ಬೆಂಗಳೂರು ಗ್ರಾಮಾಂತರ

'ಅಂಗವಿಕಲರಿಗೆ ಸಹಕರಿಸುವ ಮೂಲಕ ಸಮಾಜ ಮಾನವೀಯತೆ ಮೆರೆಯಲಿ'

Published On :

ಮಾಗಡಿ: ನಾಗರಿಕ ಸಮಾಜ ಅಂಗವಿಕಲರಿಗೆ ಸಹಕರಿಸುವ ಮೂಲಕ ಮಾನವೀಯತೆ ಮೆರೆಯಬೇಕಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಇಲ್ಲಿನ ಪುರಸಭೆ ಆವರಣದಲ್ಲಿ ಪುರಸಭೆ ವತಿಯಿಂದ ಅಂಗವಿಕಲರಿಗೆ ಏರ್ಪಡಿಸಿದ್ದ ಸೌಲತ್ತು ವಿತರಣಾ  ಸಮಾರಂಭದಲ್ಲಿ ಅಂಗವಿಕಲರಿಗೆ ಮೂರು ಚಕ್ರದ ಮೋಟರ್ ಸೈಕಲ್ ವಿತರಿಸಿ ಮಾತನಾಡುತ್ತಾ ಅಂಗವಿಲಕರಿಗೆ ಇರುವ ಅನುದಾನವನ್ನು ಅಧಿಕಾರಿಗಳು ಜವಾಬ್ದಾರಿಯಿಂದ ವಿತರಿಸಲು ಅಗತ್ಯ ಕ್ರಮ ವಹಿಸಬೇಕು. ಅಂಗವಿಕಲರು ಎಂಬ ಅಸಡ್ಡೆ  ತೋರಬಾರದು ಎಂದರು.
ಇದೇ ವೇಳೆ ನಾಲ್ಕು ಮಂದಿ ಅಂಗವಿಕಲ ಪಲಾನುಭವಿಗಳಿಗೆ ಮೂರು ಚಕ್ರದ ಮೋಟರ್ ಸೈಕಲ್, ಮಹಿಳೆಯರಿಗೆ ಹೊಲಿಗೆ ಯಂತ್ರ, ಬಡವರಿಗೆ ವಾಜಿಪೇಯಿ ನಗರ ವಸತಿ ಯೋಜನೆ ಆದೇಶ ಪತ್ರವನ್ನು  ಎಚ್.ಸಿ. ಬಾಲಕೃಷ್ಣ ವಿತರಿಸಿದರು.
 ತಾ. ಪಂ.ಅಧ್ಯಕ್ಷ ಜಿ.ಕೃಷ್ಣ, ಪುರಸಭಾ ಸದಸ್ಯರಾದ ಎಸ್.ಮಹದೇವ್, ಎಂ.ಎನ್.ಮಂಜುನಾಥ್, ಗುರು, ರಘು, ನಾಗೇಂದ್ರ, ಬಸವರಾಜು, ಮಹೇಶ್, ಶಿವಕುಮಾರ್, ರಿಯಾಜ್, ನವಾಬ್, ನರಸಿಂಹಮೂರ್ತಿ, ಶಿವರುದ್ರಮ್ಮ ವಿಜಯಕುಮಾರ್, ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ, ರೆವಿನ್ಯೂ ಅಧಿಕಾರಿ ಗುರುನಾಥ್, ನಂದೀಶ್,ನರಸಿಂಹಮೂರ್ತಿ, ಮೋಹನ್,ರಾಜಣ್ಣ, ರಾಮಕೃಷ್ಣ, ನಾಗೇಂದ್ರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.