ಸಮಕಾಲೀನ ತಲ್ಲಣಗಳ ಸಂವಾದಗಳಿಗೆ ವೇದಿಕ್ಛೆ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ ಫೆ.16
ಕನ್ನಡ ಮಾಧ್ಯಮದಲ್ಲೇ ಒಂದರಿಂದ ಹತ್ತರ ವರೆಗೆ ಶಿಕ್ಷಣ, ತಾಲೂಕಿನಲ್ಲಿ ಕುವೆಂಪು ಸ್ಮಾರಕ ಭವನ ನಿರ್ಮಾಣಕ್ಕೆ ಆಗ್ರಹ, ಅವ್ಯಾಹತ ಮರಳು ಗಣಿಗಾರಿಕೆಗೆ ಕಡಿವಾಣ, ಸಮಗ್ರ ನೀರಾವರಿಗೆ ಆದ್ಯತೆ ಸೇರಿದಂತೆ ಇತರ ನಿರ್ಣಯಗಳ ಹೊರೆಯೊಂದಿಗೆ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿದ್ದಿದೆ. ದಿನಪೂರ ತಾಲೂಕಿನಲ್ಲಿ ಕನ್ನಡಪರ ಚಿಂತನೆ ಮತ್ತು ಸಾಹಿತ್ಯಕ್ಷೇತ್ರ ಕುರಿತಾದ ಚರ್ಚೆ, ಸಮಕಾಲೀನ
ತಲ್ಲಣಗಳ ಸಂವಾದಗಳಿಗೆ ವೇದಿಕೆಯಾಗಿ ಕನ್ನಡ ಮನಸ್ಸುಗಳಲ್ಲಿ ಈ ನಿಟ್ಟಿನಲ್ಲಿ ಚಿಂತನೆಯ ಬೀಜ ಬಿತ್ತುವಲ್ಲಿ ಸಫಲಗೊಂಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದೊಂದಿಗೆ ವಿದ್ಯುಕ್ತವಾಗಿ ಮುಕ್ತಾಯ ಗೊಂಡಿತು.
ಕವಿ ಗೋಷ್ಠಿ, ವಿಚಾರ ಗೋಷ್ಠಿ, ಸಂವಾದ, ಬಹಿರಂಗ ಅಧಿವೇಶನಗಳ ಮೂಲಕ ತಾಲೂಕಿನ ಜ್ವಲಂತ ಸಮಸ್ಯೆಗಳು ವೈಚಾರಿಕ ಚಿಂತನೆಗಳ ಬಗ್ಗೆ ಸಮ್ಮೇಳನ ಸಾಕಷ್ಟು ಚರ್ಚೆಗೆ ಅನುವು ಮಾಡಿಕೊಟ್ಟಿತು. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೊಸ ಚಿಂತನೆಗೆ ದಾರಿಮಾಡಿ ಕೊಟ್ಟರು.
ಕನ್ನಡಕ್ಕೆ ಮಾರಕ: ಇತ್ತೀಚಿನ ದಿನಗಳಲ್ಲಿ ಕನ್ನಡ ಉದ್ದಾರಕ್ಕೆಂದು ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿರುವ ಕನ್ನಡ ಪರ ಸಂಘಟನೆಗಳು ಅಷ್ಟೇಬೇಗ ಸಾಯುತ್ತಿವೆ. ಇಂತಹ ಸಂಘಟನೆಗಳಿಂದ ನಾಡು ನುಡಿಗೆ ಯಾವುದೇ ಸೇವೆ ಸಲ್ಲಿಕೆಯಾಗುತ್ತಿಲ್ಲ, ಈ ಸಂಘಟನೆಗಳಿಗೆ ಇದರ ಮುಖಂಡರಿಗೆ ಯಾವುದೇ ಗೊತ್ತು ಗುರಿ ಇಲ್ಲವಾಗಿದ್ದು ಇಂದಿನ ಕನ್ನಡ ಸಮಸ್ಯೆಗಳಿಗೆ ಇದೇ ಪ್ರಮುಖ ಕಾರಣ ಎಂದು ತಾಲೂಕು ತೃತೀಯ ಸಾಹಿತ್ಯ ಸಮ್ಮೇಳನದ ಸರ್ನಾಧ್ಯಕ್ಷ ಗೋವಿಂದಹಳ್ಳಿ ದೇವೇಗೌಡ ವಿಷಾದಿಸಿದರು.
ಸಮಾರೋಪ ಸಮಾರಂಭದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು , ಬೇವೂರು ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕಣ್ವ ಡಯಾಗ್ನೋಸ್ಟಿಕ್ನ ಡಾ.ವೆಂಕಟಪ್ಪ, ಕನ್ನಡ ಪರ ಹೋರಾಟಗಾರ ಗಿರೀಶ್ಗೌಡ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು. ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್, ಸೂಲಗಿತ್ತಿ ನಾಗಮ್ಮ, ಸೀಬನಹಳ್ಳಿ ವೆಂಕಟೇಶ್, ಪ್ರೊ.ಚಲುವೇಗೌಡ, ರಮೇಶ್ಗೌಡ, ಪತ್ರಕರ್ತ ಮತ್ತೀಕೆರೆ ಜಯರಾಂ, ಡಾ.ಜಿ. ಮೋಹನ್, ಪಿ.ಜೆ.ಗೋವಿಂದರಾಜು, ಬಿವಿಹಳ್ಳಿ ಕೃಷ್ಣೇಗೌಡ, ಪಿ.ಜೆ.ಗೋವಿಂದರಾಜು, ಶಾರದಾ ನಾಗೇಶ್ ಮುಂತಾದವರನ್ನು ಸನ್ಮಾನಿಸಲಾಯಿತು.
ಮತ್ತೆ ನಿರ್ಣಯದ ಹೊರೆ: ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳು ಹೇಗೆ ಅನುಷ್ಠಾನ ಗೊಳ್ಳದೆ ಔಪಚಾರಿಕ ಎನಿಸುತ್ತಿವೆಯೋ ಅದೇ ರೀತಿ ತಾಲೂಕು ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಜಾರಿಯಾಗದೆ ಹಾಗೇ ಉಳಿದಿದ್ದು ಈ ಔಪಚಾರಿಕ ನಿರ್ಣಯಗಳ ಸಾಲಿಗೆ ಈ ಬಾರಿ ಹೊಸ ನಿರ್ಣಯದ ಹೊರೆ ಬಂದಿದೆ.
ಕಳೆದ ಸಮ್ಮೇಳನದಲ್ಲಿ ಮಂಡನೆಯಾದ ಯಾವುದೇ ನಿರ್ಣಯಗಳೂ ಅನುಷ್ಠಾನ ಗೊಳ್ಳದಿದ್ದು ಸಾಹಿತ್ಯ ಸಮ್ಮೇಳನದ ನಿರ್ಣಯದ ಬಗ್ಗೆ ರಾಜ್ಯ ಸರ್ಕಾರ ಉದಾಸೀನ ಧೋರಣೆ ತಳೆಯುವಂತೆ ತಾಲೂಕು ಮತ್ತು ಜಿಲ್ಲಾಡಳಿತವೂ ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

