ಭಾರತೀಯ ಧರ್ಮ ಸಂಸ್ಕೃತಿಯ ಪ್ರಚಾರವಾಗಲಿ'
ಆನೇಕಲ್ಲು: ಸನಾತನ ಹಿಂದೂ ಧರ್ಮದ ತತ್ವ ಸಿದ್ಧಾಂತಗಳು ಎಲ್ಲ ಧರ್ಮಗಳಿಗೂ ಮಾರ್ಗದರ್ಶನವಾಗಿದೆ ಎಂದು ಸಮಯಪುರಂ ಮಠದ ಶ್ರೀ ಸುರೇಶ್ವರಾನಂದ ಜೀ ತಿಳಿಸಿದ್ದಾರೆ.
ಅವರು ಬೆಂಗಳೂರಿನ ಬಾಣಸವಾಡಿಯಿಂದ ಅತ್ತಿಬೆಲೆ ಮಾರ್ಗ ತಮಿಳುನಾಡಿನ ಸಮಯ ಪುರಂ ಮಠಕ್ಕೆ ಕಾಲ್ನಡಿಗೆಯಲ್ಲಿ ಅತ್ತಿಬೆಲೆಯಲ್ಲಿ ತಂಗಿದ್ದಾಗ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿ ಪುರಾಣ, ಭಾಗವತ, ರಾಮಾಯಣ ಹಾಗೂ ಮಹಾಭಾರತದ ಪ್ರಸಂಗಗಳು ಕುಟುಂಬ ವ್ಯವಸ್ಥೆ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ಸಮಾನ ಹಂಚಿಕೆ, ರಾಜ್ಯಾಂಗ ವ್ಯವಸ್ಥೆಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿತು. ಮಹಿಳೆ ಮತ್ತು ಮಕ್ಕಳ ಬಗ್ಗೆ ಗೌರವ ಮೂಡುವಂತೆ ಮಾಡಿ ಸಾಮಾಜಿಕ ಭದ್ರತೆ ಕಲ್ಪಿಸಿಕೊಟ್ಟಿತು. ಗುರುಕುಲ ಶಿಕ್ಷಣ, ಮಾತಾಪಿತೃಗಳ ಬಗ್ಗೆ ಗೌರವ, ಜನ ಸಾಮಾನ್ಯರಿಗೆ ನೈತಿಕ ಮೌಲ್ಯ ತುಂಬುವ ಶಿಕ್ಷಣವನ್ನು ಮಠಗಳು ಹಾಗೂ ಸ್ವಾಮೀಜಿಯವರು ನಿರಂತರ ಮುಂದುವರಿಸೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಜಾತಿ ಪದ್ಧತಿ ತೊರೆದ ಆಧುನಿಕ ಶಿಕ್ಷಣ ನೀಡುವ ಕಡೆ ಮಠಗಳು ಗಮನ ಹರಿಸಬೇಕೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

