿದ ಮುನಿಪಾಪಯ್ಯ, ಗ್ರಾ.ಪಂ ಉಪಾಧ್ಯಕ್ಷ ಡಿ.ಎನ್.ತಿಮ್ಮರಾಜು, ಸದಸ್ಯ ವೆಂಕಟೇಶ್ ಅಪ್ಪಿ, ಸಿದ್ಧರಾಮಣ್ಣ, ಮಂಜುನಾಥ್, ನಾಗರಾಜ್, ಗೋವಿಂದರಾಜು, ನಾಗೇಶ್, ಶಿವಣ್ಣ, ರಂಗೇಗೌಡ, ರಾಘವೇಂದ್ರಪ್ರಸಾದ್, ರಂಗಸ್ವಾಮಿ, ಬಾಬು ಮತ್ತಿತರರು ಭಾಗವಹಿಸಿದ್ದರು. ನಾಟಕ ಪ್ರದರ್ಶನ ಹರಿಕಥಾ ವಿದ್ವಾನ್ ಎಚ್.ಬೈರಪ್ಪ ಅವರ ಸವಿನೆನಪಿನಲ್ಲಿ ಶನಿಪ್ರಭಾವ ನಾಟಕ ಪ್ರದರ್ಶನ ನಡೆಯಿತು.ಟಿ.ವಿನಾಯಕ, ಕೆ.ವಿ.ಹನುಮಂತರಾಜು, ಕೆ.ವಿ.ಚಿಕ್ಕಣ್ಣ, ಗೋಪಿನಾಥ್, ಎಚ್.ಪ್ರಕಾಶ್‌ರಾವ್, ಮಂಜುನಾಥ್, ರಾಜಣ್ಣ, ಹುಚ್ಚೇಗೌಡ, ಶಿವಣ್ಣ, ರಮೇಶ್, ರಾಮಕೃಷ್ಣ, ಮುನಿರಾಜು, ಚಕ್ಕಗಂಗಯ್ಯ, ವೀರಣ್ಣ ಮತ್ತಿತರರ ಕಲಾವಿದರು ಅಭಿನಯಿಸಿದ್ದರು. ನಾಟಕವನ್ನು ಮುತ್ತೂರಿನ ಬಿ.ಹನುಮಂತರಾಜು ನಿರ್ದೇಶಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.