ಬೆಂಗಳೂರು ಗ್ರಾಮಾಂತರ

ಅಧಿಕಾರಿಗಳ ವರ್ಗಾವಣೆ ಹಿಂಪಡೆಯಿರಿ

Published On :

ಚನ್ನಪಟ್ಟಣ: ರಾಜಕೀಯ ಕಾರಣಗಳಿಗೆ ಮನ್ನಣೆ ನೀಡಿ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಒಕ್ಕೂಟದ ಅಧಿಕಾರಿಗಳು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ದೇವರಾಜು ಆಗ್ರಹಿಸಿದರು.
ಪಟ್ಟಣದ ಹೊರ ವಲಯದಲ್ಲಿ ಒಕ್ಕೂಟ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ,  ಅಧಿಕಾರಿಗಳು ತಾಲೂಕಿನಲ್ಲಿ ಯಾವುದೇ ರಾಜಕಾರಣ ಮಾಡದಿದ್ದರೂ, ಕೆಲ ಮಂದಿಯ ರಾಜಕೀಯ ಪಿತೂರಿಯಿಂದ ಎತ್ತಂಗಡಿ ಮಾಡಿದ್ದು ಇದು ದುರದೃಷ್ಟಕರ. ತಾಲೂಕಿನ ದಕ್ಷ ಅಧಿಕಾರಿಗಳ ಉಳಿವಿಗಾಗಿ ನಾವು ಎಂತಹ ಹೋರಾಟಕ್ಕೂ ಸಿದ್ದವಿದ್ದೇವೆ ಎಂದರು.
ಲಿಂಗೇಶ್ ಅವಿರೋಧ ಆಯ್ಕೆ ಮಾಡಿ: ಕಳೆದ 10 ವರ್ಷಗಳಿಂದ ತಾಲೂಕಿನಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಾ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿರುವ ಎಸ್.ಲಿಂಗೇಶ್‌ಕುಮಾರ್  ಅವರನ್ನು ಈ ಬಾರಿಯ  ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳು ಅವಿರೋಧ  ಆಯ್ಕೆ ಮಾಡುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಬೇಕಿದೆ ಎಂದರು.
ತಾಲೂಕಿನ 140 ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಲಿಂಗೇಶ್‌ಕುಮಾರ್ ಪರ ಇದ್ದು, ಕಾರ್ಯದರ್ಶಿಗಳಿಗೆ ಪ್ರತಿ ಲೀಟರ್‌ಗೆ 15 ಪೈಸೆ  ಹಣ ದೊರೆಯುವಂತೆ ಮಾಡಿದವರಲ್ಲಿ ಇವರು ಪ್ರಮುಖರು, ಒಕ್ಕೂಟದಲ್ಲಿ ಕಡೆಗಣನೆಗೆ ಒಳಪಟ್ಟಿದ್ದು, ಕಾರ್ಯದರ್ಶಿಗಳಿಗೆ ಗೌರವ ಯುತ ಜೀವನ ನಡೆಸುವ ಅವಕಾಶ ಕಲ್ಪಿಸಿ ಕೊಟ್ಟಿರುವ ಲಿಂಗೇಶ್‌ಕುಮಾರ್ ಅವರನ್ನು ನಾವು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಸೇವೆ ಮನವರಿಕೆಯಾಗಲಿ: ಕಾರ್ಯದರ್ಶಿ ರವೀಂದ್ರ ಮಾತನಾಡಿ ಬಮೂಲ್ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ತರುವ ಜತೆಗೆ ಹೈನೋದ್ಯಮ ಅಭಿವೃದ್ಧಿಗಾಗಿ ಅನುಕ್ಷಣ ದುಡಿಯುತ್ತಿರುವ ಲಿಂಗೇಶ್‌ಕುಮಾರ್ ರಂತಹ ಉತ್ಸಾಹಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಹಿತ ಕಾಯಲು ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ಕಾರ್ಯದರ್ಶಿಗಳು ತಮ್ಮ ಆಡಳಿತ ಮಂಡಲಿಗೆ ಲಿಂಗೇಶ್‌ಕುಮಾರ್ ಸೇವೆಯನ್ನು ಮನವರಿಕೆ ಮಾಡಿ ಕೊಟ್ಟು ಅವರಿಗೆ ಬೆಂಬಲ ದೊರಕುವಂತೆ ಮಾಡಬೇಕೆಂದು ತಿಳಿಸಿದರು.
ಹಿರಿಯ ಕಾರ್ಯದರ್ಶಿ ಹೊಂಗನೂರು ಪುಟ್ಟರಾಜು ಮಾತನಾಡಿ, ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರಾಜಕಾರಣ ನಡೆಸಿಲ್ಲ. ಎಲ್ಲಾ ಪಕ್ಷದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸಮಾನವಾಗಿ ಕಾಣುವ ಮೂಲಕ ಎಲ್ಲಾ ಸಂಘಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಇವರ ಚುನಾವಣೆಯಲ್ಲಿ ಪಕ್ಷಪಾತ ಮಾಡುವುದು ಸರಿಯಲ್ಲ ಎಂದರು.
ಸಹಕಾರ ನೀಡಿ: ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಮಾತನಾಡಿ, ಕಳೆದ10 ವರ್ಷಗಳಿಂದ ತಾಲೂಕಿನ ಹೈನೋದ್ಯಮ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಿಮ್ಮೊಂದಿಗೆ ನಿರಂತವಾಗಿ ದುಡಿಯಬೇಕು. ಈ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ
ಉದ್ದೇಶದಿಂದ ಮರು ಆಯ್ಕೆ ಬಯಸುತ್ತಿದ್ದು, ಎಲ್ಲಾ ಕಾರ್ಯದರ್ಶಿಗಳು ನನಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯದರ್ಶಿಗಳಾದ ಡೈರಿ ರೇವಣ್ಣ, ಸೋಗಾಲ ತಮ್ಮಯ್ಯ,ಬಿಳೀಗೌಡ, ಲಿಂಗೇಗೌಡ, ಗೋವಿಂದಹಳ್ಳಿ ಚಂದ್ರಶೇಖರ್ ಸೇರಿದಂತೆ 130 ಮಂದಿ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.