ಸ್ವಾವಲಂಬಿಗಳಾಗಿ ಬದುಕಿ: ನೀಲಿಮಾ
ಆನೇಕಲ್: ಆನೇಕಲ್ಲಿನ ಪ್ರಖ್ಯಾತ ಪ್ರವಾಸಿ ತಾಣ ಮುತ್ಯಾಲಮಡುವಿನಲ್ಲಿ ಕಾಗಜ್ ಫೌಂಡೇಷನ್ ಏರ್ಪಡಿಸಿದ್ದ ಜನ ಜಾಗೃತಿಗಾಗಿ ಓಟ ಸ್ಪಧೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ನೂರಾರು ಟೆಕ್ಕಿಗಳು ಭಾಗವಹಿಸಿದ್ದರು. ಓಟದ ಸಂದೇಶವನ್ನು ತಿಳಿಸಿದ ನೀಲಿಮಾ ನಗರ ಪ್ರದೇಶದಲ್ಲಿನ ಜನರಿಗೆ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವ ಹವ್ಯಾಸವಿದ್ದು ಅವರಿಗೊಂದು ಉತ್ತಮ ವೇದಿಕೆ ಹಾಗೂ ಸಂಘಟನೆ ಬೇಕಿದೆ. ಗ್ರಾಮೀಣ ಭಾರತದ ಪರಿಚಯ ಮತ್ತು ಅವಶ್ಯಕತೆಗಳನ್ನು ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಬೇಕಾದ ಕೌಶಲ್ಯವನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದರು. ಕಾಗಜ್ ಎನ್ಜಿಒ ಸಂಸ್ಥೆಯಾಗಿದ್ದು ಗ್ರಾಮೀಣ ಶಿಕ್ಷಣ, ಉದ್ಯೋಗ, ಬದುಕು ನಡೆಸಲು ಉದ್ಯೋಗ ಕೌಶಲ್ಯ, ತರಬೇತಿ ಮತ್ತು ಅಭಿವೃದ್ಧಿಗಾಗಿ ಸಹಕಾರ ನೀಡಲು ಬದ್ಧವಾಗಿದೆ ಎಂದರು.
ಜೋಡಿ ರಸ್ತೆ ನಿರ್ಮಿಸಲು ರು. 15 ಕೋಟಿ ಬಿಡುಗಡೆ: ಶಾಸಕ
ನೆಲಮಂಗಲ: ಪಟ್ಟಣದ ಪ್ರಮುಖ ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜೋಡಿ ರಸ್ತೆ ನಿರ್ಮಿಸಲು ರು.15 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಅವರು ಶನಿವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಶಾಸಕರು ತಾಲೂಕಿನ ಜನರು ಸುಭಿಕ್ಷೆಯಿಂದಿರಲು ಅಪರಾಧ ಪ್ರಕರಣಗಳನ್ನು ತಡೆಯಲು ಪೂರಕವಾದ
ವಾತಾವರಣವನ್ನು ನಿರ್ಮಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ವಿನಂತಿಸಿದರು. ತೆರವುಗೊಳಿಸಿರುವ ಫುಟ್ಪಾತ್ ವ್ಯಾಪಾರಿಗಳ ಅಂಗಡಿಗಳನ್ನು ಸೂಕ್ತ ಸ್ಥಳದಲ್ಲಿಡಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು. ಸಭೆಯಲ್ಲಿ ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ಹಲವಾರು ಸಮಸ್ಯೆಗಳನ್ನು ಆಲಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲಾ ಹೆಚ್ಚುವರಿ ಎಸ್ಪಿ ಅಬ್ದುಲ್ ವಹಾಬ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳನ್ನು ಜನರ ಸಂಕಷ್ಟಗಳನ್ನು ಬಗೆಹರಿಸಲು ಮುಂದಾಗಿರುವ ಪೊಲೀಸರೊಂದಿಗೆ ಸಹಕರಿಸುವಂತೆ ತಿಳಿಸಿದರಲ್ಲದೆ ಸ್ಥಳದಲ್ಲೇ ಕೆಲವು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಪುಂಡಾಟಿಕೆ, ಜೂಜು, ದಂಧೆಕೋರರು ಮತ್ತು ರೌಡಿಸಂ ನಿಯಂತ್ರಣಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಜನರು ಮತ್ತು ಪೊಲೀಸರ ನಡುವೆ ಬಾಂಧವ್ಯ ವೃದ್ಧಿಸಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಭೆಯ ಉದ್ದೇಶಗಳನ್ನು ವಿವರಿಸಿದರು. ಈ ಸಭೆಯು ಸರ್ಕಾರದ ಸಭೆಯಲ್ಲ,
ಬದಲಿಗೆ ಎಷ್ಟೋ ಮುಗ್ಧರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಭೆಯನ್ನು ಇಲ್ಲಿ ಆಯೋಜಿಸಿರುವುದಾಗಿ ಸೃಷ್ಟಪಡಿಸಿದರು.
ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ನವೀನ್ಕುಮಾರ್ ಮಾತನಾಡಿ ತಾಲೂಕಿನಲ್ಲಿ 138 ಹಳ್ಳಿಗಳಿದ್ದು 96 ಹಳ್ಳಿಗಳಲ್ಲಿ ಈಗಾಗಲೇ ಜನಸಂಪರ್ಕ ಸಭೆ ನಡೆಸಲಾಗಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದರು. ಸಭೆಯಲ್ಲಿ ತೊರೆಹೊನ್ನಸಂದ್ರದ ರೇವಯ್ಯ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜಶೇಖರಯ್ಯ, ಪುರಸಭೆ ಮಾಜಿ ಅಧ್ಯಕ್ಷ ಪಿಳ್ಳಪ್ಪ, ಮಾಜಿ ಉಪಾಧ್ಯಕ್ಷ ಎನ್.ಪಿ. ಹೇಮಂತ್ಕುಮಾರ್, ಆರ್.ಉಮಾಶಂಕರ್, ಸದಸ್ಯಎಚ್.ಜಿ.ರಾಜು, ಕೆ.ಎಂ.ಶಿವಕುಮಾರ್, ಸೀತಾರಾಮು, ಗಂಗಮ್ಮ, ಮೋಟಗಾನಹಳ್ಳಿ ಭೀಮರಾಜು, ಹಲವಾರು ಮಂದಿ ಸಮಸ್ಯೆಗಳನ್ನು ತೆರೆದಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

