ಬೆಂಗಳೂರು ಗ್ರಾಮಾಂತರ

ಕರ್ನಾಟಕ ಸಂಗೀತ ಕ್ಷೇತ್ರ ಉಜ್ವಲಗೊಳಿಸಿದ ಕನಕ, ಪುರಂದರ, ತ್ಯಾಗರಾಜರು

Published On :

ಮಾಗಡಿ: ಕನಕ-ಪುರಂದರ-ತ್ಯಾಗರಾಜರು ಕರ್ನಾಟಕ ಸಂಗೀತ ಕ್ಷೇತ್ರವನ್ನು ಉಜ್ವಲಗೊಳಿಸಿದ್ದಾರೆ ಎಂದು ಶ್ರೀರಂಗ ಸೇವಾ ಟ್ರಸ್ಟ್  ಅಧ್ಯಕ್ಷ ಟಿ.ಎಸ್. ಸತೀಶ್ ತಿಳಿಸಿದರು.
 ಅವರು ಮಾಗಡಿ ತಾಲೂಕಿನ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ಸನ್ನಿದಿಯಲ್ಲಿ ಕನಕ-ಪುರಂದರ-ತ್ಯಾಗರಾಜರ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ತ್ರಿಮೂರ್ತಿಗಳು ರಾಮಭಕ್ತಿ ಸಾಮ್ರಾಜ್ಯವನ್ನೇ ನಿರ್ಮಿಸಿ ಸಂಗೀತ ಸುಧೆ ಗಾಯನ ಮೂಲಕ ಗಮನ ಸೆಳೆದವರು ಎಂದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಡಾ.ಪಂ.ನರಸಿಂಹಲು ವಡವಾಟಿ ಕಾರ್ಯಕ್ರಮ ಉದ್ಘಾಟಿಸಿ ಸಂಗೀತ ಪ್ರಕಾರಗಳು, ಆಚರಣೆ, ಅನುಭವವನ್ನು ಹಂಚಿಕೊಂಡರು.
  ಸಂಸದ ಡಿ.ಕೆ.ಸುರೇಶ್, ಶಾಸಕ ಸುರೇಶ್ಕುಮಾರ್, ಕನಕ-ಪುರಂದರ-ತ್ಯಾಗರಾಜರ ಕುರಿತು ಮಾತನಾಡಿದರು. ಕನಕ-ಪುರಂದರ-ತ್ಯಾಗರಾಜ ನಮನ ಪ್ರಯುಕ್ತ  ಸಂಗೀತ ಚೂಡಾಮಣಿ ಡಾ. ನಾಗವಲ್ಲಿ ನಾಗರಾಜು ಮತ್ತು ರಂಜನಿ ವಾಸುಕಿ ತಂಡದವರಿಂದ ಗಾಯನ, ವಿದ್ಯಾನ್ ಆರ್. ಮಂಜುನಾಥ್ ಅವರಿಂದ  ಸಾಕ್ಸೋಪೋನ್  ವಾದನ, ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಲಕ್ಷ್ಮೀ ನಟರಾಜು ಮತ್ತು ಕು.ಇಂದು ನಾಗರಾಜು ಅವರಿಂದ ದ್ವಂದ್ವ ಗಾಯನ  ಬೆಂಗಳೂರಿನ ರೂಪಕಲಾ ನೃತ್ಯಶಾಲೆ ಮತ್ತು ಚಿಕ್ಕಬಳ್ಳಾಪುರದ ವಂಶಿ ಫೈನ್  ಆರ್ಟ್ಸ್ ಅರವಿಂದ ಮತ್ತು  ರೂಪಶ್ರೀ ಅರವಿಂದ ನಿರ್ದೇಶನದಲ್ಲಿ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.
ನಮನ ಕಾರ್ಯಕ್ರಮದ ಅಂಗವಾಗಿ ಶ್ರೀರಂಗನಾಥಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ರಾಜ್ಯ ಸಭಾ ಸದಸ್ಯ ಗೋ.ಮಧುಸೂಧ ಸಂಗೀತ ಪ್ರೇಮಿಗಳು ಶ್ರೀರಂಗನಾಥಸ್ವಾಮಿ ಭಕ್ತರು, ಶ್ರೀರಂಗ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಟಿ.ಎಸ್. ಪ್ರಭು, ಖಜಾಂಚಿ ವೆಂಕಟೇಶ್  ಅಯ್ಯಾಂಗಾರ್, ಶ್ರೀರಂಗ, ಕೆ.ಎಸ್. ಹರೀಶ್, ಪ್ರಕಾಶ್, ನಾರಾಯಣಸ್ವಾಮಿ, ನಿಜಗುಣ, ಸುನೀಲ್, ಚಂದ್ರಶೇಖರ್ ಇತರೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.