ಬೆಂಗಳೂರು ಗ್ರಾಮಾಂತರ

ಸಂಸತ್ತಿನಲ್ಲಿ ಮಾತನಾಡಲು ಸಾಕಷ್ಟಿದೆ: ದೇವೇಗೌಡ

Published On :

ಬೆಂಗಳೂರು: ಫಲಿತಾಂಶಕ್ಕೂ ಮುನ್ನವೇ ತೃತೀಯ ರಂಗಕ್ಕೆ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿರುವ ಕಾಂಗ್ರೆಸ್ಸಿಗೆ ಈಗ ತಪ್ಪಿನ ಅರಿವಾಗಿದೆ. ತನ್ನ ಅವನತಿಗೆ ತಾನೇ ಕಾರಣವಾಗಿದ್ದಕ್ಕೆ ಪಶ್ಚಾತಾಪ ಪಡುವ ದುರ್ಗತಿ ಬಂದಿದೆಎಂದು ಮಾಜಿ ಪ್ರಧಾನಿ ದೇವೇಗೌಡ ಲೇವಡಿ ಮಾಡಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡ ಜಯಂತ್ಯುತ್ಸವ ಹಾಗೂ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮತ್ತೊಮ್ಮೆ ಪ್ರಧಾನಿಯಾಗಲೇಬೇಕೆಂಬ ಅಪೇಕ್ಷೆ ನನಗಿಲ್ಲ. ಆದರೆ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ದೃಢವಾದ ನಂಬಿಕೆ ಇದೆ. ಮುಂದೆ ಕೇಂದ್ರದಲ್ಲಿ ಏನಾಗುತ್ತೆ ಅನ್ನುವುದೂ ಗೊತ್ತಿದೆ. ಸಂಸತ್ತಿನಲ್ಲಿ ಮುಂದೆ ಮಾತನಾಡುವ ವಿಚಾರಗಳು ಸಾಕಷ್ಟಿವೆ. ಹಿಂದೆ ಕಾಂಗ್ರೆಸ್ ಮಾಡಿದ ತಪ್ಪಿಗೆ ಈಗ ಪಶ್ಚಾತಾಪದ ಫಲವಾಗಿ ತೃತೀಯ ರಂಗಕ್ಕೆ ಬೆಂಬಲ ನೀಡುವ ಮಾತನಾಡುತ್ತಿದೆ ಎಂದು ಕುಟುಕಿದರು. ಒಕ್ಕಲಿಗ ಸಮುದಾಯ ಆರಂಭದಿಂದಲೂ ಬಡತನದಿಂದಲೇ ಬಂದಿದೆ. ಹೋರಾಟದ ಹಾದಿಯಲ್ಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ.
ಮುಂದಿನ ದಿನಗಳಲ್ಲೂ ಸಮುದಾಯವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಕೆಲಸ ಒಕ್ಕಲಿಗ ಸಂಘ ಮತ್ತು ಸಮುದಾಯದ ನಾಯಕರಿಂದ ಆಗಬೇಕಿದೆ ಎಂದರು. ಶಾಸಕ ಹಾಗೂ ಮಾಜಿ ಸಚಿವ ಚಲುವರಾಯ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಬಿ. ರಾಮಕೃಷ್ಣ ವೇದಿಕೆಯಲ್ಲಿದ್ದರು. ಹೊ. ಶ್ರೀನಿವಾಸಯ್ಯ, ರಾಜ್ಯ ಮುಕ್ತ ವಿವಿ ಕುಲಪತಿ ಡಾ. ಎಂ.ಜಿ. ಕೃಷ್ಣನ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಲಕ್ಕೇಗೌಡ ಸೇರಿದಂತೆ  ಹಲವರನ್ನು  ಸನ್ಮಾನಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.