ಬೆಂಗಳೂರು ಗ್ರಾಮಾಂತರ

ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ತರಬೇತಿ

Published On :

ಚನ್ನಪಟ್ಟಣ: ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸಂಸ್ಥಾಪಕ ದಿನದಂದು (ಫೆ.17ರಂದು)
ಬೆಂಗಳೂರಿನಲ್ಲಿ ನಡೆಯಲಿರುವ ಯುನಿಟಿ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಂಗವಾಗಿ, ಫೆ. 9 ರಂದು ಪಟ್ಟಣದ ಆಕಿಲ್ಷಾಹಿ, ಮೈದಾನದಲ್ಲಿ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಪಿಎಫ್ಐ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ತರಬೇತಿ ನಡೆಸಿದರು.
ತರಬೇತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಚಟುವಟಿಕೆ ಹಾಗೂ ಯುನಿಟಿ ಮಾರ್ಚ್ ಜಾಥ ನಡಿಗೆ ತರಬೇತಿ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಖಿಲ್ಷಾಹಿ ಮಸ್ಜಿದ್ನ ಹಿಮ್ಮಾಮ್ಗಳಾದ ಹಜರತ್ ಮೌಲನಾ ಉಬೇದುಲ್ಲಾ ನಿಜಾಮಿ, ಮಸ್ಸಿಜಿದೆ ಕುಬಾ, ದರ್ಗಾ ಹಜರತ್ ಮಹಮ್ಮದ್ ಆಖೀಲ್ ಷಾಹ ಖಾದ್ರಿ, ಕಮಿಟಿ ಮತ್ತು ನಗರಸಭೆ ಸದಸ್ಯರಾದ ಲಿಯಾಖತ್ ಅಲಿಖಾನ್
ಮತ್ತು ಜಕ್ಕಿ ಅಹಮ್ಮದ್ ಖಾನ್, ಟಿಪ್ಪು ನಗರದ ಹಿಮ್ಮಾಮ್ಗಳಾದ ಹಜರತ್ ಹಜ್ಜಿಮದ್ದೀನ್, ಮೌಲಾನ ಆಕಿಲ್ ಮತ್ತು ನಗರಸಭೆ ಮಾಜಿ ಸದಸ್ಯ ಅಜ್ಗರ್ ಅಲಿ ಮುಂತಾದ ಗಣ್ಯರು ಭಾಗವಹಿಸಿದ್ದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಮತಿನ್ಹೌದ್ದಿನ್, ತಾಲೂಕು ಅಧ್ಯಕ್ಷ ಜಾಫರ್ ಪಾಷ, ಜಿಲ್ಲಾ ಕಾರ್ಯದರ್ಶಿ ಎಜಾಜ್ ಅಹಮ್ಮದ್, ಎಸ್ಡಿಪಿಐ ಜಿಲ್ಲಾಧ್ಯಕ್ಷ ಮಹಮ್ಮದ್ ಫಾರುಖ್, ಪ್ರಧಾನ ಕಾರ್ಯದರ್ಶಿ ಫೌರೋಜ್ ಆಲಿಖಾನ್, ವಕೀಲ ಚಾಂದ್ ಪಾಷ ಕಾರ್ಯಕ್ರಮ ಆಯೋಜಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.