ಬೆಂಗಳೂರು ಗ್ರಾಮಾಂತರ

ದಲಿತ ವಿಮೋಚನಾ ಸೇನೆಯಿಂದ ಧರಣಿ

Published On :

ದೊಡ್ಡಬಳ್ಳಾಪುರ: ಬೆಂ.ಗ್ರಾ.ಜಿಲ್ಲೆಗೆ ದೊಡ್ಡಬಳ್ಳಾಪುರವನ್ನು ಕೇಂದ್ರವಾಗಿ ಘೋಷಿಸಬೇಕು ಎಂದು ನಡೆಯುತ್ತಿರುವ ನಿರಂತರ ಹೋರಾಟದಲ್ಲಿ ಫೆ.17ರ ಸೋಮವಾರ ದಲಿತ ವಿಮೋಚನಾ ಸೇನೆಯ ಬೆಂ.ಗ್ರಾ.ಜಿಲ್ಲಾ ಮತ್ತು  ತಾಲೂಕು ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ. ತಾಲೂಕು ಕಚೇರಿ ಮುಂಭಾಗ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುವ ಧರಣಿ ಪ್ರತಿಭಟನೆಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಮಾ.ಮುನಿರಾಜು, ಮುಖಂಡರಾದ ನಾರಾಯಣಸ್ವಾಮಿ, ದೊಡ್ಡಯ್ಯ, ಚನ್ನಿಗರಾಮಯ್ಯ, ಶ್ರೀನಿವಾಸ್, ಪುರುಷೋತ್ತಮ್‌ಗೌಡ, ದಯಾನಂದ್, ಕೆ.ಸಿದ್ಧರಾಜು ಸೇರಿದಂತೆ ಸೇನೆಯ ರಾಜ್ಯ, ಜಿಲ್ಲಾ ಮತ್ತು ತಾಲೂಕು ವಿವಿಧ ಸಮಿತಿಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಉಚಿತ ಹೃದ್ರೋಗ ತಪಾಸಣೆ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಟಿಎಂಸಿ ಬ್ಯಾಂಕ್) ನೇತೃತ್ವದಲ್ಲಿ ಫೆ.17ರ ಸೋಮವಾರ ಬೆಳಗ್ಗೆ 10 ಗಂಟೆಗೆ ಉಚಿತ ಹೃದ್ರೋಗ ತಪಾಸಣೆ ಶಿಬಿರ ಗಾಂಧಿನಗರದಲ್ಲಿರುವ ಬ್ಯಾಂಕಿನ ಆವರಣದಲ್ಲಿ ನಡೆಯಲಿದೆ. ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಹಕರು ಮತ್ತು ಸಾರ್ವಜನಿಕರು ಶಿಬಿರದ ಸದುಪಯೋಗಪಡೆದುಕೊಳ್ಳಬಹುದು ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

ಎಂಪಿಸಿಎಸ್‌ಗೆ ಆಯ್ಕೆ
ಹೊಸಕೋಟೆ: ತಾಲೂಕಿನ ಜಿನ್ನಾಗರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷಙರಾಗಿ ನಾಗರಾಜಪ್ಪ ಆಯ್ಕೆಯಾಗಿದ್ದಾರೆ.10 ಸ್ಥಾನಕ್ಕೆ ಕಾಂಗ್ರೆಸ್ ಮತ್ತು 1 ಸ್ಥಾನಕ್ಕೆ ಬಿಜೆಪಿ ಬೆಂಬಲಿತರು ಆಯ್ಕೆಗೊಂಡರು. ನಾಗರಾಜಪ್ಪ(ಅಧ್ಯಕ್ಷ), ಸಂಪಂಗಪ್ಪ, ಜಿ.ಎಸ್.ಮುನಿಯಪ್ಪ, ಚಂದ್ರಪ್ಪ, ಜಿ.ಸಂಪಂಗಪ್ಪ, ಜಿ.ವಿ.ರಮೇಶ್, ಜಯಮ್ಮ, ಬೆಳ್ಳಮ್ಮ, ಮುನಿರಾಜು, ರವೀಂದ್ರ, (ಕಾಂಗ್ರೆಸ್ ಬೆಂಬಲಿತರು), ಜಿ.ಎಂ.ಜಗನ್ನಾಥ್ (ಬಿಜೆಪಿ ಬೆಂಬಲಿತ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಪೂರ್ವಭಾವಿ ಸಭೆ
ರಾಮನಗರ: ಜಿಲ್ಲಾಡಳಿತದಿಂದ ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಫೆ.14ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.